fbpx
ಹೆಚ್ಚಿನ

ಈ ಹುಡುಗಿಯರು ಪೊರ್ಕಿ ಥರಾ ಆಡೋ ಹುಡುಗರನ್ಯಾಕೆ ಲವ್ ಮಾಡ್ತಾರೆ ಗೊತ್ತಾ? ಪ್ರೀತಿಸೋ ಹೆಣ್ಣುಮಕ್ಕಳು ಮಿಸ್ ಮಾಡದೇ ಓದಿ!

ಈ ಹುಡುಗಿಯರು ಪೊರ್ಕಿ ಥರಾ ಆಡೋ ಹುಡುಗರನ್ಯಾಕೆ ಲವ್ ಮಾಡ್ತಾರೆ ಗೊತ್ತಾ?

ಪ್ರೀತಿಸೋ ಹೆಣ್ಣುಮಕ್ಕಳು ಮಿಸ್ ಮಾಡದೇ ಓದಿ!

 

ಆ ವಯಸ್ಸೇ ಹಾಗೆ. `ಮೀಸೆ ಬಂದವನಿಗೆ ದೇಶ ಕಾಣೊಲ್ಲ, ಅದೇನೋ ಬಂದವಳಿಗೆ ನೆಲ ಕಾಣಲ್ಲ’ ಅನ್ನೋ ಗಾದೆ ಇದೆಯಲ್ಲಾ ಹಾಗೆ..!

 

 

ಜಗತ್ತು ಯಾರನ್ನು ಕಂಡು ಛೀ… ಥೂ… ಅನ್ನತ್ತೋ ಅಂಥವರನ್ನೇ ಈ ಹುಡುಗಿಯರು ಲವ್ ಮಾಡಿಬಿಡುತ್ತಾರೆ. `ನಮ್ ಹುಡುಗಿ ತುಂಬಾ ಡೀಸೆಂಟು, ವಿದ್ಯಾವಂತೆ… ಆದ್ರೆ ಹೋಗಿ ಹೋಗಿ ಆ ಪೊರ್ಕಿ ಹಿಂದೆ ಯಾಕೆ ಬಿದ್ಲೋ ಗೊತ್ತಿಲ್ಲ..’ ಹೀಗೆ ತಾವೇ ಹೆತ್ತ ಮಗಳ ಬಗ್ಗೆ, ಜೊತೆಗೆ ಹುಟ್ಟಿದ ಸಹೋದರಿಯರ ಬಗ್ಗೆ ಅದೆಷ್ಟು ಜನ ಮಾತಾಡೋದನ್ನ ಕೇಳಿಲ್ಲ. ಅದೆಷ್ಟೋ ಸಲ ತೀರಾ ಓದಿದ, ಒಂದೊಳ್ಳೆ ನೌಕರಿಕಯಲ್ಲಿನ ಹೆಣ್ಣುಮಕ್ಕಳು ಸಹಾ ಕೆಲಸಕ್ಕೆ ಬಾರದವನನ್ನ ನೆಚ್ಚಿಕೊಂಡುಬಿಟ್ಟಿರುತ್ತಾರೆ. ಅದರಲ್ಲೂ ಹೀಗೆ ರಾಂಗ್ ಸೆಲೆಕ್ಷನ್ ಮಾಡಿಕೊಂಡು ಇಡೀ ಜೀವಮಾನ ಹೆಣಗೋದರಲ್ಲಿ ಪೂರ್ತಿ ಓದು ಮುಗಿಸಿರದ ಕಾಲೇಜು ಯುವತಿಯರೇ ಹೆಚ್ಚು.

 

 

ಯಾಕೆ ಹೀಗೆ…?

ಅತೀ ಬುದ್ದಿವಂತರು ಅನಿಸಿಕೊಂಡ ಹುಡುಗಿಯರೂ ಕೆಲವೊಮ್ಮೆ ತಮ್ಮ ಬಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಾಕೆ ಹೀಗೆ ಹಳ್ಳ ಹಿಡಿದಿರ್ತಾರೆ ಅಂತಾ ಹುಡುಕಹೋದರೆ ನಿಜಕ್ಕೂ ನಂಬಲು ಕಷ್ಟವಾಗುವಂತ ಸತ್ಯಗಳು ಹೊರಬೀಳುತ್ತವೆ. ಮಾನಸಿಕ ತಜ್ಞರುಗಳ ಪ್ರಕಾರ ನೋಡಿದರೆ ಹುಡುಗಿಯರಿಗೆ ಅದೊಂಥರಾ ಹುಚ್ಚು! `ರೌಡಿ, ಒರಟ, ಸೋಮಾರಿ, ನೀಚ’ ಅಂತಾ ಸಮಾಜದಲ್ಲಿ ಹಣೆಪಟ್ಟಿ ಧರಿಸಿರುತ್ತಾತಲ್ಲಾ? ಅಂಥವರನ್ನು ಸೆಲೆಕ್ಟ್ ಮಾಡಿಕೊಂಡು, “ಇವನ ಕತೆ ಮುಗಿದುಹೋಯ್ತು ಅಂದುಕೊಂಡಿದ್ವಿ. ಆದರೆ ಈ ಹುಡುಗಿ ಎಂಥಾ ಒರಟನನ್ನು ಬದಲಾಯಿಸಿಬಿಟ್ಟಳು. ಹೇಗಿದ್ದವನು ಈಗ ಹೇಗಾಗಿಬಿಟ್ಟ…’’ ಅಂತಾ ಜನರಿಂದ ಹೊಗಳಿಸಿಕೊಳ್ಳಬೇಕು ಎನ್ನುವ ವಿಚಿತ್ರ ಮತ್ತು ವಿಲಕ್ಷಣ ಬಯಕೆ ಕೆಲವು ಹುಡುಗಿಯರದ್ದಾಗಿರುತ್ತದಂತೆ. ಈ ಕಾರಣದಿಂದಲೇ `ಮಹಾನ್ ಸಾಧಕಿ’ ಅನ್ನಿಸಿಕೊಳ್ಳಬೇಕು ಅನ್ನೋ ಭ್ರಮೆಗೆ ಬಿದ್ದು ತನಗೆ ಮಾತ್ರವಲ್ಲ, ಜಗತ್ತಿಗೇ ಬೇಡವಾದವನನ್ನು ಕಟ್ಟಿಕೊಂಡು, ಪಡಬಾರದ ಕಷ್ಟ ಪಟ್ಟು, ಎಷ್ಟೋ ಸಲ ಬದುಕು ಹೀಗೆ ಆಗೋಯ್ತಲ್ಲ, ಹೆತ್ತವರನ್ನು, ಸುತ್ತಲಿನ ಸಮಾಜವನ್ನು ವಿರೋಧದ ಮಧ್ಯೆಯೂ ಇಂಥವನ್ನು ಕಟ್ಟಿಕೊಂಡು ಬದುಕು ಕೆಡಿಸಿಕೊಂಡುಬಿಟ್ಟೆನಲ್ಲಾ ಅಂತಾ ಜೀವಮಾನವಿಡೀ ಕೊರಗೋದೂ ಇದೆ. ಇನ್ನು ಕೆಲವರು ಇಂಥಾ ಬದುಕು ಬೇಡ ಅಂತಾ ಜೀವ ತೆಗೆದುಕೊಂಡ ನಿದರ್ಶನಗಳೂ ಸಾಕಷ್ಟಿವೆ.

 

 

ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆಂದರೆ, ಪ್ರೀತಿಸೋದು ತಪ್ಪಲ್ಲ. ಪ್ರೀತಿಸೋನು ತೀರಾ ಹೈ ಕ್ವಾಲಿಟಿ ಹೊಂದಿರಬೇಕು, ದುಡ್ಡಿರೋನಾಗಿರಬೇಕು ಅಂತಾನೂ ಅಲ್ಲ. ಕನಿಷ್ಟಪಕ್ಷ ಆತ ತನ್ನ ಹೆತ್ತವರನ್ನಾದರೂ ಉತ್ತಮವಾಗಿ ಸಾಕುತ್ತಿದ್ದಾನಾ? ಮದುವೆಯ ನಂತರ ತಾನು ಇಷ್ಟಪಟ್ಟ ಹುಡುಗ ನನ್ನನ್ನು ಬಾಳಿಸಲು ಸಾಧ್ಯವಾ ಅನ್ನೋ ಪ್ರಜ್ಞೆ ಹುಡುಗಿಯರಿಗೆ ಇರಲೇಬೇಕು. `ಯಾರನ್ನೋ ಬದಲಿಸುತ್ತೇನೆ’ ಅನ್ನೋ ಕೆಟ್ಟ ಹಠಕ್ಕೆ ಬಿದ್ದು ತಮ್ಮ ಬಂಗಾರದಂಥಾ ಬದುಕನ್ನು ಹಾಳುಮಾಡಿಕೊಳ್ಳಬಾರದು. ಅಲ್ಲವಾ?

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top