fbpx
ಹೆಚ್ಚಿನ

ಅಬ್ಬಬ್ಬಾ ಅಂಬಾನಿ… ಇವರ ಮನೆ ಕೆಲಸದವರ ಸಂಬಳ ಕೇಳಿದ್ರೆ ಮನೆಕೆಲಸ ಮಾಡೋದೇ ಬೆಸ್ಟು ಅನ್ಸುತ್ತೆ

ಅಬ್ಬಬ್ಬಾ ಅಂಬಾನಿ… ಇವರ ಮನೆ ಕೆಲಸದವರ ಸಂಬಳ ಕೇಳಿದ್ರೆ ಮನೆಕೆಲಸ ಮಾಡೋದೇ ಬೆಸ್ಟು ಅನ್ಸುತ್ತೆ

 

ಏನಿದು ಬರೀ ಮನೆಗೆಲಸ ಮಾಡುವುದಕ್ಕೆ ತಿಂಗಳಿಗೆ ಎರಡು ಲಕ್ಷ ಕೊಡುತ್ತಾರೆ ಅನ್ನೋದಾದರೆ ಯಾವ ಸರ್ಕಾರಿ ಕೆಲಸಕ್ಕೂ ಕಾಯೋದೇ ಬೇಡ. ಆರಾಮಾಗಿ ಮನೆಗೆಲಸ ಮಾಡಿಕೊಂಡು ಇದ್ದುಬಿಡೋಣ ಎಂದು ಚಿಂತಿಸುತ್ತಿದ್ದೀರಾ? ಮನೆಗೆಲಸಕ್ಕಾಗಿ 2 ಲಕ್ಷ ಸಂಬಳ ಕೊಡುವ ಮನೆ ಯಾರದು ಎಂದು ಮೊದಲು ಕೇಳಿ. ಆನಂತರ ಡಿಸೈಡ್ ಮಾಡಿ!

 

 

ಇದು ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಮನೆಗೆಲಸದ ಕಥೆ. ಹೌದು ಪ್ರಪಂಚದ ಅತಿ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿ ಹೆಸರಿಸಿಕೊಂಡಿರುವ ಮುಖೇಶ್ ಅಂಬಾನಿ ಮನೆಯಲ್ಲಿ ಕೆಲಸ ಮಾಡುವವರ ಕನಿಷ್ಠ ವೇತನ ತಿಂಗಳಿಗೆ ಬರೋಬ್ಬರಿ 2 ಲಕ್ಷ!

 

 

ಸದಾ ಅದ್ದೂರಿ ಹಾಗೂ ಐಷರಾಮಿ ಜೀವನ ಶೈಲಿಯ ಕಾರಣಕ್ಕಾಗಿ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರುವಾತ ಈ ಮುಖೇಶ್ ಅಂಬಾನಿ. ಸುಮಾರು ಒಂದು ಬಿಲಿಯನ್ ಡಾಲರ್‍ಗಿಂತಲೂ ಅಧಿಕ ಮೌಲ್ಯದ ಮನೆ ಅಂಬಾನಿಯದ್ದು. ಇದು ಬಕಿಂಗ್‍ಹ್ಯಾಮ್ ಅರಮನೆಯ ನಂತರ ವಿಶ್ವದ ಅತ್ಯಂತ ದುಬಾರಿಯ ವಾಸದ ಗೃಹ. ಅಂದಮೇಲೆ ಈ ಮನೆಯ ಚಿತ್ರಣವನ್ನು ಒಮ್ಮೆ ನೀವೇ ಊಹಿಸಿಕೊಳ್ಳಿ. ಹೆಚ್ಚು ಎತ್ತರದ ಛಾವಣಿಯೊಂದಿಗೆ 27 ಮಹಡಿಗಳನ್ನು ಹೊಂದಿರುವ ಮುಂಬೈನ ಈ ಮನೆ, ಭೂಕಂಪದ ತೀವ್ರತೆಯನ್ನು ತಡೆದುಕೊಳ್ಳುವ ಶಕ್ತಿಶಾಲಿ ಮನೆಯೂ ಹೌದು.

 

 

 

ಅಂಬಾನಿಯ ಈ ಮನೆಯಲ್ಲಿರುವ ಒಟ್ಟು ಕೆಲಸಗಾರರ ಸಂಖ್ಯೆ 600. ಈ ಕೆಲಸಗಾರರ ಸಂಬಲಗಳು ವಿಮೆ, ಶಿಕ್ಷಣ ಹಾಗೂ ಇನ್ನು ಹೆಚ್ಚಿನ ಭತ್ಯೆಗಳನ್ನೂ ಒಳಗೊಂಡಿವೆ. ಈ ಮನೆಯಲ್ಲಿ ಇವರ್ಯಾರನ್ನೂ ಕೆಲಸಗಾರರಂತೆ ನಡೆಸಿಕೊಳ್ಳುವುದಿಲ್ಲ. ಬದಲಾಗಿ ಅವರ ಕೆಲಸಕ್ಕೆ ಗೌರವ ಕೊಟ್ಟು, ಕುಟುಂಬದ ಸದಸ್ಯರಂತೆ ನಡೆಸಿಕೊಳ್ಳಲಾಗುತ್ತದೆ ಎಂಬುದೇ ಅಚ್ಚರಿಯ ಸಂಗತಿ.

ಸದ್ಯ ಅಂಬಾಣಿ ಭಾರತ ಸರ್ಕಾರದ ಗೃಹ ಸಚಿವಾಲಯದಿಂದ ಅನುಮತಿ ಪಡೆದು ತಮ್ಮ ಮನೆಗೆ ಝಡ್ ಶ್ರೇಣಿಯ ಭದ್ರತೆಯನ್ನೂ ಪಡೆದಿದ್ದಾರೆ. ಎಷ್ಟೇ ಆದರೂ ಜಗತ್ತಿನ ಶ್ರೀಮಂತ ವ್ಯಕ್ತಿಯಲ್ಲವೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top