fbpx
ಹೆಚ್ಚಿನ

ಮೂಗಿಗಿಂತ ಮೂಗುತಿ ಭಾರ ಹಂಗೆ ಇಲ್ಲಿ ಕೋಳಿಗಿಂತಲೂ ಅದರ ಕಾಲೇ ಭಾರ , ಕೋಳಿಗೂ ‘ಕಾಲ’ ಬರುತ್ತದೆ ಅಂದ್ರೆ ನಂಬಲೇಬೇಕು.

ಮೂಗಿಗಿಂತ ಮೂಗುತಿ ಭಾರ ಹಂಗೆ ಇಲ್ಲಿ ಕೋಳಿಗಿಂತಲೂ ಅದರ ಕಾಲೇ ಭಾರ , ಕೋಳಿಗೂ ‘ಕಾಲ’ ಬರುತ್ತದೆ ಅಂದ್ರೆ ನಂಬಲೇಬೇಕು.

 

 

ಕೆಟ್ಟ ಅಕ್ಷರ ಬರೆದವರನ್ನು ಕೋಳಿಕಾಲಿನ ಅಕ್ಷರ ಎಂದು ಚೇಡಿಸುವುದು ಮಾಮೂಲಿ.

ಹಾಗಾದರೆ ಕೋಳಿಕಾಲಿಗೆ ಬೆಲೆನೇ ಇಲ್ವಾ?

 

 

ಕೋಳಿಕಾಲಿಗೆ ಈಗ ಬೆಲೆ ಬಂದಿರೋದು. ಬೇಕಿದ್ದರೆ ನೋಡಿ…ಈ ಕೋಳಿಯ ಒಂದೊಂದು ಕಾಲುಗಳು ಮನುಷ್ಯರ ಮಣಿಕಟ್ಟಿನಷ್ಟಿದೆ. ಬಲಿತ ಕೋಳಿಯನ್ನು ತೂಗಿದರೆ 4ರಿಂದ 6 ಕಿಲೋಗ್ರಾಂಗಳಾಗಲಿದೆ. ರುಚಿಯಲ್ಲಿ ಸೂಪರ್ – ಕೊಳ್ಳೋನು ಪಾಪರ್! ಎನ್ನಬಹುದು-ಅಷ್ಟು ದುಬಾರಿ ಇದು. ಸಾಮಾನ್ಯ ದಿನಗಳಲ್ಲಿ 600-700 ಡಾಲರ್‍ಗಳು. ಹೊಸವರ್ಷ, ಹಬ್ಬಗಳ ಸಮಯದಲಿ 1,500-2500 ಡಾಲರ್‍ಗಳಿರಲಿವೆ.

 

ವಿಯಟ್ನಾಂನ ಡಾಂಗ್‍ತೊ ತಳಿಯ ಕೋಳಿಗಳ ಕಾಲ್ಗುಣವೇ ಈ ರೇಟ್ ಬರಲು ಕಾರಣ. ಕೋಳಿಗೂ ‘ಕಾಲ’ ಬರುತ್ತದೆ ಅಂದ್ರೆ ನಂಬಲೇಬೇಕು.

ಮೂಗುಗಿಂತ ಮೂಗುತಿ ಭಾರ ಎಂಬಂತೆ ಕೋಳಿಗಿಂತಲೂ ಅದರ ಕಾಲೇ ಭಾರ ಎನ್ನಬೇಕು. ಮುಖ ನೋಡಿ ಮಣೆ ಹಾಕುವ ಮನುಷ್ಯರು ಕೋಳಿಗಾದರೆ ಕಾಲು ನೋಡಿ ಧಾರಣೆ ಫಿಕ್ಸ್ ಮಾಡುತ್ತಾರೆ!

 

 

ಕಾಲಿನ ಹೊರತಾಗಿ ಉಳಿದಂತೆ ಮಾಮೂಲಿಯಾಗಿಯೇ ಈ ಕೋಳಿ ಗೋಚರಿಸುತ್ತದೆ.ಈ ಕೋಳಿಸಾಕಾಣಿಕೆ ಸುಲಭವಲ್ಲ. ಮಾಮೂಲಿ ಕೋಳಿಗಿಂತಲೂ ಹೆಚ್ಚಿನ ಆಹಾರ ಸೇವಿಸಲಿದೆ. ಬೆಳೆದ ಕೋಳಿಯ ಪಾದಗಳು 5-6ವರ್ಷದ ಮಕ್ಕಳ ಪಾದಗಳಷ್ಟು ಉದ್ದ ಇರಲಿದೆ. ಕೆಲವು ಕೋಳಿಗಳ ಪಾದಗಳು 10 ಇಂಚು ಕೂಡ ಇವೆಯಂತೆ. ಪಾದಗಳಲ್ಲಿ ಹೂಕೊಸಿನ ರೀತಿಯಲ್ಲಿ ಗೆಡ್ಡಗಳಿದ್ದು ಇದು ಸೇವಿಸಲು ಬಲು ರುಚಿ. ಅಲ್ಲದೆ ಮಾಗಿದ ಕೋಳಿ ಎನಿಸಿಕೊಳ್ಳಲು ಸುಮಾರು 8 ತಿಂಗಳಿಂದ ಒಂದು ವರ್ಷವಾದರೂ ಆಗಿರಬೇಕು…

 

 

ಕೋಳಿಗೆ ಏನ್ ಕಾಲಿದ್ದರೇನು? ಕಡೆಗೆ ಅದು ಆಗಲೇಬೇಕು ಮನುಜರಪಾಲು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top