fbpx
ರಾಜಕೀಯ

ಬೆಳಗಾವಿಯಲ್ಲಿ ಮೊಳಗಿತು ಕನ್ನಡದ ರಣಕಹಳೆ ಮಾರ್ಚನಲ್ಲಿ MES ಮೇಯರ್ ಗೆ ಗೇಟ್ ಪಾಸ್.. ಬರಲಿದ್ದಾರೆ ಕನ್ನಡಿಗ ಮೇಯರ್

ಬೆಳಗಾವಿಯಲ್ಲಿ ಮೊಳಗಿತು ಕನ್ನಡದ ರಣಕಹಳೆ
ಮಾರ್ಚನಲ್ಲಿ MES ಮೇಯರ್ ಗೆ ಗೇಟ್ ಪಾಸ್.. ಬರಲಿದ್ದಾರೆ ಕನ್ನಡಿಗ ಮೇಯರ್

 

ಕನ್ನಡಿಗರಿಗೆ ಇದು ಅತ್ಯಂತ ಸಂತಸದ ಸುದ್ದಿ ಯಾಕಂತೀರಾ.. ಬೆಳಗಾವಿಯ ಮೇಯರ್ ಸ್ಥಾನ ಕನ್ನಡಿಗರಿಗೆ ಸಿಗಲಿದೆ. ಸದಾ MES ನವರೇ ಪಾರುಪತ್ಯ ಮಾಡುತ್ತಿದ್ದ ಈ ಸ್ಥಾನದಲ್ಲಿ ಈ ಬಾರಿ ಕನ್ನಡಿಗರು ಗದ್ದುಗೆ ಏರಲಿದ್ದಾರೆ ಬೆಳಗಾವಿಯ ಮೇಯರ್.

 

 

ಬೆಳಗಾವಿ ಮೇಯರ್ ಹಾಗು ಉಪ ಮೇಯರ್ ಅವಧಿ ಮಾರ್ಚ್ ತಿಂಗಳಲ್ಲಿ ಮುಗಿಯಲಿದೆ.. ರಾಜ್ಯ ಸರ್ಕಾರ ಬೆಳಗಾವಿ ಮಹಾನಗರ ಮೇಯರ್ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸಿದೆ.. ಮೇಯರ್ ಸ್ಥಾನವವನ್ನು ಪರಿಶಿಷ್ಟ ಪಂಗಡ ( ST ) ವರ್ಗಕ್ಕೆ ಮೀಸಲಿರಿಸಲಾಗಿದೆ.. ಮಹಾರಾಷ್ಟ್ರ ಏಕೀಕರಣ ಸಮಿತಿ( MES ) ನಲ್ಲಿ ಪರಿಶಿಷ್ಟ ಪಂಗಡ ( ST ) ವರ್ಗಕ್ಕೆ ಸೇರಿದ ಯಾವ ಸದಸ್ಯರು ಇಲ್ಲ.. ಕನ್ನಡದ ಸದಸ್ಯರ ಗುಂಪಿನಲ್ಲಿ ಇಬ್ಬರು ಸದಸ್ಯರಾದ ಬಸಪ್ಪ ಚಿಕ್ಕಲದಿನ್ನಿ,ಹಾಗು ಸಂಜೋತಾ ಗಂಡಗುದರಿ ಈ ವರ್ಗಕ್ಕೆ ಸೇರಿದವರಾಗಿದ್ದಾರೆ.. ಇದರಿಂದ ಕನ್ನಡಿಗರೇ ಮೇಯರ್ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇದು ಕನ್ನಡಿಗಿರೆ ಅತ್ಯಂತ ಸಂತಸದ ದಿನ ಇಷ್ಟು ದಿನ ಎಷ್ಟೋ ಬಾರಿ ಹೋರಾಟ ಮಾಡಿದರು ಈ ಭಾಗ್ಯ ದೊರಕಿರಲಿಲ್ಲ ಈಗ ತಾನಾಗಿ ಬಂದಿದೆ..

 

 

ಇನ್ನುಳಿದಂತೆ ಉಪ ಮೇಯರ್ ಸ್ಥಾನಕ್ಕೆ MES ತೃಪ್ತಿ ಪಟ್ಟು ಕೊಳ್ಳಬೇಕಾಗಿದೆ.

 

ಹೊಸದಾಗಿ ಬರುವ ಮೇಯರ್ ಕನ್ನಡ ಪರ ಕೆಲಸ ಮಾಡಿ ಬೆಳಗಾವಿಯಲ್ಲಿ ಕನ್ನಡದ ಕಂಪನ್ನು ಹರಡಬೇಕಾದ ಅವಶ್ಯಕತೆ ಇದೆ.. ಜೈ ಕರ್ನಾಟಕ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top