fbpx
ದೇವರು

2018 ಜನವರಿ 7ನೇ ತಾರೀಖು ಶನಿ ಉದಯವಾಗಿ ಶನಿ ಮಹಾ ಪರಿವರ್ತನೆ ಆಗುತ್ತೆ ಇದರಿಂದ ಈ ಐದು ರಾಶಿಯವರಿಗೆ ಇಷ್ಟು ದಿನ ಪಟ್ಟ ಕಷ್ಟಗಳು ಕೊನೆಗೊಂಡು ಸಂತೋಷದ ದಿನಗಳು ಬರುತ್ತೆ

2018 ಜನವರಿ 7ನೇ ತಾರೀಖಿನಂದು ಶನಿ ಉದಯವಾಗಿ ಶನಿಯು ಮಹಾ ಪರಿವರ್ತನೆಯಿಂದ, ಈ ಐದು ರಾಶಿಯವರಿಗೆ ಜೀವನದಲ್ಲಿ ಸಂತೋಷದ ದಿನಗಳು ಬರಲಿವೆ.ಅವರಿಗೆ ಜೀವನದಲ್ಲಿ ಏನು ಬೇಕೋ ಅದು ಸಿಗುವುದು.

ಆಕಾಶದಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹ, ಅಖಿಲ ಬ್ರಹ್ಮಾಂಡ ಸರ್ವೋಚ್ಚ ನ್ಯಾಯಾಧೀಶ, ದಂಡಾಧಿಕಾರಿ ಮತ್ತು ರಾತ್ರಿಯ ರಾಜ, ಮಕರ ಮತ್ತು ಕುಂಭ ರಾಶಿಯ ಅಧಿಪತಿ.ಪಶ್ಚಿಮ ದಿಕ್ಕಿನ ಒಡೆಯ ಶ್ರೀ ಶನೈಶ್ಚರ ದೇವರು, ಧನಸ್ಸು ರಾಶಿಯ ಕೇತು ಸಾಂಗತ್ಯದ ಮೂಲಾ ನಕ್ಷತ್ರದ ಸ್ವಾಮಿ 2018 ಜನವರಿ ಏಳನೇ ತಾರೀಖಿನಂದು ರವಿವಾರ ಸಂಜೆ ಐದು ಮೂವತ್ತು ನಿಮಿಷಕ್ಕೆ ಪಶ್ಚಿಮ ದಿಕ್ಕಿನಲ್ಲಿ ಉದಯ ವಾಗುತ್ತಿದ್ದಾನೆ.

 

 

ಕರ್ಮ ,ಕ್ಷೇತ್ರ ,ನ್ಯಾಯ, ಚಿಕಿತ್ಸಾ, ಪ್ರಶಾಸನ, ತಂತ್ರ, ನಿರ್ಮಾಣ ಕ್ಷೇತ್ರ, ಎಲ್ಲಾ ರೀತಿಯ ಕರ್ಮ ಕಾರಕನು ಆದ ಶನಿದೇವನ ಉದಯವು ಅನೇಕ ರೀತಿಯ ಗತಿ ವಿಧಗಳನ್ನು ಹೊತ್ತು ಹೊಸ ಗತಿ ವಿಧಗಳನ್ನು ನೀಡುವನು.
ದಕ್ಷಿಣ ಪಶ್ಚಿಮ ದೇಶ, ಮುಸ್ಲಿಂ ದೇಶ ಪೂರ್ಣವಾಗಿ ಶನಿಗ್ರಹದ ಪ್ರಭಾವದಲ್ಲಿ ಇರುತ್ತದೆ. ಶನಿಗ್ರಹದ ಈ ಉದಯದಿಂದ ದೇಶದ ರಾಜನೀತಿಯಿಂದಲೂ ಉತ್ತಮ ಪ್ರಭಾವ ಕಾಣಬಹುದಾಗಿದೆ. ಶನಿಯ ಪ್ರಭಾವ ಇಡೀ ವಿಶ್ವದ ಮೇಲೆ ಮತ್ತು ಎಲ್ಲ ರಾಶಿಗಳ ಮೇಲೆಯೂ ಕೂಡ ಪ್ರಭಾವ ಬೀರಲಿದೆ ಮತ್ತು ಫಲವನ್ನು ಕೊಡುವುದು. ಧನಸ್ಸು ರಾಶಿಯ ಸ್ವಾಮಿ ದೇವಗುರು ಬೃಹಸ್ಪತಿಯಾಗಿದ್ದು. ಬೃಹಸ್ಪತಿಯ ರಾಶಿಯಲ್ಲಿ ಶನಿಯು ಉದಯವಾಗುವುದು ಒಂದು ಅಭೂತಪೂರ್ವವಾದ ಘಟನೆಯಾಗಿದೆ.
ಶನಿ ಅಮೆರಿಕ ಮತ್ತು ಉತ್ತರ ಕೊರಿಯಾದ ಮದ್ಯ ಒತ್ತಡವನ್ನು ಹೆಚ್ಚಿಸುತ್ತಾನೆ. ನಿರ್ಮಾಣ ಕ್ಷೇತ್ರದಲ್ಲಿ ಅಡೆತಡೆ ಉಂಟಾಗುವುದು. ಎಳ್ಳು, ಕಬ್ಬಿನ ,ಎಣ್ಣೆ ಮತ್ತು ಸಿಮೆಂಟ್ ಉತ್ಪನ್ನಗಳ ಮಾರಾಟವು ಕುಸಿತ ಕಾಣುವುದು.

ಶ್ರಮಪಡುವವರು ಮತ್ತು ಮಧ್ಯಮ ವರ್ಗದವರಿಗೆ ಹೊಸ ವೃದ್ಧಿಯಾಗುವುದು. ಶನಿಯ ಉದಯದಿಂದ ಎಲ್ಲಾ ರಾಶಿಯವರ ಮೇಲೆ ಪ್ರಭಾವ ಅವಶ್ಯವಾಗಿ ಬೀರುವುದು. ವೃಷಭ ಮತ್ತು ಕನ್ಯಾ ರಾಶಿಯವರಿಗೆ ಅಷ್ಟಮ ಶನಿಯು ನೆಡೆಯುತ್ತಿದ್ದು. ವೃಶ್ಚಿಕ ,ಧನಸ್ಸು ಮತ್ತು ಮಕರ ರಾಶಿಗೆ ಸಾಡೇಸಾತಿ ಶನಿ ನಡೆಯುತ್ತಿದೆ .
ಉಳಿದ ಈ ಐದು ರಾಶಿಯವರಿಗೆ ವಿಶೇಷವಾಗಿ ಲಾಭವಾಗುವುದು. ಮೇಷ, ಮಿಥುನ, ಸಿಂಹ, ತುಲಾ ,ಕುಂಭ ಮತ್ತು ಮೀನ ರಾಶಿಯವರಿಗೆ ದೊಡ್ಡಮಟ್ಟದಲ್ಲಿ ಖುಷಿಯೂ ಸಿಗುವುದು.

ಮೇಷ ರಾಶಿ .

 

 

ರಾಜ್ಯದಲ್ಲಿ ಪಕ್ಷದ ಸಾಮರ್ಥ್ಯವೂ ಹೆಚ್ಚಾಗುವುದು. ಕಾರ್ಯಕ್ಷೇತ್ರದಲ್ಲಿ ಉನ್ನತಿ. ಆರ್ಥಿಕ ಲಾಭದ ಯೋಗವಿದ್ದು ,ಅದೃಷ್ಟವು ಕೂಡಿ ಬರಲಿದ್ದು ಮನೆ ಮತ್ತು ಪರಿವಾರದಲ್ಲಿ ಮಂಗಳ ಕಾರ್ಯಗಳು ಜರುಗುವವು. ಪ್ರತಿಷ್ಠೆ ಮತ್ತು ಪದೋನ್ನತಿಯಲ್ಲಿ ಉತ್ತಮ ಯೋಗವಿದೆ.

ವೃಷಭ ರಾಶಿ.

 

 

ಕೆಲಸ ಕಾರ್ಯಗಳು ನಿಂತು ಹೋಗುವ ಸಂಭವವಿದೆ, ಆರ್ಥಿಕ ಪರಿಸ್ಥಿತಿಯು ಹದಗೆಡುವುದರಿಂದ, ಸಮಸ್ಯೆಗಳನ್ನು ಶಾಂತಿಯಿಂದ ನಿರ್ವಹಿಸಿ ಪರಿಹರಿಸಿ, ಆರೋಗ್ಯದ ಕಡೆ ಗಮನಹರಿಸಿ, ವಾಹನಗಳನ್ನು ಚಲಾಯಿಸುವಾಗ ಎಚ್ಚರದಿಂದ ಇದ್ದು ಸಮಾಧಾನವಾಗಿ ಓಡಿಸಿ.

ಮಿಥುನ ರಾಶಿ.

 

 

ನಿಮ್ಮ ಅದೃಷ್ಟ ಸಾಬೀತಾಗುವುದು. ವ್ಯಾಪಾರ ಮತ್ತು ಪರಿವಾರದಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ವಿವಾಹದ ಯೋಗವಿದೆ. ಪ್ರೇಮ ಸಂಬಂಧದಲ್ಲಿ ಸಕಾರಾತ್ಮಕ ಸುಧಾರಣೆಯ ಜೊತೆಗೆ ಯಶಸ್ಸನ್ನು ಗಳಿಸುವಿರಿ .

ಕಟಕ ರಾಶಿ

 

 

ರೋಗ , ರುಜಿನಗಳು ಶತ್ರುಗಳು ಕೊನೆಗೊಳ್ಳುವವು. ಎಚ್ಚರಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ಪೂರ್ವಜರಿಂದ ವಿಶೇಷವಾದ ಮಾನ ಸಮ್ಮಾನ ಗೌರವಗಳು ದೊರೆಯುವವು.

ಸಿಂಹ ರಾಶಿ

 

 

ಆರ್ಥಿಕವಾಗಿ ಕಾರ್ಯ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳನ್ನು ಶಾಂತಿ ಮತ್ತು ಸಂಯೋಗದಿಂದ ಬಗೆಹರಿಸಿ. ಶಿಕ್ಷಣ ಮತ್ತು ಸಂತಾನ ಸಂಬಂಧಗಳ ಸಮಸ್ಯೆ ಬಗೆಹರಿದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ವಿದೇಶಕ್ಕೆ ಪ್ರಯಾಣ ಬೆಳೆಸಲು ಯೋಗವಿದೆ. ಆರ್ಥಿಕವಾಗಿ ಲಾಭವಾಗುವುದು.

ಕನ್ಯಾ ರಾಶಿ.

 

 

ಸಾಮಾಜಿಕವಾಗಿ ಸಕ್ರಿಯ ಗೊಳ್ಳುವ ವೃದ್ಧಿಯ ಯೋಗವಿದೆ. ಅಂಗಡಿ ಮತ್ತು ವಾಹನ ಸಂಬಂಧಿತ ಕಾರ್ಯಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಸಮಯವನ್ನು ಕಳೆಯುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆಯಾಗುವುದು. ಎಲ್ಲ ರೀತಿಯ ಸುಖವು ಪ್ರಾಪ್ತಿಯಾಗುವುದು.

ತುಲಾ ರಾಶಿ.

 

 

ಅದೃಷ್ಟ ಕೂಡಿಬಂದು ಯಾತ್ರೆ ಮತ್ತು ಪ್ರವಾಸವನ್ನು ಕೈಗೊಳ್ಳುವಿರಿ. ಸಾಮಾಜಿಕವಾಗಿ ಮಾನ ಸನ್ಮಾನಗಳು ಹೆಚ್ಚಾಗಿ ವೃದ್ಧಿಯಾಗುವುದು. ಸಹೋದರರ ಜೊತೆ ಪ್ರಾಪ್ತಿಯಾಗುವುದು. ನಿಮ್ಮ ಶಕ್ತಿ ಹೆಚ್ಚಾಗುವುದು .

ವೃಶ್ಚಿಕ ರಾಶಿ

 

 

ಆರ್ಥಿಕವಾಗಿ ವೃದ್ಧಿಯಾಗುವ ಯೋಗವಿದೆ. ಸಂಪತ್ತು , ವಾಹನ ಖರೀದಿ, ಮನೆ ಖರೀದಿಯಲ್ಲಿ ಯಶಸ್ವಿಯಾಗುವಿರಿ. ಹಣವನ್ನು ಸಂಗ್ರಹಿಸಿಕೊಳ್ಳುವ ಯೋಗವಿದೆ.

ಧನಸ್ಸು ರಾಶಿ.

 

 

ಸಹೋದರ, ಸಹೋದರಿಯರ ಕೆಲಸದ ನಿಮಿತ್ತ ಅವರ ಹಿಂದೆ ಓಡಾಡ ಬೇಕಾಗುವುದು. ಕಠಿಣ ಪರಿಶ್ರಮದ ಯೋಗವಿದೆ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ಬರುವುದು.

ಮಕರ ರಾಶಿ

 

 

ಹೊರಗುತ್ತಿಗೆ ವ್ಯಾಪಾರಗಳಲ್ಲಿ ಯಾತ್ರೆಗೆ ಯೋಗವಿದೆ. ರೋಗ, ರುಜಿನ ಮತ್ತು ಶತ್ರುಗಳು ಅಪಜಯವನ್ನು ಹೊಂದುವರು. ದೊಡ್ಡ ದೊಡ್ಡ ಕೆಲಸಗಳಲ್ಲಿ ಹಣವೂ ಖರ್ಚಾಗುವುದು. ಹಣದ ದುರುಪಯೋಗ ವಾಗುವುದರ ಜೊತೆಗೆ ಅನಾವಶ್ಯಕ ಖರ್ಚಿನ ಮೇಲೆ ನಿಗಾ ವಹಿಸಿ ಮತ್ತು ಹಣಕಾಸಿನ ಖರ್ಚಿನಲ್ಲಿ ಹಿಡಿತವಿರಲಿ.

ಕುಂಭ ರಾಶಿ.

 

 

ಹಣಕಾಸಿಗೆ ಸಂಬಂಧಪಟ್ಟ ವಿಷಯಗಳಲ್ಲಿ ವೃದ್ಧಿಯಾಗುವುದು. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣವನ್ನು ಗಳಿಸುವಿರಿ. ವ್ಯಾಪಾರಗಳಲ್ಲಿ ಹೆಚ್ಚಿನ ಸಫಲತೆಯನ್ನು ಕಾಣುವಿರಿ. ನಿಂತು ಹೋಗಿರುವ ಹಣ ನಿಮ್ಮ ಕೈಗೆ ಸೇರದೇ ಇರುವ ಹಣವೂ ಬಂದು ನಿಮ್ಮ ಕೈ ಸೇರುವುದು.

ಮೀನ ರಾಶಿ.

 

 

ಕಾರ್ಯಕ್ಷೇತ್ರದಲ್ಲಿ ವೃದ್ಧಿಯಾಗುವ ಯೋಗವಿದೆ. ಹೊಸ ಕಾರ್ಯ ಮತ್ತು ಯೋಜನೆಗಳನ್ನು ರೂಪಿಸುವಿರಿ.ಜೊತೆಗೆ ಮಾನ ,ಸಮ್ಮಾನ , ಗೌರವಗಳು ದೊರೆಯುವವು. ವ್ಯಾಪಾರದಲ್ಲಿ ಉತ್ತಮ ಯೋಗ ಕೂಡಿ ಬರುವ ಸಂಭವವಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top