ದೇವರು

ಈ ದೇವಸ್ಥಾನಕ್ಕೆ ಹೋಗಿ ಬೀಗ ಹಾಕಿ ನಿಮ್ಮ ಮನಸ್ಸಲ್ಲಿ ಅಂದ್ಕೊಂಡಿರೋ ಆಸೆ ಹೇಳಿದ್ರೆ ಸಾಕು , ಅದು ಖಚಿತವಾಗಿ ನೆರವೇರುತ್ತವಂತೆ ! ಎಲ್ಲಿ ಏನು ಎತ್ತಾ? ಮುಂದೆ ಓದಿ

ಈ ದೇವಸ್ಥಾನಕ್ಕೆ ಹೋಗಿ ಬೀಗ ಹಾಕಿ ನಿಮ್ಮ ಮನಸ್ಸಲ್ಲಿ ಅಂದ್ಕೊಂಡಿರೋ ಆಸೆ ಹೇಳಿದ್ರೆ ಸಾಕು , ಅದು ಖಚಿತವಾಗಿ ನೆರವೇರುತ್ತವಂತೆ ! ಎಲ್ಲಿ ಏನು ಎತ್ತಾ? ಮುಂದೆ ಓದಿ

ಈ ದೇವಾಲಯಕ್ಕೆ ಹೋಗಿ ಬೀಗ ಹಾಕಿ ನಿಮ್ಮ ಮನಸ್ಸಿನ ಬಯಕೆ ಹೇಳಿದರೆ ಸಾಕು. ಅವು ಖಚಿತವಾಗಿ ನೆರವೇರುತ್ತವಂತೆ. ಅದು ಎಲ್ಲಿದೆ ? ಎಂದು ನಿಮಗೆ ಗೊತ್ತಾ ?

ಮಾನವನ ಹೃದಯ ತುಂಬಾ ಪವಿತ್ರವಾದದ್ದು.ಮಾನವನ ಜನ್ಮ ಸಹ ಅಪರೂಪವಾದದ್ದು. “ ಜಂತೂನಾಂ ನರಜನ್ಮ ದುರ್ಲಭಂ” ಇಷ್ಟೆಲ್ಲಾ ಅಪರೂಪವಾದ ಮಾನವನ ಜನ್ಮವೆತ್ತಿ ಸಹ ಮಾನವನು ಮಾನವನಾಗಿ ಬದುಕಲು ಸರಿಯಾದ ಕೃಷಿಯನ್ನು ಮಾಡುತ್ತಿಲ್ಲ.
ಮಾನವ ಎಂದರೆ ಕೂಡಲೇ ಬಯಕೆಗಳ ಮೂಟೆ ಎಂದು ಇದರ ಅರ್ಥ. ಇದುವರೆಗೂ ಮಾನವ ಅಡಿಯಿಂದ ಮುಡಿತನಕ ಬಯಕೆಗಳಿಂದಲೇ ಕಾಲವನ್ನು ಕಳೆಯುತ್ತಾ ಬಂದಿದ್ದಾನೆ. ಬಯಕೆಗಳು ತೀರುವುದೇ ಆನಂದ ಎಂದು ಬಾವಿಸುತ್ತಿದ್ದಾನೆ.

ಈಗ ಕಾಲ ಹೇಗಿದೆ ಎಂದರೆ ದೇವಸ್ಥಾನದಲ್ಲಿ ಭಗವಂತನಿಗೆ ಏನೋ ಒಂದು ಕಾಣಿಕೆ ಸಲ್ಲಿಸಿ ನಮ್ಮ ಮನಸ್ಸಿನಲ್ಲಿರುವ ಬಯಕೆಗಳ ಗುಟ್ಟು ಬಿಟ್ಟು, ಅವನ ಮುಂದೆ ಇಟ್ಟರೆ ಸಾಕು ಕೂಡಲೇ ನೆರವೇರಬೇಕು. ಈ ರೀತಿ ಭಕ್ತರ ನಂಬಿಕೆ ಇದೆ. ಆಚಾರಗಳನ್ನು ಆಸರೆಯಾಗಿಸಿಕೊಂಡು ದೇಶದಲ್ಲಿನ ಒಂದೊಂದು ದೇವಾಲಯದಲ್ಲಿ ಒಂದೊಂದು ರೀತಿಯ ಆಚರಣೆಗಳನ್ನು ಪಾಲಿಸಲಾಗುತ್ತಿದೆ.
ಆದರೆ ಈ ದೇವಾಲಯದಲ್ಲಿನ ದೇವರಿಗೆ ಯಾವುದೇ ಕಾಣಿಕೆ ಸಲ್ಲಿಸಬೇಕಾಗಿಲ್ಲ. ಯಾಕೆಂದರೆ ಇಲ್ಲಿ ಬಂದು ಬೀಗ ತಂದು ಹಾಕಿದರೆ ಸಾಕು. ಇದು ಕಾನ್ಪುರದ ಬಂಗಾಳಿ ಮೊಹಲ್ಲಾದಲ್ಲಿನ ಅತಿ ಪುರಾತನವಾದ ಕಾಳಿ ಮಾತೆಯ ದೇವಾಲಯದಲ್ಲಿನ ಸಂಪ್ರದಾಯ . ಈ ದೇವಾಲಯದಲ್ಲಿ ಇರುವ ದೇವರನ್ನು ತಾಲೇವಾಲಿ ದೇವಿ ಎಂಬ ಹೆಸರಿನಿಂದ ಕರೆಯುತ್ತಾರೆ ಇಲ್ಲಿನ ಜನ.

 

 

ಇಲ್ಲಿಗೆ ಬರುವ ಭಕ್ತರ ಬಯಕೆಗಳು ನೆರವೇರಬೇಕಾದರೆ… ಬೇಗ ತಂದು ಆ ಗುಡಿಯಲ್ಲಿ ಹಾಕುತ್ತಾರೆ. ಭಕ್ತರು ಸಮರ್ಪಿಸಿದ ನೂರಾರು ಬೀಗಗಳು ನಮಗೆ ಕಾಳಿ ಮಾತೆಯ ಮಂದಿರದಲ್ಲಿ ದರ್ಶನ ನೀಡುತ್ತವೆ. ಭಕ್ತರು ದೇವಾಲಯಕ್ಕೆ ಬಂದು ಅವರ ಬಯಕೆಗಳಿಗೆ ಬೀಗ ಹಾಕುತ್ತಾರೆಂದು ಅಲ್ಲಿನ ಪೂಜಾರಿ ರವೀಂದ್ರನಾಥ್ ಬ್ಯಾನರ್ಜಿ ಹೇಳುತ್ತಾರೆ .
ಶತಮಾನಗಳಿಂದ ಇಲ್ಲಿ ಈ ಆಚಾರ ಇದೆಯಂತೆ. ಈ ಆಚಾರವನ್ನು ಮಹಿಳಾ ಭಕ್ತರು ಅತ್ಯಂತ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರಂತೆ. ಈ ರೀತಿ ಮಾಡಿದರೆ ನಮ್ಮ ಬಯಕೆಗಳು ನೆರವೇರುತ್ತವೆ ಎನ್ನಲು ಬಲವಾದ ಕಾರಣವೂ ಇದೆಯಂತೆ .

 

ಸಾವಿರಾರು ವರ್ಷಗಳ ಹಿಂದಿನ ಮಾತು ಮಾತೆಯ ದರ್ಶನಕ್ಕಾಗಿ ಪ್ರತಿನಿತ್ಯ ಭಕ್ತರೊಬ್ಬರು ಬೆಳಗ್ಗೆಯೇ ಬರುತ್ತಿದ್ದರಂತೆ. ಒಂದು ದಿನ ದೇವಾಲಯದ ಹೊರಾಂಗಣದ ಪ್ರಾಂಗಣದಲ್ಲಿ ಆಕೆ ಬೀಗ ಹಾಕಿದ್ದಳು. ಇದನ್ನು ಗಮನಿಸಿದ ಆ ದಿನ ಪೂಜಾರಿ ಯಾಕೆ ಈ ರೀತಿ ಮಾಡುತ್ತಿದ್ದೀಯಾ ತಾಯಿ ? ಎಂದು ಪ್ರಶ್ನಿಸಿದ್ದಕ್ಕೆ ಆಕೆ ತನ್ನ ಕನಸಿನಲ್ಲಿ ಕಾಳಿ ಮಾತೆ ಕಾಣಿಸಿಕೊಂಡು ಈ ರೀತಿ ಹೊರ ಪ್ರಾಂಗಣದಲ್ಲಿ ಬೀಗ ಹಾಕಿಟ್ಟರೆ ಏನು ಕೋರಿಕೊಳ್ಳುತ್ತೇವೆಯೋ ಅದು ನೆರವೇರುತ್ತದೆ ಎಂದು ಪೂಜಾರಿಗೆ ತಿಳಿಸಿದಳು. ಈ ಘಟನೆಯ ಬಳಿಕ ಆ ಭಕ್ತೆ ಮತ್ತೆ ದೇವಾಲಯಕ್ಕೆ ಬರಲಿಲ್ಲ.

 

ಆದರೆ ಒಂದು ದಿನ ಆಕಸ್ಮಿಕವಾಗಿ ಬಂದು ನನ್ನ ಬಯಕೆ ನೆರವೇರಿದ ಕಾರಣ ಇದೀಗ ಈ ಬೀಗ ತೆಗೆಯುತ್ತಿದ್ದೇನೆ ಎಂದು ಆಕೆ ದೇವಾಲಯದ ಪ್ರಾಂಗಣದಲ್ಲಿದ್ದ ಗೋಡೆ ಮೇಲೆ ಬರೆದಳು. ಇನ್ನೂ ಅಲ್ಲಿ ಅಂದಿನಿಂದ ಇದೇ ಆಚಾರ ಮುಂದುವರಿಯಿತು. ಮನಸ್ಸಿನಲ್ಲಿ ತಮ್ಮ ಬಯಕೆ ಕೋರಿಕೊಳ್ಳುತ್ತಾರೆ. ಇಲ್ಲಿ ಈ ರೀತಿ ಬೀಗ ಹಾಕುತ್ತಾರೆ.
ಅವರ ಬಯಕೆಗಳು ನೆರವೇರಿದ ನವಮಿಯ ದಿನ ತಾಯಿಗೆ ಮೇಕೆಯನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ. ಆ ಬಳಿಕ ನಿತ್ಯ ಬೆಳಗ್ಗೆ ದೇವಾಲಯದಲ್ಲಿ ಭಕ್ತರು ಅನ್ನದಾನ ಮಾಡುತ್ತಾರೆ ಎಂದು ಪೂಜಾರಿ ರವೀಂದ್ರನಾಥ್ ಬ್ಯಾನರ್ಜಿ ತಿಳಿಸಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top