ವಿಶೇಷ

ಕ್ಯಾನ್ಸರ್ ರೋಗದಿಂದ ಬಳಲಿ ಸಾವಿನ ಬಾಗಿಲು ತಟ್ಟುತ್ತಿದ್ದ ಪ್ರಿಯತಮೆಗೆ , ಪ್ರಿಯಕರ ಏನು ಮಾಡಿದ ಅಂತ ಕೇಳಿದ್ರೆ ಕಣ್ಣು ತುಂಬಿ ಬರುತ್ತೆ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕ್ಯಾನ್ಸರ್ ರೋಗದಿಂದ ಬಳಲಿ ಸಾವಿನ ಬಾಗಿಲು ತಟ್ಟುತ್ತಿದ್ದ ಪ್ರಿಯತಮೆಗೆ , ಪ್ರಿಯಕರ ಏನು ಮಾಡಿದ ಅಂತ ಕೇಳಿದ್ರೆ ಕಣ್ಣು ತುಂಬಿ ಬರುತ್ತೆ !

ಅವಳು ಹೀತರ್ ಮೊಶೆರ್ ಇವನು ಡೇವಿಡ್. ಇಬ್ಬರೂ ನೃತ್ಯಪಟುಗಳಾಗಲು ಬಯಸಿದರು. ನೃತ್ಯ ಶಾಲೆಯಲ್ಲಿ ಮುಲಾಕಾತ್ ಆಯಿತು. ಅವನಲ್ಲಿ ಅನುರಾಗ ಮೂಡಿತು. ಇವಳಲ್ಲಿ ಪ್ರೀತಿ ಅರಳಿತು.

 

 

ಅದು 2016ರ ದಿನಗಳು ‘ಒ ಲವ್ವೇ’ ಬದುಕು ಎಂದ ಡೇವಿಡ್. ‘ಓಮನಸೆ’ ಎಂದಳು ಹೀತರ್. ಕಲ್ಯಾಣವಾಗುವುದು ಅವನ ನಿರ್ಧಾರವಾಗಿತ್ತು. ಕ್ರಿಸ್ಮಸ್ ಹಿಂದಿನ ದಿನ ವಿಷಯವಿಟ್ಟ. ‘ಅಸ್ತು’ ಎಂದಳು ಆಕೆ. ಸ್ವರ್ಗಕ್ಕೆ ಮೂರೇ ಮೆಟ್ಟಿಲು ಎಂಬ ಕನಸು ಕಂಡ ಡೇವಿಡ್. ಆದರೆ ಕ್ಯಾನ್ಸರ್ ಎಂಬ ಮಾರಕ ರೋಗ ಅವಳಲ್ಲಿ ಚಿಗುರೊಡೆದಿತ್ತು. ಡೇವಿಡ್ ಕಾಯುತ್ತಲೇ ಇದ್ದ. ವರ್ಷ ಉರುಳಿತು. ದಿನದಿಂದ ದಿನಕ್ಕೆ ಅರ್ಬುದ ರೋಗ ಅಡರದೆ, ಶರೀರದಲ್ಲಿ ಮಾಗತೊಡಗಿತು.

 

 

2017ರ ಕ್ರಿಸ್ಮಸ್ ವೇಳೆಗೆ ಕಲ್ಯಾಣದ ಕನಸು ಕಂಡಿದ್ದ ಡೇವಿಡ್‍ಗೆ ಕೆಲವೇ ದಿನಗಳಲ್ಲಿ ತನ್ನ ‘ಪ್ರೀತಿ’ ಯಮನ ಪಾಲಾಗಲಿದೆ ಎಂಬ ಅಚ್ಚರಿ ಕಾದಿತ್ತು. ಆದರೂ ಅವಳಲ್ಲಿ ಬದುಕಿನ ಆಸೆ ಮೂಡಿಸಲು ಡಿಸೆಂಬರ್ 27ಕ್ಕೆ ವಿವಾಹದ ನಿಶ್ಚಯ ಮಾಡಿದ. ಆಗಲ್ಲಾ ಎಂದರು ಪುರೋಹಿತರು ಅಲಿಯಾಸ್ ವೈದ್ಯರು. ಅಲ್ಲಿಯವರೆವಿಗೂ ಆಕೆ ಇರುವುದು ಅನುಮಾನವಾಗಿತ್ತು. 23ನೇ ಡಿಸೆಂಬರ್ 2017ರಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಯೇ ವಿವಾಹವದರು.

 

 

ಕೈ ಎತ್ತಿ ಚೀರಿದಳು ಹೀತರ್ ಅಷ್ಟೇ… ಮಾತಿಲ್ಲ ಕಥೆಯಿಲ್ಲ. ಕ್ರಿಸ್ಮಸ್ ಉದಯಿಸುವ ಮುನ್ನವೇ ಆಕೆ ಕ್ರಿಸ್ತನಪಾದಗಳಲ್ಲಿ ಲೀನವಾಗಿ ಹೋದಳು. ಆದರೆ ಅವನಲ್ಲಿ ಪ್ರೀತಿ ಉಳಿಸಿ ಹೋದಳು.

ಅಮರ, ಮಧುರಾ… ಪ್ರೇಮಾ…

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top