ದೇವರು

ನಿಮ್ಮ ಮನೆಗೆ ಲಕ್ಷ್ಮೀ ಒಲಿಯಬೇಕಂದ್ರೆ ಈ 8 ವಸ್ತುಗಳನ್ನು ನಿಮ್ ಮನೆಯಲ್ಲಿ ಇಟ್ಕೊಳಿ.

 

ಲಕ್ಷ್ಮಿ ಕಟಾಕ್ಷ ನಿಮಗೆ ಬೇಕೆ ? ಈ ಅಷ್ಟ ವಸ್ತುಗಳು ಮನೆಯಲ್ಲಿದ್ದರೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ

ಪ್ರತಿಯೊಬ್ಬ ಮನುಷ್ಯ ಲಕ್ಷ್ಮೀ ಕಟಾಕ್ಷ ಸಿಗಲೆಂದು ಪ್ರಾರ್ಥಿಸುತ್ತಾರೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿ ತಮ್ಮ ಮನೆಯಲ್ಲಿ ನೆಲೆಸಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಪ್ರಾರ್ಥನೆ, ಪೂಜೆ, ಹವನ ಮಾಡುತ್ತಾರೆ. ಹಿಂದೂ ಧರ್ಮದಲ್ಲಿನ ದೇವತೆಗಳಲ್ಲೊಬ್ಬರು. ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.

kolalu

1)ಕೊಳಲು :

ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದಲು ಕೊಳಲನ್ನು ನಿಮ್ಮ ಮನೆಯಲ್ಲಿ ಇಡಬೇಕು. ಕೊಳಲನ್ನು ನಿಮ್ಮ ಮನೆಯಲ್ಲಿ ಇಡೋದರಿಂದ ಮನೆಯಲ್ಲಿ ಲಕ್ಷ್ಮಿ ವಾಸ ಮಾಡುತ್ತಾಳೆ. ಇದರಿಂದಲೂ ವಾಸ್ತು ದೋಷ ನಿವಾರಣೆಯಾಗುತ್ತದೆ. ಅಲ್ಲದೇ ಧನ ಪ್ರಾಪ್ತಿಯಾಗುವ ಯೋಗ ಇದೆ.

nrithyanatya-ganesha

2)ನಾಟ್ಯ ಗಣಪತಿ :

ಧನ ಲಕ್ಷ್ಮಿಯ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿ ನೃತ್ಯ ಮಾಡುತ್ತಿರುವ ಗಣೇಶನ ಪ್ರತಿಮೆಯನ್ನು ಇಡುವುದು ಶುಭ ಸಂಕೇತವಾಗಿದೆ. ಮನೆಯ ಮುಖ್ಯ ದ್ವಾರ ಮೇಲೆ ಗಣೇಶನ ದೃಷ್ಟಿ ತಾಕುವಂತೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು.

laxmi-normal-laxmi-conch

3)ಶಂಖ :

ಶಂಖದಲ್ಲಿ ವಾಸ್ತು ದೋಷ ನಿವಾರಣೆ ಮಾಡುವ ಅದ್ಭುತ ಶಕ್ತಿ ಇದೆ. ಯಾವ ಮನೆಯ ಪೂಜಾ ಸ್ಥಳದಲ್ಲಿ ದೇವಿ ಲಕ್ಷ್ಮಿಯೊಂದಿಗೆ ಶಂಖವನ್ನು ಸಹ ಸ್ಥಾಪನೆ ಮಾಡಿರುತ್ತಾರೋ ಅಲ್ಲಿ ಲಕ್ಷ್ಮೀ ಸ್ವಯಃ ನಿವಾಸ ಮಾಡಿಕೊಳ್ಳುತ್ತಾಳೆ.

nariyal

4)ಏಕಾಕ್ಷಿ ತೆಂಗಿನಕಾಯಿ :

ಅಂದರೆ ಒಂದು ಕಣ್ಣಿನ ತೆಂಗಿನಕಾಯಿ. ಶ್ರೀ ಫಲಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಯಾವ ಮನೆಯಲ್ಲಿ ಏಕಾಕ್ಷಿ ತೆಂಗಿನಕಾಯಿಯನ್ನು ಇಟ್ಟು ಪ್ರತಿ ದಿನ ಪೂಜೆ ಮಾಡುತ್ತಾರೋ ಅಲ್ಲಿ ನೆಗೆಟಿವ್‌ ಎನರ್ಜಿ ಯಾವತ್ತೂ ಒಳ ಸುಳಿಯುವುದಿಲ್ಲ. ಅಲ್ಲದೇ ಧನ ಹಾನಿ ಸಹ ಯಾವತ್ತೂ ಆಗುವುದಿಲ್ಲ.

gilt-kubera_2613

5)ಉತ್ತರಕ್ಕೆ ಮುಖ ಮಾಡಿ ಇಟ್ಟಿರುವ ಕುಬೇರನ ಮೂರ್ತಿ :

ಹೆಚ್ಚಿನ ಧನ ಲಾಭ ಪ್ರಾಪ್ತಿಯಾಗಬೇಕಾದರೆ ಮನೆಯಲ್ಲಿ ಲಕ್ಷ್ಮಿ ದೇವಿಯ ಜೊತೆ ಭಗವಾನ್‌ ಕುಬೇರನ ಮೂರ್ತಿ ಇಟ್ಟು ಪೂಜೆ ಮಾಡಬೇಕು. ಕುಬೇರನನ್ನು ಉತ್ತರ ದಿಕ್ಕಿನ ದೇವತೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಮೂರ್ತಿಯನ್ನು ಉತ್ತರ ದಿಕ್ಕಿನಲ್ಲಿಟ್ಟು ಪೂಜೆ ಮಾಡಿ.

%e0%b2%b0%e0%b2%82%e0%b2%97%e0%b3%8b%e0%b2%b2%e0%b2%bf

6)ರಂಗೋಲಿ:

ದೀಪಾವಳಿ ಹಬ್ಬದಲ್ಲಿ ಮನೆಯ ಗೋಡೆಗಳಿಗೆ ಹೊಸದಾಗಿ ‘ಸುಣ್ಣ’ ಬಣ್ಣಗಳನ್ನು ಹೊಡೆಯಲಾಗುವುದು. ಹಾಗೂ ರಂಗೋಲಿಯನ್ನು ಹಾಕುವುದರಿಂದ ಲಕ್ಷ್ಮಿ ದೇವತೆ ಪ್ರಸನ್ನಳಾಗುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಭಾರತದಲ್ಲಿ ದವಸ ಧಾನ್ಯಗಳಿಂದ ರಂಗೋಲಿಯನ್ನು ಸಿದ್ದಪಡಿಸಲಾಗುತ್ತದೆ. ಬಿಳಿಯ ಬಣ್ಣ ಶಾಂತಿ ಮತ್ತು ಪವಿತ್ರತೆ ಮತ್ತು ಸ್ಥೈರ್ಯದ ಸಂಕೇತವಾಗಿರುವುದರಿಂದ ಗೋಡೆಗಳಿಗೆ ಬಳಿಯುವ ಬಣ್ಣ ಸಹಜವಾಗಿ ಬಿಳಿ ಬಣ್ಣದಾಗಿರುತ್ತದೆ. ಹೀಗೆ ದೀಪಾವಳಿ ಹಬ್ಬದಲ್ಲಿ ರಂಗೋಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

%e0%b2%a4%e0%b2%be%e0%b2%b5%e0%b2%b0%e0%b3%86-%e0%b2%b9%e0%b3%82

7)ತಾವರೆ ಹೂ:

ಲಕ್ಷ್ಮೀಗೆ ತಾವರೆ ಹೂವಿಗೂ ನೆರವಾದ ಹೋಲಿಕೆಗಳನ್ನು ಕೊಡ್ತೀವಿ. ಲಕ್ಷ್ಮೀಗೆ ಈ ಹೆಸರುಗಳು  ಬಂದಿರೋದೇ ತಾವರೆ ಹೂವಿನಿಂದ. “ಪದ್ಮ”, “ಕಮಲ” ಅಂದರೆ ತಾವರೆ ಹೂವಲ್ಲಿ ನೆಲೆಸಿವವಳು, “ಪದ್ಮಪ್ರಿಯೆ’ ಅಂದ್ರೆ ತಾವರೆ ಹೂವನ್ನ ಇಷ್ಟಪಡೋಳು. “ಪದ್ಮಮಾಲಾಧರಾದೇವಿ” ಅಂದರೆ ತಾವರೆ ಹೂವಿನ ಹಾರ ಹಾಕಿಕೊಂಡಿರುವವಳು ಎಂದರ್ಥ. “ಪದ್ಮಾಕ್ಷಿ” ತಾವರೆಯಂತಹ ಕಣ್ಣೋಳೆ ಎಂಬರ್ಥ ಇದರಿಂದ ಲಕ್ಷ್ಮೀಮಿಗೆ ಅತಿಪ್ರೀಯವಾದುದ್ದರಿಂದ ನಾವು ಮನೆಯಲ್ಲಿಟ್ಟರೆ ಲಕ್ಷ್ಮೀದೇವಿಕೂಡ ಮನೆಯಲ್ಲಿ ನೆಲೆಸುತ್ತಾಳೆ.

owl-statue

8)ಲಕ್ಷ್ಮೀದೇವಿಯ ವಾಹನ ಗೂಬೆ:

ಲಕ್ಷ್ಮೀದೇವಿಗೆ ದಿನಾ ಪೂಜೆ ಮಾಡ್ತಾರೆ ಆದ್ರೂ ಶರದೃತುನಲ್ಲಿ ವಿಶೇಷ ಪೂಜೆ, ನೈವೇದ್ಯ, ಸಹಸ್ರನಾಮ ಪಾರಾಯಣ ಎಲ್ಲಾ ನಡೆಯುತ್ತೆ. ಹುಣ್ಣಿಮೆ ಇದ್ದಾಗ ಲಕ್ಷ್ಮೀ ಪೂಜೆ ಮಾಡೋ ಪದ್ದತಿ ಇದೆ. ಲಕ್ಷ್ಮೀದೇವಿಯ ವಾಹನ ಗೂಬೆ ಅನ್ನೋ ನಂಬಿಕೆ ಇಲ್ಲಿದೆ. ಈ ಲಕ್ಷ್ಮೀದೇವಿ ನಮ್ಮ ಲೋಕಕ್ಕೆ ಹುಣ್ಣಿಮೆಯ ರಾತ್ರಿ ಬಂದು ನಮ್ಮ ಕತ್ತಲು (ಕಷ್ಟ, ನೋವುಗಳು, ಕೋಪ, ಸೋಮಾರಿತನ) ಇದನ್ನೆಲ್ಲಾ ತಗೆದುಕೊಂಡು ಹೋಗುತ್ತಾಳೆ ಅನ್ನುವ ನಂಬಿಕೆ ಇದೆ. ಅದ್ದರಿಂದ ಗೂಬೆ ಇಕ್ಷ್ಣಕಣ್ಣೋಳು, ವೈಭೋಗದ ಮತ್ತೆ ಬಿದ್ಧಿವಂತಿಕೆಯ ಸಂಕೆತ ಅಂತ ನೋಡುತ್ತಾರೆ. ಅದ್ದರಿಂದ ಗೂಬೆಯನ್ನು ಮನೆಯಲ್ಲಿಟ್ಟು ಪೂಜೆಮಾಡುವುದಾಗಿ ಹೆಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top