fbpx
ಕನ್ನಡ

ನೆರೆಯ ಹೈದರಾಬಾದ್’ನಲ್ಲಿ ಕನ್ನಡಕ್ಕಾಗಿ ಗುಡುಗಿ ಗೆದ್ದ ಡಿ ಬಾಸ್.

ನೆರೆಯ ಹೈದರಾಬಾದ್’ನಲ್ಲಿ ಕನ್ನಡಕ್ಕಾಗಿ ಗುಡುಗಿ ಗೆದ್ದ ‘ಡಿ ಬಾಸ್’.

 

 

ಕನ್ನಡಕ್ಕಾಗಿ ಕರ್ನಾಟದಲ್ಲಿ ಹೋರಾಟ ಪ್ರತಿಭಟನೆ ಮಾಡುವ ಅನೇಕ ಹೋರಾಟಗಾರರನ್ನ ನಾವು ನೋಡಿರುತ್ತೇವೆ. ಆದರೆ ನಟ ದರ್ಶನ್ ಕನ್ನಡದ ವಿಚಾರವಾಗಿ ಪಕ್ಕದ ರಾಜ್ಯದಲ್ಲಿ ಜಗಳ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರೆಯ ಹೈದರಾಬಾದ್ ನಲ್ಲಿ ಕನ್ನಡ ಪ್ರೇಮ ಮೆರೆದಿದ್ದಾರೆ. ಹೌದು ದರ್ಶನ್ ಕನ್ನಡ ವಿಚಾರವಾಗಿ ಹೈದರಾಬಾದ್ ನಲ್ಲಿ ಜಗಳ ಮಾಡಿಕೊಂಡಿದ್ದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

 

 

ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾದಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು , ಆ ವೇಳೆ ಶೂಟಿಂಗ್’ಗೆ ಸ್ವಲ್ಪ ಹೊತ್ತು ಬ್ರೇಕ್ ಇದುದ್ದರಿಂದ ದರ್ಶನ್ ಅವರು ಚಿತ್ರ ತಂಡದವರೊಂದಿಗೆ ಅಲ್ಲಿನ ಸ್ಥಳಿಯ ಹೋಟೆಲ್ ಒಂದಕ್ಕೆ ತೆರಳಿ ವಿಶ್ರಮಿಸುತ್ತಿದ್ದರು. ಸ್ಟಾರ್‌ ಹೋಟೆಲ್‌ ರೂಮ್‌ಗೆ ಹೋದರೆ ಅಲ್ಲಿರುವ ಟಿವಿಯಲ್ಲಿ ಕನ್ನಡದ ಯಾವ ಚಾನೆಲ್‌ಗ‌ಳೂ ಬರುತ್ತಿರಲಿಲ್ಲವಂತೆ. ಕೇವಲ ತೆಲುಗು, ತಮಿಳು, ಹಿಂದಿ ಇತರೆ ಭಾಷೆ ಬರುತ್ತಿದ್ದವಂತೆ.

 

 

ಆಗ ಬೇಸರಗೊಂಡ ದರ್ಶನ್ ಕನ್ನಡ ಚಾನೆಲ್‌ ಗಳಿಗಾಗಿ ಬೇಡಿಕೆಯಿಟ್ಟಿದ್ದಾರೆ. ಅಲ್ಲಿನ ಸಿಬ್ಬಂದಿ ಕನ್ನಡ ಚಾನೆಲ್‌ ಬರಲ್ಲ ಎಂದು ಹೇಳಿದಾಗ ತಾಳ್ಮೆ ಕಳೆದುಕೊಂಡ ದರ್ಶನ್ “ನಮ್ಮೂರಿಗೆ ಬನ್ನಿ, ನಿಮಗೆ ಯಾವ ಭಾಷೆಯ ಚಾನೆಲ್‌ ಬೇಕು ಸಿಗುತ್ತೆ, ಇಲ್ಲೇಕೆ ಕನ್ನಡ ಚಾನೆಲ್‌ ಸಿಗೋದಿಲ್ಲ” ಅಂತ ಗಲಾಟೆ ಮಾಡಿ ಪಟ್ಟು ಹಿಡಿದಿದ್ದಾರೆ.ಕೊನೆಗೆ ದರ್ಶನ್ ಅವರ ಹಠಕ್ಕೆ ಸೋತ ಆ ಸ್ಟಾರ್ ಹೋಟೆಲ್ ನ ಸಿಬ್ಬಂದಿ ಕನ್ನಡ ಚಾನೆಲ್‌ ಹಾಕಿಸಿಕೊಟ್ಟಿದ್ದಾರೆ. ನಂತರ ಕನ್ನಡ ಚಾನೆಲ್ ಗಳನ್ನೂ ನೋಡಿ ದರ್ಶನ್ ಖುಷಿಪಟ್ಟರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top