ದೇವರು

ಮನೆಯ ಕಷ್ಟಗಳು ಕಳೆದು ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸಬೇಕು ಅಂದ್ರೆ ರಾತ್ರಿ ಮಲಗುವ ಸಮಯದಲ್ಲಿ ಈ ಕೆಲ್ಸಗಳನ್ನ ಮಾಡಿ

ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸಬೇಕು ಅಂದ್ರೆ ರಾತ್ರಿ ಮಲಗುವ ಸಮಯದಲ್ಲಿ ಈ ಕೆಲ್ಸಗಳನ್ನ ಮಾಡಿ

 

 

ನಾವು ಏನು ಕೆಲಸ ಮಾಡಿದ್ರು ಅದು ದುಡ್ಡಿಗಾಗಿ ,ಎಲ್ಲಾರು ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ, ಈ ದುಡ್ಡಿಗಾಗಿ ಲಕ್ಷ್ಮಿ ಕಟಾಕ್ಷ ಬೇಕು ,ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ನೆಲಸಬೇಕಂದ್ರೆ ಈ ಕೆಳಗಿನ ಕೆಲಸಗಳನ್ನ ಮಾಡಿ

೧.ಮನೆಯಲ್ಲಿ ಹೆಣ್ಣು ಮಕ್ಕಳು ತಿಳಿದೋ ಅಥವಾ ತಿಳಿಯದೆಯೋ ಅಡುಗೆ ಮನೆಯಲ್ಲಿ ರಾತ್ರಿ ತಿಂದ ಪಾತ್ರೆ ಸಾಮಾನುಗಳನ್ನು ತೊಳೆಯದೆ ಹಾಗೇ ಬಿಟ್ಟು ಮಲಗುತ್ತಾರೆ ,ಅಡುಗೆ ಮನೆ ಅನ್ನಪೂರ್ಣಿ ಇರುವಂತ ಸ್ಥಳ ,ಅದು ಯಾವಾಗಲು ಶುಚಿ ಯಾಗಿರಬೇಕು ಆದರಿಂದ ಅಡುಗೆ ಮನೆಯನ್ನು ಯಾವಾಗಲು ಶುಚಿಯಾಗಿ ಇಟ್ಟುಕೊಳ್ಳಬೇಕು ಇದರಿಂದ ಲಕ್ಷಿ ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ .

 

 

೨.ರಾತ್ರಿ ಹೊತ್ತು ಹಾಲು ಮತ್ತು ಮೊಸರನ್ನು ಯಾರಿಗೂ ಕೊಡಬಾರದು ,ಹಾಗೇ ಕೊಟ್ಟಾರೆ ನಮ್ಮ ಮನೆಯ ಲಕ್ಷಿಯನ್ನು ನಾವೇ ನಮ್ಮ ಮನೆಯಿಂದ ಹೊರಹಾಕಿದಂತೆ.

೩.ಹೆಣ್ಣು ಮಕ್ಕಳು ರಾತ್ರಿ ಮಲಗುವ ಮುನ್ನ ತಲೆ ಕೂದಲನ್ನು ಬಿಟ್ಟುಕೊಂಡು ಮಲಗಬಾರದು ,ತಲೆ ಕೂದಲು ಬಿಟ್ಟುಕೊಂಡು ಮಲಗುವುದು ರಾಕ್ಷಸ ಗುಣ ಅದರಿಂದ ಲಕ್ಷಿ ದೇವಿ ಮನೆಯಿಂದ ಹೊರಹೋಗುತ್ತಾಳೆ .

 

 

೪.ರಾತ್ರಿ ಮಲಗುವ ಮುನ್ನ ತುಂಬಾ ಜನ ಅವರ ತಲೆ ಹತ್ತಿರ ನೀರನ್ನು ಇಟ್ಟುಕೊಂಡು ಮಲಗುತ್ತಾರೆ ಅದು ಮನೆಯಲ್ಲಿನ ದರಿದ್ರ ಗಳಿಗೆ ಕಾರಣವಾಗುತ್ತದೆ.

 

೫.ಮನೆಯ ಒಡತಿ ರಾತ್ರಿ ಮಲಗುವ ಮುನ್ನ ಸ್ವಲ್ಪ ಉಪ್ಪನ್ನು ಒಂದು ಒಂದು ಬಟ್ಟೆಯಲ್ಲಿ ಕಟ್ಟಿ ಪ್ರತಿಯೊಂದು ಕೋಣೆಯ ಮೂಲೆಯಲ್ಲಿ ಇರಿಸಿ ನಂತರ ಬೆಳಿಗ್ಗೆ ಯಾರ ಬಳಿಯೂ ಮಾತನಾಡದೆ ಆ ಉಪ್ಪಿನ ಬಟ್ಟೆಯನ್ನು ಹೊರಗಡೆ ಯಾರು ಹೋಗದ ಜಾಗದಲ್ಲಿ ಬಿಸಾಡಬೇಕು ಇದರಿಂದ ಮನೆಯಲ್ಲಿ ಇರುವಂತ ಎಲ್ಲ ನಕಾರಾತ್ಮಕ ಶಕ್ತಿ ಹೊರಗಡೆ ಹೋಗಿ ಲಕ್ಷ್ಮಿ ದೇವಿ ಸದಾ ಕಾಲ ಮನೆಯಲ್ಲಿ ನೆಲೆಸಿರುತ್ತಾಳೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top