ಆರೋಗ್ಯ

ಅಯ್ಯೋ ಈ ದರಿದ್ರ ಅಸಿಡಿಟಿ ಜಾಸ್ತಿ ಆಗಿ ಎದೆ ಭಗ ಭಗ ಅಂತಾ ಉರೀತಿದೆ ಅನ್ನೋರು ಈ ಮನೆಮದ್ದು ಮಾಡ್ಕೊಳ್ಳಿ ಸರಿ ಹೋಗುತ್ತೆ..

ಅಯ್ಯೋ ಈ ದರಿದ್ರ ಅಸಿಡಿಟಿ ಜಾಸ್ತಿ ಆಗಿ ಎದೆ ಭಗ ಭಗ ಅಂತಾ ಉರೀತಿದೆ ಅನ್ನೋರು ಈ ಮನೆಮದ್ದು ಮಾಡ್ಕೊಳ್ಳಿ ಸರಿ ಹೋಗುತ್ತೆ..

 

ಅಸಿಡಿಟಿ ಅಥವಾ ಎದೆ ಉರಿ ಸಮಸ್ಯೆಗೆ ಮನೆ ಮದ್ದುಗಳು

ದೇಹದಲ್ಲಿ ಅಸಿಡಿಟಿ ಹೆಚ್ಚಾಗಿ ಇದರಿಂದ ಕಂಡುಬರುವ ಎದೆ ಉರಿ ಸಮಸ್ಯೆಗೆ ಕೆಲವು ಮನೆಮದ್ದುಗಳನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಅವು ಯಾವುವು ಎಂದು ನೋಡೋಣ

 

ಬಾದಾಮಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಗಿನ ಜಾವ ತಿಂಡಿಗೆ ಮುಂಚೆ ತಿನ್ನಬೇಕು ಹೀಗೆ ಎರಡರಿಂದ ಮೂರು ಬೀಜ ತಿಂದರೆ ಆಸಿಡಿಟಿ ಯಿಂದ ಮುಕ್ತಿ ಹೊಂದಬಹುದು.

 

 

ಸಣ್ಣ ಹೋಳು ನಿಂಬೆಹಣ್ಣು ಕತ್ತರಿಸಿ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಊಟಕ್ಕೆ ಮುಂಚೆ ಸೇವನೆ ಮಾಡಿ.

 

 

ಲವಂಗವನ್ನು ಬಾಯಿಯಲ್ಲಿ ಹಾಕಿಕೊಂಡು ನಿಧಾನವಾಗಿ ಅದರ ರಸವನ್ನು ಸೇವಿಸಿ.

 

 

ಎಲೆಕೋಸನ್ನು ಸಣ್ಣದಾಗಿ ಕತ್ತರಿಸಿ ಪಲ್ಯ ಮಾಡಿಕೊಂಡು ಸೇವಿಸಿ ಅಥವಾ ಚೆನ್ನಾಗಿ ರುಬ್ಬಿಕೊಂಡು ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಸಹ ಸೇವಿಸಬಹುದು.

 

 

ಊಟದ ನಂತರ ಸಣ್ಣ ತುಂಡು ಬೆಲ್ಲವನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ ಇದು ಸಹ ಅಸಿಡಿಟಿಯನ್ನು ನಿಯಂತ್ರಿಸಿ ಎದೆಉರಿಯನ್ನು ತಪ್ಪಿಸುತ್ತದೆ .

 

 

ಕೊತ್ತಂಬರಿ ಬೀಜ – 5 ಚಮಚ , ಮೆಂತ್ಯ 1 ಚಮಚ , ಲವಂಗದ ಎಲೆ 1 ದೊಡ್ಡ , ಜೀರಿಗೆ – ½ ಚಮಚ, ಸಾಸಿವೆ – ½ ಚಮಚ , ದಾಲ್ಚಿನ್ನಿ 1- ಅರ್ಧ ಅಂಗುಲ ಕಡ್ಡಿ , ಲವಂಗ – 5 , ಅರಿಶಿನ – 2 ಚಮಚ , ಅರಿಶಿನವನ್ನು ಬಿಟ್ಟು ಉಳಿದ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ಪುಡಿ ಮಾಡಿಕೊಳ್ಳಬೇಕು ಇದನ್ನು ಸ್ವಲ್ಪ ಉಪ್ಪು ಸೇರಿಸಿ ನೀರಿನೊಂದಿಗೆ ಅಥವಾ ಹಣ್ಣುಗಳ ಮೇಲೆ ಬೆರೆಸಿ ತಿನ್ನಬಹುದು.

 

 

ಒಂದು ಲೋಟ ನೀರಿಗೆ ಅರ್ಧ ಚಮಚ ವಿನೆಗರನ್ನು ಊಟ ಆದ ನಂತರ ಸೇವಿಸಿ.

 

 

ಆಗಾಗ ಎಳನೀರನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.

 

 

ಎರಡು ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುಡಿಸಿ ಈ ನೀರನ್ನು ಕುಡಿಯುತ್ತಾ ಬನ್ನಿ ಇದು ಸಹ ಅಸಿಡಿಟಿಯನ್ನು ತಪ್ಪಿಸುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top