ಆರೋಗ್ಯ

ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಸಿವೆ ಎಣ್ಣೆಯನ್ನು ಈ ರೀತಿ ಬಳಸಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಸಿವೆ ಎಣ್ಣೆಯನ್ನು ಈ ರೀತಿ ಬಳಸಿ.

ಎಲ್ಲರಿಗೂ ಅವರವರ ಸೌಂದರ್ಯದ ಬಗ್ಗೆ ಕಾಳಜಿ ಇದ್ದೆ ಇರುತ್ತದೆ.ನಾವು ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ದೊರೆಕುವ ಯಾವುದಾವುದೋ ಕ್ರೀಮ್ ಗಳನ್ನೂ ತಂದು ಮುಖದ ಅಂದವನ್ನು ಹಾಳು ಮಾಡಿಕೊಳ್ಳುತ್ತೇವೆ.ಹಿತ್ತಲ ಗಿಡ ಮದ್ದು ಎಂಬ ಗಾದೆ ಮಾತಿದೆ.ಹಾಗೆ ನಿಮ್ಮ ಸೌಂದರ್ಯದ ಸರ್ವ ಸಮಸ್ಯೆಗಳಿಗೆ ಅಡುಗೆ ಮನೆ ಉತ್ತಮ ಔಷಧಿ ಎಂದು ನಿಮಗೆ ತಿಳಿದಿದೆಯೇ? ಹೌದು ನಿಮ್ಮ ಸೌಂದರ್ಯದ ಸಮಸ್ಯೆಗೆ ವೈದ್ಯರನ್ನು ಕಾಣುವ ಮೊದಲು ನಿಮ್ಮ ಅಡುಗೆ ಮನೆಯ ಕಡೆ ಕಣ್ಣಾಡಿಸಿ.ಸಾಸಿವೆ ಮತ್ತು ಸಾಸಿವೆ ಎಣ್ಣೆ ಅಡುಗೆಗೆ ರುಚಿ ಕೊಡುವುದರ ಜೊತೆಗೆ ಆರೋಗ್ಯಕ್ಕೆ ಲಾಭ ತರುತ್ತದೆ ಎಂದು ನಿಮಗೆ ತಿಳಿದಿದೆ.ಸಾಸಿವೆ ಎಣ್ಣೆ ನೈಸರ್ಗಿಕ ಕ್ಲೆನ್ಸರ್ ಗುಣಗಳನ್ನು ಹೊಂದಿದೆ.

 

 

ನೀವು ಹೆಚ್ಚು ಮೇಕ್ಅಪ್ ಮಾಡಿಕೊಂಡು ಅದನ್ನು ಹೋಗಲಾಡಿಸುವಲ್ಲಿ ಸಾಕಾಗಿ ಹೋಗುತ್ತದೆ.ಆಗ ಸಾಸಿವೆ ಎಣ್ಣೆ ತುಂಬಾ ಉಪಯೋಗಕಾರಿಯಾಗಿರುತ್ತದೆ. ಸಾಸಿವೆ ಎಣ್ಣೆಯಲ್ಲಿ ವಿಟಮಿನ್- ಈ ಅಧಿಕವಾಗಿದೆ.ಮುಖದ ಮೇಲಿನ ಸಣ್ಣ ಗೆರೆಗಳು ಮತ್ತು ನೆರಿಗೆಗಳನ್ನು ಹೋಗಲಾಡಿಸಲು ಸಾಸಿವೆ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.ಹಾಗು ನವಜಾತ ಶಿಶುವಿಗೆ ಈ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಉತ್ತಮ ಅರೋಗ್ಯ ಪಡೆಯಬಹುದು.ಮುಖದ ಮೇಲಿನ ಕಲೆಗಳ ನಿವಾರಣೆಯಲ್ಲಿ ಸಾಸಿವೆ ಎಣ್ಣೆ ಉಪಯೋಗಕಾರಿಯಾಗಿದೆ.

 

 

ಇದೊಂದು ಉತ್ತಮ ಸನ್ ಸ್ಕ್ರೀನ್ ಲೋಷನ್ ನಂತೆ ಕಾರ್ಯ ನಿರ್ವಹಿಸುತ್ತದೆ.ನಿಮ್ಮದು ಎಣ್ಣೆ ಚರ್ಮವಾದಲ್ಲಿ ಸಾಸಿವೆ ಎಣ್ಣೆ ಕಿರಿಕಿರಿ ಉಂಟು ಮಾಡಬಹುದು.ಇದಕ್ಕೆ ಸಮ ಪ್ರಮಾಣದಲ್ಲಿ ತೆಂಗಿನ ಎಣ್ಣೆಯನ್ನು ಸೇರಿಸಿ ನಂತರ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.ಈ ಮೂಲಕ ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸಬಹುದು.ಚಳಿಗಾಲದಲ್ಲಿ ತ್ವಚೆ ಒಣಗಿರುತ್ತದೆ ಮತ್ತು ತೇವಾಂಶದ ಅಗತ್ಯತೆ ಚರ್ಮಕ್ಕೆ ಇರುತ್ತದೆ.ಆಗ ಸಾಸಿವೆ ಎಣ್ಣೆ ಯಿಂದ ನಯವಾಗಿ ಮಸಾಜ್ ಮಾಡುವುದರಿಂದ ಒಣ ತ್ವಚೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

 

 

ಒಂದು ಬಟ್ಟಲಿನಲ್ಲಿ ಸಾಸಿವೆ ಎಣ್ಣೆ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು ಸ್ವಲ್ಪ ಹನಿ ನಿಂಬೆ ಹಣ್ಣಿನ ರಸ ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ.ಹೊಳೆಯುವ ತ್ವಚೆಯನ್ನು ಪಡೆಯಿರಿ.ಎರಡರಿಂದ ಮೂರು ಚಮಚ ಸಾಸಿವೆ ಎಣ್ಣೆ ಮತ್ತು ನಿಂಬೆ ರಸವನ್ನು ಬೆರೆಸಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು ಹದಿನೈದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದರೆ ಬಿಸಿಲಿನಿಂದ ಮೂಡಿರುವ ಟಾನ್ ಅನ್ನು ನಿವಾರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top