ಭವಿಷ್ಯ

ಜನವರಿ 07 :ನಿತ್ಯಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೦೭ ಜನವರಿ ೨೦೧೮
ಸೂರ್ಯೋದಯ : ೦೬:೪೭
ಸೂರ್ಯಾಸ್ತ : ೧೮:೦೪
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಕೃಷ್ಣ ಪಕ್ಷ
ತಿಥಿ : ಷಷ್ಠೀ
ನಕ್ಷತ್ರ : ಉತ್ತರ ಫಾಲ್ಗುಣಿ
ಯೋಗ : ಸೌಭಾಗ್ಯ
ಪ್ರಥಮ ಕರಣ : ವಣಿಜ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೨:೦೩ – ೧೨:೪೮
ಅಮೃತಕಾಲ : ೧೮:೦೧ – ೧೯:೩೬
ರಾಹು ಕಾಲ: ೧೬:೩೯ – ೧೮:೦೪
ಗುಳಿಕ ಕಾಲ: ೧೫:೧೫ – ೧೬:೩೯
ಯಮಗಂಡ: ೧೨:೨೫ – ೧೩:೫೦

 

ಮೇಷ (Mesha)

ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕುದುರಿಯಾವು. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಸಿಗಲಿದೆ. ಮಹಿಳೆಯರು ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಯನ್ನು ಬಿಡತಕ್ಕದ್ದು

 

ವೃಷಭ (Vrushabha)

ವೈಯಕ್ತಿಕ ಆರೋಗ್ಯ ಬಗ್ಗೆ ಗಮನ ಹರಿಸಬೇಕು. ಹೆಂಡತಿಯ ವಸ್ತ್ರಾಭರಣಗಳಿಗಾಗಿ ಧನವ್ಯಯವಾಗುತ್ತದೆ. ಹಿರಿಯರಿಗೆ ದೇವತಾ ದರ್ಶನ ಭಾಗ್ಯ ದಿನಾಂತ್ಯದಲ್ಲಿ ಶುಭವಾರ್ತೆ.

 

ಮಿಥುನ (Mithuna)

ಅನಿರೀಕ್ಷಿತ ಶುಭವಾರ್ತೆ ಅಚ್ಚರಿ ತಂದೀತು. ಅದೇ ರೀತಿಯಲ್ಲಿ ನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆ ಇದ್ದು ಸಮಾಧಾನ ತಂದೀತು. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರುತ್ತವೆ.

 

ಕರ್ಕ (Karka)

ಸಾಂಸಾರಿಕವಾಗಿ ಹೆಂಡತಿಯೊಡನೆ ಸಹಮತವಿರಲಿ. ಮನೆಯ ಗೃಹೋಪಕರಣಗಳಿಗಾಗಿ ಖರೀದಿ ಇರುತ್ತದೆ. ಹಿರಿಯರೊಡನೆ ವಾದ, ವಿವಾದಗಳಿಂದ ಕಿರಿಕಿರಿ ತೋರಿ ಬಂದೀತು.

 

ಸಿಂಹ (Simha)

ದೇಹಾರೋಗ್ಯ ಸುಧಾರಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಇರುತ್ತದೆ. ಹಾಗೆ ಸಾಂಸಾರಿಕವಾಗಿ ಮುನ್ನಡೆ ತೋರಿ ಬಂದು ಸಮಾಧಾನ ವಿರುತ್ತದೆ. ಸಂಚಾರದ ಸಾಧ್ಯತೆ ಇದೆ.

 

ಕನ್ಯಾರಾಶಿ (Kanya)

ಸಕಾಲದಲ್ಲಿ ಪ್ರಮುಖ ಕೆಲಸಗಳನ್ನು ಮುಗಿಸಬೇಕೆಂದರೂ ಈ ದಿನ ವಿಳಂಬ ತೋರುವುದು. ಗಣಪತಿಯ ಪ್ರಾರ್ಥನೆಯೊಂದಿಗೆ ದಿನಚರಿಯನ್ನು ಆರಂಭಿಸಿರಿ ಒಳಿತಾಗುವುದು. ಸಂತೋಷಕರ ಸುದ್ದಿಗಳನ್ನು ಕೇಳುವಿರಿ.

 

ತುಲಾ (Tula)

ಕುಟುಂಬದಲ್ಲಿ ಶುಭ ಸಮಾಚಾರ ಕೇಳುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಹಣಕಾಸಿನ ಮುಗ್ಗಟ್ಟು ನಿವಾರಣೆ ಆಗಲಿದೆ. ಅಮೂಲ್ಯ ವಸ್ತುವಿನ ಖರೀದಿಯಿಂದ ಲಾಭವುಂಟಾಗುವುದು

 

ವೃಶ್ಚಿಕ (Vrushchika)

ಸಾಧಕವಲ್ಲದ ಸಾಧ್ಯತೆಗಳು ನಿಮ್ಮತ್ತ ತಿರುಗುತ್ತವೆ. ಸಾಮಾಜಿಕವಾಗಿ ನಿಮ್ಮ ಮಾನ-ಪ್ರತಿಷ್ಠೆಗಳು ವೃದ್ಧಿಗೊಳ್ಳುವುದು. ನೀವು ಬಯಸಿದ ಕಾರ್ಯ ಇಂದು ನೆರವೇರುವುದು.

 

ಧನು ರಾಶಿ (Dhanu)

ಹಮ್ಮಿಕೊಂಡ ಕಾರ್ಯದಲ್ಲಿ ಅರ್ಧ ಯಶಸ್ಸು ಉಂಟಾಗುವುದು. ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.

 

ಮಕರ (Makara)

ಅಡೆತಡೆಗಳಿಂದಲೇ ತುಂಬಿದ ದಾರಿಯಾಗಿ, ಸರಳವಾದ ವಿಚಾರಗಳೂ ಕಠಿಣವಾಗಬಹುದು. ತಾಳ್ಮೆ ಇರಲಿ. ಸೂಕ್ಷ್ಮವಾದ ನಿಲುವುಗಳನ್ನು ಹೊಂದಿರಿ.ನಿಮ್ಮ ಪರಿಪಕ್ವವಾದ ಸಂಘಟನಾ ಶಕ್ತಿನಿಮಗೆ ಯಶಸ್ಸನ್ನು ತರಲಿದೆ.

 

ಕುಂಭರಾಶಿ (Kumbha)

ಮಕ್ಕಳು ನಿಮ್ಮನ್ನು ತುಸು ನೋವಿಗೆ ಈಡು ಮಾಡಬಹುದು. ಅವರನ್ನು ಮಮತೆಯ ಮಾತುಗಳಿಂದ ಸಂತೈಸಿಬಿಡಿ. ಇರುವ ಕೆಲಸಗಳನ್ನು ಮುತುವರ್ಜಿಯಿಂದ ಮಾಡಿ.

 

ಮೀನರಾಶಿ (Meena)

ಕುಟುಂಬದ ಅಭಿವೃದ್ಧಿ ಕಾಣುತ್ತಿದ್ದರೂ ದೇಹಾರೋಗ್ಯದ ಬಗ್ಗೆ ಮಾತ್ರ ಜಾಗ್ರತೆ ವಹಿಸಬೇಕಾಗುತ್ತದೆ. ದೇವತಾ ಕಾರ್ಯಗಳಿಗಾಗಿ ಖರ್ಚು ಬರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸಬಲ ಅಗತ್ಯವಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top