ಆರೋಗ್ಯ

ಕಡಲೆಹಿಟ್ಟನ್ನು ಈ ರೀತಿಯಾಗಿ ಬಳಸಿ ಸುಂದರ ತ್ವಚೆ ಮತ್ತು ಕೂದಲನ್ನು ಪಡೆಯಿರಿ.

ಕಡಲೆಹಿಟ್ಟನ್ನು ಈ ರೀತಿಯಾಗಿ ಬಳಸಿ ಸುಂದರ ತ್ವಚೆ ಮತ್ತು ಕೂದಲನ್ನು ಪಡೆಯಿರಿ.

ಕಡಲೆ ಹಿಟ್ಟು ತ್ವಚೆಗೆ ತುಂಬಾ ಒಳ್ಳೆಯದು.ನಾವು ಬಳಸುವ ಸೋಪಿಗಿಂತ ಕಡಲೆ ಹಿಟ್ಟು ಚರ್ಮಕ್ಕೆ ಒಳ್ಳೆಯದು.ಕಡಲೆ ಹಿಟ್ಟಿನಲ್ಲಿ ಯಾವುದೇ ಹಾನಿಕಾರಕ ಪದಾರ್ಥಗಳು ಇರುವುದಿಲ್ಲ. ಇದನ್ನು ಬಳಸಿದ್ದಲ್ಲಿ ಚರ್ಮದ ಕಲೆಗಳನ್ನು ಹೋಗಲಾಡಿಸಬಹುದು.ನಿಯಮಿತವಾಗಿ ದೇಹಕ್ಕೆ ಕಡಲೆ ಹಿಟ್ಟನ್ನು ಬಳಸುವುದರಿಂದ ಕಾಂತಿಯುತ ತ್ವಚೆಯು ನಮ್ಮದಾಗುತ್ತದೆ.

 

ಕೆಲವೊಂದು ಸಮಸ್ಯೆಗಳಿಗೆ ಕಡಲೆ ಹಿಟ್ಟಿನ ಟಿಪ್ಸ್ ಗಳು:
ಎರಡು ಚಮಚ ಕಡಲೆ ಹಿಟ್ಟಿಗೆ ಒಂದು ಹಿಡಿ ಹರಿಶಿನ ಕೆಲವು ಹನಿ ನಿಂಬೆ ರಸ ಮತ್ತು ಮೊಸರು ಹಾಕಿಕೊಂಡು ಬೆರೆಸಿ ಇದನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.ಇದನ್ನು ಒಣಗಲು ಬಿಡಿ. ಕೆಲವು ದಿನಗಳ ಕಾಲ ಹೀಗೆ ಮಾಡಿದ್ದಲ್ಲಿ ಕಲೆಗಳು ನಿಧಾನವಾಗಿ ಮಾಯವಾಗುವುದನ್ನು ನೀವು ಕಾಣಬಹುದು.ಎಣ್ಣೆ ಅಂಶವಿರುವ ತ್ವಚೆಯ ಆರೈಕೆಯಲ್ಲಿ ಕಡಲೆ ಹಿಟ್ಟು ಪ್ರಮುಖ ಪಾತ್ರ ವಹಿಸುತ್ತದೆ.ಸ್ವಲ್ಪ ಕಡಲೆ ಹಿಟ್ಟನ್ನ ರೋಜ್ ವಾಟರ್ ಜೊತೆ ಬೆರೆಸಿ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ.ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ ಎಣ್ಣೆ ಅಂಶವಿರುವ ಚರ್ಮವು ಸಾಮಾನ್ಯವಾಗುತ್ತದೆ.

 

 

ಮೊಡವೆ ನಿವಾರಿಸುವಲ್ಲಿ ಕಡಲೆ ಹಿಟ್ಟು ತುಂಬಾ ಪರಿಣಾಮಕಾರಿಯಾಗಿದೆ.ಒಂದು ಚಮಚ ಕಡಲೆ ಹಿಟ್ಟು, ಗಂಧದ ಪುಡಿ ಮತ್ತು ಹಾಲನ್ನು ಬೆರೆಸಿಕೊಂಡು ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಿ.ಒಂದು ಹಿಡಿಯಷ್ಟು ಹರಿಶಿಣವನ್ನು ಇದಕ್ಕೆ ಸೇರಿಸಿಕೊಳ್ಳಬಹುದು.ಒಳ್ಳೆಯ ಫಲಿತಾಂಶ ಪಡೆಯಲು ನಿಯಮಿತವಾಗಿ ಇದನ್ನು ಬಳಸಿಕೊಳ್ಳಿ.ಆರೋಗ್ಯಕರ ಕೂದಲು ಪಡೆಯಬೇಕಾದರೆ ಎರಡು ಟೀ ಚಮಚ ಕಡಲೆ ಹಿಟ್ಟು,ಒಂದು ಮೊಟ್ಟೆಯ ಬಿಳಿ, ಒಂದು ಟೀ ಚಮಚ ಮೊಸರು ಹಾಗೂ ಅರ್ಧ ಟೀ ಚಮಚ ನಿಂಬೆ ರಸ ಮಿಶ್ರಣದೊಂದಿಗೆ ಕೊಡಿದ ಪ್ಯಾಕ್ ಅನ್ನು ತಲೆಯ ಎಲ್ಲ ಭಾಗಗಳಿಗೆ ಹಚ್ಚಿ.ಶುಷ್ಕ ಮತ್ತು ತಂಪಾದ ನೀರಿನಿಂದ ತೊಳೆಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top