ದೇವರು

ಶಿವನು ಹುಲಿಯ ಚರ್ಮವನ್ನು ಯಾಕೆ ಧರಿಸಿರುತ್ತಾನೆ ಗೊತ್ತಾ ? ಶಿವಪುರಾಣದಲ್ಲಿ ಉಲ್ಲೇಖವಾಗಿರೋ ಅದರ ಹಿಂದಿರೋ ರೋಚಕ ಕಥೆ ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ಶಿವನು ಹುಲಿಯ ಚರ್ಮವನ್ನು ಯಾಕೆ ಧರಿಸಿರುತ್ತಾನೆ  ? ಎನ್ನುವುದಕ್ಕೆ ಕಾರಣ ಶಿವಪುರಾಣದಲ್ಲಿ ಈ ರೀತಿ ಉಲ್ಲೇಖವಾಗಿದೆ

 

 

ತ್ರಿಮೂರ್ತಿಗಳಲ್ಲಿ ಶಿವನು ಒಬ್ಬನು. ಸೃಷ್ಟಿ, ಸ್ಥಿತಿ ,ಲಯ, ಕಾರಕರು ಬ್ರಹ್ಮ ಮತ್ತು  ವಿಷ್ಣುಗಳಾದರೆ ಎಲ್ಲವನ್ನೂ ತನ್ನಲ್ಲಿ ಲಯ ಮಾಡಿಕೊಳ್ಳುವವನು ಶಿವನು. ಆದ್ದರಿಂದಲೇ ಶಿವನ ಆಜ್ಞೆ ಇಲ್ಲದೆ ಇರುವೆ ಕೂಡ  ಕಚ್ಚುವುದಿಲ್ಲ ಎಂಬ ನಾಣ್ನುಡಿ ಪ್ರಚಾರದಲ್ಲಿದೆ. ಮಹಾದೇವನಾದ ಶಿವನು ಸದಾ ನಿರಾಡಂಬರವಾಗಿ ಇರುತ್ತಾನೆ. ಇತರೆ ದೇವರುಗಳಂತೆ ಆಭರಣಗಳನ್ನು ಧರಿಸುವುದಿಲ್ಲ .

ಸ್ಮಶಾನಗಳಲ್ಲಿ ವಾಸಿಸುತ್ತಾನೆ. ಮೈಗೆಲ್ಲಾ ವಿಭೂತಿಯನ್ನು ಹಚ್ಚಿಕೊಳ್ಳುತ್ತಾನೆ. ಇಷ್ಟೇ ಅಲ್ಲದೆ ಕೇವಲ ಹುಲಿಯ ಚರ್ಮವನ್ನು ತನ್ನ ದೇಹಕ್ಕೆ ಸುತ್ತಿಕೊಂಡಿಲ್ಲ. ಇದಕ್ಕೆ ಕಾರಣ ಏನೆಂದು ತಿಳಿದುಕೊಳ್ಳೋಣ. ಒಂದು ಕಾಲದಲ್ಲಿ  ಶಿವನು ಮೈಮೇಲೆ ಯಾವುದೇ ರೀತಿಯ ವಸ್ತ್ರಗಳನ್ನು ಧರಿಸದೇ ದಿಗಂಬರನಾಗಿದ್ದವನು. ಒಂದು ಸಲ ಶಿವನು ಕಾಡಿನಲ್ಲಿ ದಿಗಂಬರನಾಗಿ ಪ್ರಯಾಣಿಸುತ್ತಿರುವಾಗ ಅವನ ತೇಜಸ್ಸನ್ನು ಕಂಡ ಋಷಿಗಳು, ಮಹರ್ಷಿಗಳು, ಪಂಡಿತರು ಪತ್ನಿಯರು ಆಶ್ಚರ್ಯಗೊಂಡರು. ಆತನ ಮುಖದ ತೇಜಸ್ಸನ್ನು ಕಂಡು ಆಕರ್ಷಿತರಾದರು.

ಶಿವನು ಅಲ್ಲಿಂದ ಹೋದ ನಂತರವೂ ನಿತ್ಯವೂ ಆತನನ್ನೇ ನೆನೆಸಿಕೊಳ್ಳುತ್ತಾ ಕುಟೀರದಲ್ಲಿ ಕೆಲಸಗಳನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಅವರು ಈ ರೀತಿಯಾಗಿ ಯಾಕೆ ವರ್ತಿಸುತ್ತಿದ್ದಾರೆ ಎಂದು ಅರಿತುಕೊಂಡ ಅವರ ಗಂಡಂದಿರು ಶಿವನನ್ನು ಕೊಲ್ಲಬೇಕೆಂದುಕೊಂಡು ಸಣ್ಣ ಉಪಾಯ ಮಾಡಿದರು.

ಶಿವನು ಬರುವ ದಾರಿಯಲ್ಲಿ ದೊಡ್ಡ ಹಳ್ಳವನ್ನು ತೋಡಿದರು. ಅದರಲ್ಲಿ ಅವರ ಮಂತ್ರ ಶಕ್ತಿಯಿಂದ ಅತ್ಯಂತ ಶಕ್ತಿಯುತವಾದ ಹುಲಿಯನ್ನು ಸೃಷ್ಟಿಸಿ ಬಿಡುತ್ತಾರೆ. ಆ ಹುಲಿಯು ಶಿವನು ಬರುವ ಸಮಯಕ್ಕೆ ಸರಿಯಾಗಿ ದಿಢೀರನೆ ಪ್ರತ್ಯಕ್ಷವಾಗಿ ದಾಳಿ ನಡೆಸಿತ್ತು.

 

 

ಮಹಾದೇವನಾದ ಶಿವನಿಗೆ ಯಾವ ಜೀವಿಯಾದರೂ ತನ್ನ ಹತೋಟಿಯಲ್ಲಿ ಹಾಗೂ ಆಡಿಯಲ್ಲಿಯೇ ಇರಬೇಕು. ತನ್ನ ಮೇಲೆ ದಾಳಿ ನಡೆಸಿದ ಹುಲಿಯನ್ನು ಶಿವನು ಕೊಂದು ಹಾಕುತ್ತಾನೆ  ನಂತರ ನಡೆದ ವಿಷಯವನ್ನು ತಿಳಿದು ಅಂದಿನಿಂದ ಆ ಹುಲಿಯ ಚರ್ಮವನ್ನೇ ಧರಿಸುತ್ತಿದ್ದಾನೆ. ಇದೇ ಶಿವನು ಹುಲಿಯ ಚರ್ಮವನ್ನು ಧರಿಸುವುದರ ಹಿಂದೆ ಇರುವ ನಿಜವಾದ ಕಾರಣ. ಇದರ ಬಗ್ಗೆ  ಶಿವ ಪುರಾಣಗಳಲ್ಲಿಯೂ ಸಹ ವಿವರಿಸಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top