ಆರೋಗ್ಯ

1500 ವರ್ಷ ಹಳೆಯ ಯಮಧರ್ಮ ರಾಯನ ದೇವಸ್ಥಾನ ತೆಲಂಗಾಣದಲ್ಲಿದೆ ಇಲ್ಲಿಗೆ ಭೇಟಿ ಕೊಟ್ರೆ ನರಕದ ಭಾದೆ ಮತ್ತೆ ರೋಗ ರುಜಿನಗಳು ಹತ್ತಿರಾನೂ ಬರಲ್ಲ

ಯಮಧರ್ಮ ರಾಯನಿಗೂ ಒಂದು ದೇವಸ್ಥಾನವಿದೆ ಎಂದು ನಿಮಗೆ ಗೊತ್ತಾ ? ಅಲ್ಲಿಗೆ ಭೇಟಿ ನೀಡಿ ಪೂಜಿಸಿದರೆ ಜಾತಕದಲ್ಲಿರುವ   ದೋಷಗಳೆಲ್ಲವೂ  ಪರಿಹಾರವಾಗುತ್ತವೆ.

 

 

ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟಿದ ಮೇಲೆ ಸಾಯಲೇಬೇಕು. “ಹುಟ್ಟು ನಿಶ್ಚಿತ,ಸಾವು ಖಚಿತ” ವ್ಯಕ್ತಿಯು  ಯಾವ ?  ಎಂತಹ  ? ಉನ್ನತ ಸ್ಥಾನದಲ್ಲಿಯೇ ಇದ್ದರೂ ಸಾವು ಎಂಬುದು ಶತಸಿದ್ದ. ನಮ್ಮ ಜೀವಿತಾವಧಿಯಲ್ಲಿ ನಮ್ಮ ಹತ್ತಿರ ಒಬ್ಬ ಅತಿಥಿ ಬರುತ್ತಾನೆ.ನೀವು ಕರೆಯದೇ ಇದ್ದರೂ ಬರುವ ಏಕೈಕ ವ್ಯಕ್ತಿ ನಿಮ್ಮ ಹತ್ತಿರ ಬಂದು ನಿಲ್ಲುತ್ತಾನೆ.ಎಲ್ಲಿ ?ಯಾವಾಗ ? ಹೇಗೆ ? ಎಂದು ತಿಳಿಯದೇ ಖಚಿತವಾಗಿ ,ನಿಶ್ಚಿತವಾಗಿ ಈ ಯಮ ಧರ್ಮರಾಯ ಅಂದರೆ ಮೃತ್ಯು ದೇವನು.ಈ ಮೃತ್ಯುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.ಕೆಲವು ಗಂಡಾಂತರಗಳಿಂದ ಸ್ವಲ್ಪ ಪಾರಾಗಬಹುದು ಎಂದು ಹೇಳುತ್ತಾರೆ ನಮ್ಮ ಹಿರಿಯರು.

 

 

ಪ್ರಾಣದ ಮೇಲೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ  ? ಒಂದು ಸಣ್ಣದಾದ ಜೀವಿಯಿಂದ ಇಡಿದು ಎಲ್ಲರಿಗೂ ಮೃತ್ಯುವಿನ ಭಯ ಇರುವುದು ಸಾಮಾನ್ಯ.ಅವರಿಗೆ ಏನಾದರೂ ಮೃತ್ಯುವಿನ ಭಯ ಬಂದಾಗ ದೇವಾಲಯಕ್ಕೆ ಭೇಟಿ ನೀಡುತ್ತೇವೆ ಆದರೆ ಯಾವುದೇ ಕಾರಣಕ್ಕೂ ಯಮ ಧರ್ಮರಾಯನನ್ನು ಮಾತ್ರ ನೆನೆಸಿಕೊಳ್ಳುವುದಿಲ್ಲ.ಅಷ್ಟಕ್ಕೂ ಆತನ ಕೆಲಸ ಆತನು ಮಾಡುತ್ತಿದ್ದಾನೆ.

ಇನ್ನೊಂದು ಆಶ್ಚರ್ಯಕಾರಿ ವಿಷಯವೇನೆಂದರೆ ನಮ್ಮ ಪ್ರಾಣ ಪಕ್ಷಿಯನ್ನು ತನ್ನ ಜೊತೆಗೆ ತೆಗೆದುಕೊಂಡು ಹೋಗುವ ಯಮಧರ್ಮರಾಯನಿಗೂ ಕೂಡ ಒಂದು ದೇವಾಲಯವಿದೆ.ಇಲ್ಲಿ ಭಕ್ತಿ ಭಾವದಿಂದ ಸ್ವಾಮಿಯ ಆರಾಧನೆಯನ್ನು  ಮಾಡಿದರೆ ಜಾತಕಕ್ಕೆ  ಸಂಬಂಧಿಸಿದ ದೋಷಗಳು ಇರುವುದಿಲ್ಲ ಹಾಗೆ ಮುಂದೆ ನಮ್ಮ ಜೀವನದಲ್ಲಿ ಬರುವ ಅಪಾಯಗಳನ್ನು ತಡೆಯುತ್ತಾನೆ ಎನ್ನುವ ನಂಬಿಕೆ ಜನರದ್ದು.  ಮನಸ್ಸಿನ ನೆಮ್ಮದಿಗಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.ಈ ದೇವಾಲಯದಲ್ಲಿರುವ ಸ್ವಾಮಿಯ ದರ್ಶನ ಮಾಡಿದರೆ ಅವರ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳಿಂದಲೂ ಸಹ ಮುಕ್ತಿಯನ್ನು ಪಡೆಯಬಹುದು ಎಂಬ ವಿಶ್ವಾಸ ಅಲ್ಲಿನ ಜನರದ್ದು.ಅಲ್ಲಿ ಹಲವಾರು ವಿಶೇಷ ಪೂಜೆಗಳನ್ನು ಸಹ  ಮಾಡಿಸುವರು .ಪುಣ್ಯ ಪುರುಷ ಈ ಯಮ ಎಂದರೂ ಸಹ ಆಶ್ಚರ್ಯವಾದರೂ ಕೂಡ ಇದು ಸತ್ಯ.

ಈ ದೇವಾಲಯದ ವಿಶೇಷತೆಗಳು ಮಾತ್ರ ಕುತೂಹಲಕಾರಿಯಾಗಿವೆ… ಅಂತಹ  ಯಮಧರ್ಮರಾಯನ ದೇವಾಲಯದ ವಿಶೇಷತೆಗಳನ್ನು ತಿಳಿಯೋಣ ಬನ್ನಿ…

 

 

ನಮ್ಮ ಪ್ರಾಣವನ್ನು ತೆಗೆಯುವ ದೇವನೆಂದು ಯಮಧರ್ಮರಾಯನಿಗೆ ಕೂಡ ಭಕ್ತಿ ಭಾವದಿಂದ ಪೂಜೆ ಮಾಡುವ ದೇವಲಾಯವಿದೆ.ಅದು ನಮ್ಮ ಕರ್ನಾಟಕದ ಪಕ್ಕದ ರಾಜ್ಯ ತೆಲಂಗಾಣದಲ್ಲಿದೆ.ಆಂಧ್ರ ಪ್ರದೇಶದ ಕರೀಂ ನಗರ ಜಿಲ್ಲೆಯ ಜಗಿತ್ಜಾಲ್ ಎಂಬ ಸ್ಥಳದಲ್ಲಿ ಒಂದು ಮಹಿಮಾನ್ವಿತವಾದ ಉಗ್ರ ನರಸಿಂಹ ಸ್ವಾಮಿಯ ದೇವಾಲಯವಿದೆ.

ಈ ದೇವಾಲಯದಲ್ಲಿನ ಅಸಕ್ತಿಕರವಾದ ವಿಷಯಗಳು ಏನು ಎಂಬುದನ್ನು ತಿಳಿಯೋಣ…

ಈ ದೇವಾಲಯವು ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು ಯಮ ಧರ್ಮರಾಯನ ದೇವಸ್ಥಾನಕ್ಕೆ ಇಲ್ಲಿ ಜನರು ಭಕ್ತಿ ಪೂರ್ವಕವಾಗಿ ಭೇಟಿ ನೀಡುತ್ತಾರೆ.ಈ ದೇವಾಲಯಕ್ಕೆ ಯಾರ್ಯಾರು ಭೇಟಿ ನೀಡುತ್ತಾರೋ ಅಂತವರಿಗೆ ತಮ್ಮ ಜಾತಕದಲ್ಲಿ ಏನಾದರೂ  ದೋಷ ಇದ್ದರೆ ಅಥವಾ ಜಾತಕದ ಪ್ರಕಾರ ಯಾವುದಾದರೂ ದೊಡ್ಡ ಆಪತ್ತು ಬರುತ್ತದೆ ಎಂದಿದ್ದರೆ ಅಂತವರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.ಇದರಿಂದಾಗಿ ಮಾನಸಿಕ ಪ್ರಶಾಂತತೆ ದೊರೆಯುತ್ತದೆ ಎಂಬ ಭಾವನೆ ಇದೆ.

ಈ ದೇವಾಲಯದಲ್ಲಿನ ಯಮಧರ್ಮರಾಯನನ್ನು ದರ್ಶನ ಮಾಡಿದರೆ ಎಲ್ಲಾ ಪಾಪಗಳು ಕೂಡ ಕಳೆದು ಹೋಗುತ್ತವೆ ಎಂಬುದು ಇಲ್ಲಿನವರ ನಂಬಿಕೆ.ಹಾಗೆ ಶನಿ ಗ್ರಹದ ದೋಷಗಳು, ಜಾತಕ ದೋಷಗಳು ಇರುವವರು ಕೂಡ ಇಲ್ಲಿಗೆ ಭೇಟಿ ನೀಡಿ ಪೂಜೆಗಳನ್ನು ಮಾಡಿಸುತ್ತಾರೆ.ಇದರಿಂದಾಗಿ ಅವರಿಗಿರುವ ಕಷ್ಟಗಳು ಪರಿಹಾರವಾಗುತ್ತವೆ.   ಈ ದೇವಾಲಯದ ಬಗ್ಗೆ ಭಕ್ತರಿಗಿರುವ ಬಗ್ಗೆ ಮುಖ್ಯವಾದ ನಂಬಿಕೆ ಎಂದರೆ ದೇವಾಲಯದ ಆವರಣದಲ್ಲಿರುವ ಒಂದು ಮಂಟಪದಲ್ಲಿನ ದೀಪಕ್ಕೆ ಎಣ್ಣೆಯನ್ನು ಹಾಕಿ,ಯಮನ ವಿಗ್ರಹಕ್ಕೆ ನಮಸ್ಕರಿಸಿ  ಭವಿಷ್ಯದಲ್ಲಿ ಸಂಭವಿಸುವ ಗಂಡಾಂತರಗಳೆಲ್ಲವೂ ಕೂಡ ಆಶ್ಚರ್ಯಕರ ರೀತಿಯಲ್ಲಿ ಮಾಯವಾಗುತ್ತವೆ ಎಂದು ಭಕ್ತರ ನಂಬಿಕೆಯಾಗಿದೆ.

 

 

ಪ್ರತಿ ತಿಂಗಳು ಭರಣಿ ನಕ್ಷತ್ರದ ದಿನದಂದು ಅಸಂಖ್ಯಾತ ಭಕ್ತರು ಭೇಟಿ ನೀಡುತ್ತಾರೆ.ಇಲ್ಲಿ ಆ ದಿನ ಊಟ ಮಾಡಿದರೆ ಎಲ್ಲಾ ರೋಗಗಳಿಂದಲೂ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ ದೀಪಾವಳಿಯ ಹಬ್ಬದ ಎರಡು ದಿನಗಳು ಕಳೆದ ನಂತರ ಬರುವ ಯಮದ್ವಿತೀಯ ದಿನದಂದು ತನ್ನ ತಂಗಿಯಾದ ಯಮುನಾ ದೇವಿಯ ಮನೆಗೆ ಭೋಜನಕ್ಕೆ ತೆರಳಿ  ನಂತರ ಯಮಲೋಕಕ್ಕೆ ಹೋಗುವರು.

ಆ ದಿನ ಯಾರಾದರೂ ತಮ್ಮ ಒಡಹುಟ್ಟಿದವರ ಕೈಯಲ್ಲಿ ಭೋಜನ ಮಾಡಿದರೆ ನರಕ ಭಾದೆಗಳು ಇರುವುದಿಲ್ಲ ಎಂದು ವರವನ್ನು ನೀಡುತ್ತಾನಂತೆ ಯಮ ದೇವನು.

ಆ ದಿನ ಗೋದಾವರಿ ನದಿಯಲ್ಲಿ ಸ್ನಾನ ಮಾಡಿ  ಯಮ ದೇವನನ್ನು ದರ್ಶನ ಮಾಡಿ ವಿಶೇಷ ಪೂಜೆಗಳನ್ನು ನೆರವೇರಿಸಬೇಕು.ಯಮನ ಹೆಸರನ್ನು ಹೇಳುವುದಕ್ಕೆ ಭಯ ಪಡುವ ಜನರು ಇಲ್ಲಿ ಯಮ ದೇವನ ಅನುಗ್ರಹಕ್ಕಾಗಿ ಪೂಜೆಯನ್ನು ನಿರ್ವಹಿಸಿ ಅವನ ಆನುಗ್ರಹವನ್ನು ಪಡೆಯಲು  ಭಕ್ತರು ಎಲ್ಲಾ ಮಾಸದಲ್ಲಿಯೂ ಇಲ್ಲಿಗೆ ಭೇಟಿ ನೀಡುತ್ತಾರೆ.

ಈ ದೇವಾಲಯವು 1500 ವರ್ಷಗಳ ಹಿಂದೆಯೇ ನಿರ್ಮಾಣ ಮಾಡಿದ ದೇವಾಲಯವಾಗಿದ್ದು.ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.ಈ ದೇವಾಲಯದಲ್ಲಿ ಯಮ ದೇವನು ನೀಡಿದ ವರಗಳು ಹೀಗಿವೆ…ಮಾರ್ಕಂಡೇಯನಿಗೆ, ಮಹಾ ಪತಿವ್ರತೆ ಸಾವಿತ್ರಿಗೆ ಅಲ್ಲದೆ ನಮಗೂ ಕೂಡ ವರಗಳನ್ನು ಇಂದಿಗೂ ನೀಡುತ್ತಾ ಮಹಿಮಾನ್ವಿತ ದೇವಸ್ಥಾನ  ಎಂದು ಖ್ಯಾತಿ ಗಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top