ಉಪಯುಕ್ತ ಮಾಹಿತಿ

ಭೀಷ್ಮ ಪಿತಾಮಹರು ಬಾಣಗಳ ಸಾವಿನ ಹಾಸಿಗೆ ಮೇಲೆ ಇರೋವಾಗ ಹೇಳಿದ ಈ 20 ರಹಸ್ಯಗಳು ತಲೆಲಿಟ್ಕೊಂಡ್ರೆ ಜೀವನದಲ್ಲಿ ಮುಂದೆ ಬರ್ತೀರಾ !

ಭೀಷ್ಮ ಪಿತಾಮಹರು ಬಾಣಗಳ ಸಾವಿನ ಹಾಸಿಗೆ ಮೇಲೆ ಇರೋವಾಗ ಹೇಳಿದ ಈ 20 ರಹಸ್ಯಗಳು ತಲೆಲಿಟ್ಕೊಂಡ್ರೆ ಜೀವನದಲ್ಲಿ ಮುಂದೆ ಬರ್ತೀರಾ !

ಜೀವನದ ಪ್ರಮುಖವಾದ ಇಪ್ಪತ್ತು ಪಾಠಗಳು. ಭೀಷ್ಮ ಪಿತಾಮಹರು ಬಾಣಗಳ ಸಾವಿನ ಹಾಸಿಗೆಯಿಂದ ಇವುಗಳನ್ನು ಹೇಳಿದ್ದರು. ಪ್ರತಿಯೊಬ್ಬರೂ ಸಹ ಇವುಗಳನ್ನು ನೆನಪಿಟ್ಟು ಕೊಳ್ಳಲೇಬೇಕು.
ಮಹಾಭಾರತವು ಭಾರತದ ಪೌರಾಣಿಕ ಕಥೆಗಳಲ್ಲಿ ಒಂದು. ಭೀಷ್ಮ ಪಿತಾಮಹರು ಕುರು ರಾಜ ಶಂತನು ಮತ್ತು ದೇವಿ ಗಂಗೆಯ ಪುತ್ರ. ಸುದೀರ್ಘವಾದ ಒಳ ಅರ್ಥವಿರುವ ಜೀವನದ ಮುಖ್ಯವಾದ ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ.
ಇವು ದೊಡ್ಡ ಮನಸ್ಸುಗಳ ಪಾಠಗಳಾಗಿದ್ದು. ಭೀಷ್ಮ ಪಿತಾಮಹರು ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಬಾಣಗಳ ಸಾವಿನ ಹಾಸಿಗೆಯ ಮೇಲೆ ಮಲಗಿದ್ದರು . ಭೀಷ್ಮ ಪಿತಾಮಹರಿಗೆ ಇಚ್ಛಾ ಮರಣದ ವರದಾನವಿದ್ದ ಕಾರಣ ಅವರು ಒಂದು ಮಂಗಳಕರವಾದ ದಿನವೇ ಪ್ರಾಣ ಬಿಡಬೇಕು ಎಂದು ನಿಶ್ಚಯಿಸಿದ್ದರು. ಆ ಅವಧಿಯ ದಿನಗಳಲ್ಲಿ ಭೀಷ್ಮರು ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣದ ದಿಕ್ಕಿನ ಕಡೆಗೆ ಸಾಗಲಿ ಆಗ ಸಾವನ್ನು ಅಪ್ಪುವೆನು ಎಂದು ಕಾಯುತ್ತಿದ್ದರು. ಆ ಸಮಯದಲ್ಲಿ ಕೆಲವು ಜೀವನದ ಮುಖ್ಯವಾದ ಮತ್ತು ಬೆಲೆ ಬಾಳುವ ಜೀವನದ ಪಾಠಗಳನ್ನು ಯುಧಿಷ್ಟಿರ ಮತ್ತು ಅವನ ಸುತ್ತಮುತ್ತ ಇರುವವರಿಗೆ ತಿಳಿಸಿದರು.
ಅವರ ಶಿಕ್ಷಣದ ಪ್ರಕಾರ ಪ್ರತಿಯೊಬ್ಬ ಮನುಷ್ಯರು ಕೂಡ ಈ ಒಂಬತ್ತು ಅರ್ಹತೆಗಳನ್ನು ಹೊಂದಿರಬೇಕು..

 

 

• ಕ್ಷಮಿಸುವುದನ್ನು ಕಲಿಯಿರಿ.

ಕೋಪದಿಂದ ಮುಕ್ತರಾಗಬೇಕು ಎಂದರೆ ಅವರಿಗೆ ಹೇಗೆ ಕ್ಷಮಿಸುವುದು ಎಂದು ತಿಳಿದಿರಬೇಕು. ಅದು ಶಾಂತಿಯನ್ನು ಗಳಿಸಲು ನೆರವಾಗುತ್ತದೆ.

• ಕೆಲಸವನ್ನು ಪೂರ್ಣಗೊಳಿಸಿ.

ಯಾವುದೇ ಕೆಲಸವನ್ನು ಪೂರ್ಣಗೊಳಿಸುದಂತೆ ಅಪೂರ್ಣವಾಗಿ ಬಿಡಬೇಡಿ. ಅದು ನಕಾರಾತ್ಮಕತೆಯ ಪ್ರತೀಕವಾಗಿದೆ.

• ಈ ರೀತಿಯ ಜನಗಳಿಂದ ದೂರವಿರಿ.

ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುವವರು.

ಇವರು ಯಾವುದನ್ನು ಬೇಕಾದರೂ ನಕಾರಾತ್ಮಕತೆಗೆ ತೆಗೆದುಕೊಂಡು ಹೋಗುತ್ತಾರೆ ಮತ್ತು ವಾತಾವರಣವನ್ನು ಕೂಡ ಅಶಾಂತಿಯತ್ತ ಕೊಂಡೊಯ್ಯುತ್ತಾರೆ. ಶಾಂತವಾಗಿರುವ ವಾತಾವರಣದಲ್ಲಿ ಅಶಾಂತಿಯನ್ನು ತಂದೊಡ್ಡುತ್ತಾರೆ. ಯಾರು ಕೋಪೋದ್ರಿಕ್ತರಾಗುವ     ಸ್ವಭಾವವನ್ನು ಹೊಂದಿರುವವರೋ ಅವರ ಬಳಿ ಸುತ್ತಮುತ್ತ ಎಂದಿಗೂ ಶಾಂತಿಯೂ ನೆಲೆಸುವುದಿಲ್ಲ .

• ಸೋಮಾರಿತನ.

ಇದು ಅತಿ ಎತ್ತರದ ನಕಾರಾತ್ಮಕತೆ. ಮತ್ತು ಇವರು ಎಂದಿಗೂ ಇದರಿಂದ ಮುಕ್ತರಾಗುವುದಿಲ್ಲ. ಇವರು ಬೇರೆಯವರಿಗೆ ಸಹಾಯ ಮಾಡಲು ನಿರಾಕರಿಸುತ್ತಾರೆ ಮತ್ತು ಅನೇಕ ಸಂದರ್ಭಗಳಲ್ಲಿ ಅವರಿಗೆ ಅವರೇ ಸಹಾಯ ಮಾಡಿಕೊಳ್ಳಲಾಗುವುದಿಲ್ಲ.

• ನಂಬಿಕೆ ಇಲ್ಲದವರು.

ಇಂಥವರು ಅವರ ಬಗ್ಗೆ ಮಾತ್ರ ಅವರು ಯೋಚನೆ ಮಾಡುತ್ತಾರೆ. ಅವರು ಏನೆಂದು ಯೋಚಿಸುತ್ತಾರೆ. ಅಂದರೆ ನಮಗಿಂತ ಎತ್ತರದಲ್ಲಿ ಯೋಚಿಸುತ್ತಾರೆ. ನಮಗಿಂತ ಎತ್ತರದಲ್ಲಿ ಅಂದರೆ ದೊಡ್ಡದು, ಬೇರೆ ಯಾವುದೂ ಇಲ್ಲ ಎಂಬ ನಂಬಿಕೆಯನ್ನು ಮತ್ತು ನಾವೇ ದೊಡ್ಡವರು ಎಂಬ ನಂಬಿಕೆಯನ್ನು ಹೊಂದಿರುತ್ತಾರೆ.

• ವಿಚಿತ್ರವಾಗಿ ಮತ್ತು ಕೆಟ್ಟದಾಗಿರುವ ವ್ಯಕ್ತಿಗಳು.

ಈ ರೀತಿಯ ವ್ಯಕ್ತಿಗಳು ಸಾಮಾನ್ಯವಾಗಿ ದ್ವೇಷಿಸುವ ಸ್ವಭಾವದವರಾಗಿದ್ದು ಜೊತೆಗೆ ಅಸೂಯೆಯನ್ನು ಹೊಂದಿರುತ್ತಾರೆ. ಅವರು ತುಂಬಾ ಬುದ್ಧಿವಂತರಾಗಿದ್ದು ಅವರು ಹೇಗೆಂದರೆ ಬೇರೆಯವರನ್ನು ತಮ್ಮ ಕುಶಲತೆಯಿಂದ ಬಳಸಿಕೊಂಡು ಇವರು ತಮ್ಮ ಗುರಿಯನ್ನು ಹೊಂದಲು ಮತ್ತು ಸಾಧಿಸಲು ಪ್ರಯತ್ನಿಸುತ್ತಾರೆ. ಇಂತಹ ವ್ಯಕ್ತಿಗಳು ನಕಾರಾತ್ಮಕತೆಯನ್ನು ಮತ್ತು ದ್ವೇಷವನ್ನು ಮಾತ್ರ ಹರಡುತ್ತಾರೆ.

• ಯಾರಿಗೂ ಅಧಿಕವಾಗಿ ಹೊಂದಿಕೊಳ್ಳಬೇಡಿ.

ಇತ್ತೀಚಿನ ದಿನಗಳಲ್ಲಿ ಜನರು ಪ್ರೀತಿಸುವುದಿಲ್ಲ. ಅವರು ತಾತ್ಕಾಲಿಕ ಹೊಂದಾಣಿಕೆಯನ್ನು ಮನರಂಜನೆಗಾಗಿ ಬಯಸುತ್ತಾರೆ. ಬದಲಾವಣೆಯು ಜೀವನದಲ್ಲಿ ನಿರಂತರವಾಗಿದೆ. ಜೀವನವೆಂಬ ಪ್ರಯಾಣದಲ್ಲಿ ಜನರು ಬಂದು ಹೋಗುತ್ತಾರೆ. ಅದು ಕೂಡ ಯಾವುದೋ ಬೇರೆ ಉದ್ದೇಶದಿಂದಲೇ ಆಗಿರುತ್ತದೆ. ಆದ್ದರಿಂದ ಯಾರೂ ಕೂಡ ಯಾರಿಗೂ ಅಧಿಕವಾಗಿ ಹೊಂದಿಕೊಳ್ಳಬೇಡಿ. “ಪ್ರೀತಿ ದೊಡ್ಡದು” ಆದರೂ ಈ ಸತ್ಯವನ್ನು ನೀವು ತಿಳಿದುಕೊಂಡಿರಬೇಕು.

• ಜೀವನದಲ್ಲಿ ನಿಮ್ಮನ್ನು ನೀವು ಯಾವಾಗಲೂ ಅಳವಡಿಸಿಕೊಳ್ಳಬೇಕು.

ಜೀವನದಲ್ಲಿ ಅನೇಕ ಕಾಲಘಟ್ಟಗಳು ಇವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಶಾಂತಿ ಮತ್ತು ಸಮಾಧಾನದಿಂದ ಜೀವನದ ಎಲ್ಲ ಭಾಗಗಳನ್ನು ಒಪ್ಪಿಕೊಂಡು ಧನಾತ್ಮಕ ಮತ್ತು ಶಾಂತಿಯುತವಾದ ಜೀವನ ನಡೆಸಿ ಈ ಭೂಮಿಯ ಮೇಲೆ ಉಳಿಯಲು ಮತ್ತು ಜೀವಿಸಲು ಕಲಿಯಬೇಕು. “ಅದು ದುಃಖದ ಕಾಲ ಘಟ್ಟವಾಗಿರಲಿ, ಸಂತೋಷದ ಕಾಲಘಟ್ಟವಾಗಿರಲಿ, ನೀವು ಆರೋಗ್ಯವಾಗಿರಲಿ, ಇಲ್ಲ ಅನಾರೋಗ್ಯದಿಂದ ಕೂಡಿರಲಿ” ಜೀವನದಲ್ಲಿ ಬರುವ ಎಲ್ಲದನ್ನು ಒಪ್ಪಿಕೊಂಡು ಜೀವನ ನೀಡಿರುವುದನ್ನು ಒಪ್ಪಿಕೊಂಡು ಸಾಗಬೇಕು.

• ಧರ್ಮವೇ ಮೊದಲು ಬರುವುದು.

ಪ್ರತಿಯೊಬ್ಬರೂ ಕೂಡ ಮೊದಲು ಅವರ ಕರ್ತವ್ಯವಾದ ಧರ್ಮವನ್ನು ಪರಿಪಾಲಿಸಬೇಕು. ಅವರು ಏನು ಮಾಡಬೇಕೋ ಅದನ್ನು ಮಾಡಬೇಕು. ಅವರ ಕೆಲಸ ಮತ್ತು ಕರ್ತವ್ಯವನ್ನು ನಿಭಾಯಿಸಬೇಕು. ಬೇರೆ ಎಲ್ಲ ಕೆಲಸಗಳಿಗಿಂತ ಧರ್ಮವೇ ದೊಡ್ಡದು.

• ನಾಲ್ಕು ರೀತಿಯ ಸ್ನೇಹಿತರನ್ನು ಹೊಂದಿರಬೇಕು.

ಜೀವನದಲ್ಲಿ ಎಲ್ಲವನ್ನೂ ಅನುಭವಿಸಲು ಮತ್ತು ಅದರಿಂದ ಕಲಿತುಕೊಳ್ಳಲು ಪ್ರತಿಯೊಬ್ಬರು ಕೂಡ ಈ ನಾಲ್ಕು ರೀತಿಯ ಸ್ನೇಹಿತರನ್ನು ಹೊಂದಿರಬೇಕು. ಪ್ರಾಕೃತಿಕ ಸ್ನೇಹಿತರು,ಒಂದೇ ಗುರಿಯನ್ನು ಹೊಂದಿರುವ ಸ್ನೇಹಿತರು, ಪರಿವಾರದ ಸ್ನೇಹಿತರು, ಮೋಸ ಮಾಡುವ ಸ್ನೇಹಿತರು.

• ಕಠಿಣ ಪರಿಶ್ರಮದಿಂದ ಕೆಲಸ ಮಾಡಿ.

ಯಾವಾಗಲೂ ಕಠಿಣ ಪರಿಶ್ರಮದಿಂದ ಕೆಲಸ ಮಾಡಲು ಪ್ರಯತ್ನಿಸಿ. ನೀವು ನಿಮಗೋಸ್ಕರ ಮಾತ್ರ ಅಲ್ಲ ನಿಮ್ಮ ಪರಿವಾರದವರಿಗೂ ಕೂಡ ಕಠಿಣ ಪರಿಶ್ರಮದಿಂದ ಕೆಲಸ ಮಾಡಿ. ಹಣವನ್ನು ಉಳಿಸಿ. ಉತ್ತಮವಾದ ಜೀವನವನ್ನು ಹೊಂದಲು ಇದು ಮುಂದೆ ಸಹಾಯವಾಗುತ್ತದೆ.

• ಎಲ್ಲರನ್ನೂ ರಕ್ಷಿಸಿ.

ಒಬ್ಬ ಮನುಷ್ಯ ಸದಾ ಎಲ್ಲರನ್ನೂ ರಕ್ಷಿಸಲು ಪ್ರಯತ್ನಿಸಬೇಕು. ಕುಟುಂಬ, ದೇಶ ,ಖಜಾನೆ, ಶಸ್ತ್ರಾಸ್ತಗಳು , ಸ್ನೇಹಿತರು ಮತ್ತು ನೀವು ಜೀವಿಸುವ ನಗರ.

• ಸಹಾನುಭೂತಿಯಿಂದ ಇರಬೇಕು.

ಇದು ಧರ್ಮದ ಅತ್ಯಂತ ದೊಡ್ಡ ಭಾಗವೇ ಆಗಿದೆ. ಜೀವನದ ಬಗ್ಗೆ ಮನುಷ್ಯರ ಭಾವನೆಗಳು, ರೋಗಿಗಳು, ಜೊತೆಯಲ್ಲಿರುವವರು ಮತ್ತು ಎಲ್ಲ ಪ್ರಾಣಿ, ಪಕ್ಷಿ ಮತ್ತು ಈ ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿರಬೇಕು. ಇಂಥವರಿಗೆ ಅವಶ್ಯಕತೆ ಇದ್ದಾಗ ಸಹಾಯ ಮಾಡಲು ಪ್ರಯತ್ನಿಸಬೇಕು ಮತ್ತು ಅವರು ಕಷ್ಟದಲ್ಲಿದ್ದರೆ, ತೊಂದರೆಯಲ್ಲಿ ಸಿಲುಕಿದ್ದರೆ, ರಕ್ಷಿಸಲು ಪ್ರಯತ್ನಿಸಬೇಕು.

• ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ.

ನಾವು ಬೇರೆಯವರಿಂದ ಅತಿಯಾದ ನಿರೀಕ್ಷೆಗಳನ್ನು ಹೊಂದಿದ್ದರೆ ನಮಗೆ ಅತಿಯಾದ ನಿರಾಸೆ ಕೂಡ ಉಂಟಾಗುತ್ತದೆ. ಆದ್ದರಿಂದ ಸ್ಥಿರವಾಗಿ ಉಳಿಯಲು ಯಾರಿಂದಲೂ ನಿರೀಕ್ಷೆಗಳನ್ನು ಅತಿಯಾಗಿ ಇಟ್ಟುಕೊಳ್ಳಬೇಡಿ.

• ಬೇರೆಯವರ ಮನಸ್ಸಿಗೆ ನೋವುಂಟು ಮಾಡಬೇಡಿ.

ದೈಹಿಕವಾಗಿ ಅಷ್ಟೇ ಅಲ್ಲ ಭಾವನಾತ್ಮಕವಾಗಿ ಕೂಡ ಒಂದು ಬಾರಿ ಒಡೆದು ಹೋದ ಹೃದಯ ಮತ್ತೆ ಒಂದುಗೂಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದು ಅತಿ ಮುಖ್ಯವಾಗಿದೆ. ಸಾಕಷ್ಟು ಬುದ್ಧಿವಂತಿಕೆಯಿಂದ ಬೇರೆಯವರ ಹೃದಯವನ್ನು ಹೊಡೆಯಬಾರದು ಅಥವಾ ಮಾನಸಿಕವಾಗಿ ಯಾರಿಗೂ ಕೂಡ ನೋವು0ಟು ಮಾಡಬಾರದು.

• ಸಹಿಷ್ಣುತೆಯನ್ನು ಹೊಂದಿರಬೇಕು.

ಸಹಿಷ್ಣುತೆಯನ್ನು ಹೊಂದಿದ್ದರೆ ಮಾತ್ರ ಅವರ ಆಸೆಗಳನ್ನು ಮತ್ತು ದುರಾಸೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯ .

• ಆರೋಗ್ಯಯುತವಾದ ಆಹಾರ.

ಸದಾ ಆರೋಗ್ಯಯುತವಾದ ಆಹಾರ ಕ್ರಮವನ್ನು ಜೀವನದಲ್ಲಿ ಕಾಪಾಡಿಕೊಳ್ಳಬೇಕು. ಯಾಕೆಂದರೆ ರೋಗಗಳಿಂದ ದೂರ ಇರಲು ಇದು ಸಹಾಯವಾಗುತ್ತದೆ.

• ಯೋಗವನ್ನು ಅಭ್ಯಾಸ ಮಾಡಿ .

ಯೋಗದ ಸಹಾಯದಿಂದ ಒಬ್ಬರ ದೇಹವನ್ನು ಆರೋಗ್ಯವಾಗಿಡಲು ಮಾತ್ರವೇ ಅಲ್ಲ ಅದರ ಜೊತೆಗೆ ಹಸಿವನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

• ಜ್ಞಾನವನ್ನು ಪಡೆದುಕೊಳ್ಳಬೇಕು

ತಮ್ಮನ್ನು ತಾವು ಸ್ವಯಂ ಆತ್ಮಾವಲೋಕನ ಮಾಡಿಕೊಂಡರೆ ಪ್ರತಿಯೊಬ್ಬರು ಪರಿಪೂರ್ಣವಾದ ಜ್ಞಾನವನ್ನು ಹೊಂದಬಹುದು.

• ಎಚ್ಚರವಾಗಿರಿ.

ಸ್ನೇಹಿತರು ನಿಮ್ಮ ಸುತ್ತಮುತ್ತ ಇರಬೇಕು. ಆದರೆ ಸದಾ ಎಚ್ಚರವಾಗಿರಿ ಯಾಕೆಂದರೆ ಯಾರು ?ಯಾವಾಗ ? ಬೇಕಾದರೂ ನಿಮಗೆ ಹಿಂದಿನಿಂದ ಹೊಡೆಯಬಹುದು, ಒದ್ದು ಬೀಳಿಸಬಹುದು.

• ಹಣದ ಬಗ್ಗೆ ಎಚ್ಚರಿಕೆಯಿಂದಿರಿ.

ಮನುಷ್ಯ ಸದಾ ಹಣ ಮತ್ತು ಬೆಲೆ ಬಾಳುವ ವಸ್ತುಗಳ ಬಗ್ಗೆ ಯಾರಿಗೂ ಹೇಳಿಕೊಳ್ಳಬಾರದು. ಅದನ್ನು ಇಟ್ಟಿರುವ ಸ್ಥಳವನ್ನು ಕೂಡ ಹೇಳಬಾರದು. ಅದರಿಂದ ಮುಂದೆ ಜೀವನಕ್ಕೆ ತೊಂದರೆಯಾಗಬಹುದು.

• ಸಮತೋಲನ.

ಪ್ರತಿಯೊಬ್ಬರೂ ಸಹ ಸಮಯ ಸಂದರ್ಭಕ್ಕೆ ಸರಿಯಾಗಿ ಎರಡನ್ನೂ ಸಮತೋಲನವಾಗಿ ಸಮಯ ಚೆನ್ನಾಗಿದ್ದಾಗ ಗಟ್ಟಿಯಾಗಿ ಮತ್ತು ಸರಿಯಿಲ್ಲದಿದ್ದಾಗ ಮೃದುವಾಗಿಯೂ ಸಹ ವರ್ತಿಸಿ. ಸಮಯ ಸಂದರ್ಭ ಬಂದಾಗ ಅದಕ್ಕೆ ತಕ್ಕಂತೆ ಹೊಂದಿಕೊಂಡು ವರ್ತಿಸಿರಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top