ಆರೋಗ್ಯ

ಪುರುಷರಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳ ಗುಣಮಟ್ಟವನ್ನು ತಿಳಿಯುವ 6 ವಿಧಾನಗಳು!

ಪುರುಷರಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳ ಗುಣಮಟ್ಟವನ್ನು ತಿಳಿಯುವ 6 ವಿಧಾನಗಳು!

 

 

ದಂಪತಿಗಳಲ್ಲಿ ಸ್ತ್ರೀ ಪುರುಷರಿಬ್ಬರೂ ಆರೋಗ್ಯವಾಗಿದ್ದರೆ ಮಾತ್ರ ಸಂತಾನೋತ್ಪತ್ತಿ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಿ ಮಕ್ಕಳನ್ನು ಪಡೆಯಲು ಅನುಕೂಲವಾಗುತ್ತದೆ.ಸ್ತ್ರೀಯರ ವಿಷಯ ಬದಿಗಿರಿಸಿದರೆ,ಮುಖ್ಯವಾಗಿ ಪುರುಷರ ವೀರ್ಯದ ಗುಣಮಟ್ಟ ಸರಿಯಾಗಿದ್ದರೆ,ಸಂತಾನ ಪ್ರಾಪ್ತಿಯಾಗಲು ಅವಕಾಶವಿರುತ್ತದೆ.ವೀರ್ಯದಲ್ಲಿ ವೀರ್ಯಾಣುಗಳು ಸಕ್ರಿಯವಾಗಿರದಿದ್ದರೂ,ಕಡಿಮೆ ಸಂಖ್ಯೆಯಲ್ಲಿದ್ದರೂ ಸಂತಾನ ಪ್ರಾಪ್ತಿ ಕಷ್ಟಕರವಾಗುತ್ತದೆ.ಅಂತಹ ಸಮಯದಲ್ಲಿ ಸರಿಯಾದ ಸೂಚನೆಗಳನ್ನು ಪಾಲಿಸಿದ್ದಲ್ಲಿ ಸಂತಾನವನ್ನು ಪಡೆಯಬಹುದು. ಪುರುಷರಲ್ಲಿ ವೀರ್ಯಾಣುಗಳು ಉತ್ತಮ ಗುಣಮಟ್ಟದಲ್ಲಿವೆಯೇ ಎಂದು ತಿಳಿಯಲು ಹಲವು ವಿಧಾನಗಳಿವೆ.

 

 

1 ಅಗಲವಾದ ಬಾಹುಗಳು,ಚೌಕಾಕಾರದ ದವಡೆಗಳನ್ನು ಹೊಂದಿರುವ ಪುರುಷರಲ್ಲಿ ವೀರ್ಯದ ಗುಣಮಟ್ಟ ಚೆನ್ನಾಗಿ ಇರುವುದಿಲ್ಲವಂತೆ.ಈ ಲಕ್ಷಣಗಳು ಸಾಮಾನ್ಯವಾಗಿರುವ ಪುರುಷರಲ್ಲಿ ವೀರ್ಯದ ಗುಣಮಟ್ಟ ಚೆನ್ನಾಗಿ ಇರುತ್ತದಂತೆ.

2ಚಿಕನ್, ಮಟನ್ ಗಿಂತಲೂ ಮೀನುಗಳನ್ನು ತಿನ್ನುವವರ ವೀರ್ಯದ ಗುಣಮಟ್ಟ ಉತ್ತಮವಾಗಿರುತ್ತದಂತೆ.ಹಾಗೂ ವೀರ್ಯಾಣುಗಳ ಸಂಖ್ಯೆಯು ಅಧಿಕವಾಗಿರುತ್ತದಂತೆ.

 

 

3 ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಲೇ ಬಾರದಂತೆ.ಒಂದು ವೇಳೆ ಉಪಯೋಗಿಸಿದ್ದಲ್ಲಿ ವೀರ್ಯದ ಗುಣಮಟ್ಟ ಕಡಿಮೆಯಾಗುತ್ತದಂತೆ.ಇತರೆ ಪಾತ್ರೆಗಳನ್ನು ಉಪಯೋಗಿಸಿದರೆ ವೀರ್ಯದ ಗುಣಮಟ್ಟ ಚೆನ್ನಾಗಿ ಇರುತ್ತದಂತೆ.

4 ವ್ಯಾಯಾಮ ಮಡದಿರುವವರ ವೀರ್ಯದ ಗುಣಮಟ್ಟ ಚೆನ್ನಾಗಿರುವುದಿಲ್ಲ.ಪ್ರತಿದಿನ ವ್ಯಾಯಾಮ ಮಾಡಿದರೆ, ವೀರ್ಯ ಚೆನ್ನಾಗಿರುತ್ತದೆ.ವೀರ್ಯಾಣುಗಳ ಉತ್ಪತ್ತಿ ಅಧಿಕವಾಗಿರುತ್ತದೆ.ಹಾಗೂ ವೀರ್ಯಾಣುಗಳು ಸಕ್ರಿಯವಾಗಿರುತ್ತವೆ.

 

 

5 ಬಿಗಿಯಾದ ಒಳ ಉಡುಪುಗಳು,ಪ್ಯಾಂಟ್ ಗಳನ್ನು ಧರಿಸುವವರ ವೀರ್ಯದ ಗುಣಮಟ್ಟ ಕಡಿಮೆ ಇರುತ್ತದಂತೆ.ಇದರೊಂದಿಗೆ ವೀರ್ಯಾಣುಗಳ ಸಂಖ್ಯೆಯು ಕಡಿಮೆ ಇರುತ್ತದಂತೆ.]

6 ನಾಭಿಯ ಬಳಿ ಕೊಬ್ಬು, ಡೊಳ್ಳು ಹೊಟ್ಟೆ ಇರುವವರ ವೀರ್ಯದ ಗುಣಮಟ್ಟ ಚೆನ್ನಾಗಿ ಇರುವುದಿಲ್ಲ.ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top