ಆರೋಗ್ಯ

 ಬೆಟ್ಟದ ನೆಲ್ಲಿ ಜ್ಯೂಸನ್ನು ಕುಡಿಯೋದ್ರಿಂದ ಈ ಅದ್ಭುತ ಪ್ರಯೋಜನಗಳನ್ನ ಪಡ್ಕೋಬೋದು!

 ಬೆಟ್ಟದ ನೆಲ್ಲಿ ಜ್ಯೂಸನ್ನು ಕುಡಿಯೋದ್ರಿಂದ ಈ ಅದ್ಭುತ ಪ್ರಯೋಜನಗಳನ್ನ ಪಡ್ಕೋಬೋದು!

ನೆಲ್ಲಿಕಾಯಿಯಲ್ಲಿ ವಿಟಮಿನ್- ಸಿ ,ಕಬ್ಬಿಣ ,ಕ್ಯಾಲ್ಸಿಯಂ ಹೇರಳವಾಗಿವೆ.ಇವು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತವೆ.ನೆಲ್ಲಿಕಾಯಿಯನ್ನು ಪುಡಿ ಮಾಡಿಟ್ಟುಕ್ಕೊಂಡು ಪ್ರತಿನಿತ್ಯ ಅರ್ಧ ಚಮಚ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ನೆಲ್ಲಿಕಾಯಿಯ ಪುಡಿ, ಶುಂಠಿ ಪುಡಿ, ನಿಂಬೆ ರಸ ಹಾಗೂ ಜೇನುತುಪ್ಪ ಬೆರಸಿ ಸೇವಿಸಬಹುದು.ಅಥವಾ ಬೆಳಗ್ಗೆ ಫ್ರೆಶ್ ಜ್ಯೂಸ್ ಗೆ ಒಂದು ಚಮಚ ನೆಲ್ಲಿ ಪುಡಿ ಬೆರಸಿಕೊಂಡು ಕುಡಿದರೆ ಬಹಳ ಒಳ್ಳೆಯದು.

 

 

ಬಾಳೆಹಣ್ಣು ಪಪಾಯ ಮತ್ತು ಸೇಬು ಹಣ್ಣಿನ ಹೋಳುಗಳ ಮೇಲೆ ನೆಲ್ಲಿಕಾಯಿ ಪುಡಿಯನ್ನು ಉದುರಿಸಿ ತಿನ್ನುವುದು ಕೂಡ ಉತ್ತಮ.ನೆಲ್ಲಿಕಾಯಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯದ ಸಮಸ್ಯೆಗಳು ಬರುವುದಿಲ್ಲ.

 

 

ಹಾಗೆಯೆ ಮುಖಕ್ಕೆ ನೆಲ್ಲಿಕಾಯಿ ಪುಡಿ ಮತ್ತು ಮೊಸರು ಜೇನುತುಪ್ಪ ಮಿಶ್ರಣ ಮಾಡಿ ಮಾಸ್ಕ್ ಹಾಕಿಕೊಂಡರೆ ಚರ್ಮ ಕಾಂತಿಯುಕ್ತವಾಗಿ ಇರುತ್ತದೆ.

 

 

ಅಷ್ಟೇ ಅಲ್ಲದೆ ನೆಲ್ಲಿಕಾಯಿಯಲ್ಲಿ ಫೈಬರ್ ಅಂಶ ಇರುವುದರಿಂದ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ.ಮಲಬದ್ದತೆಗೆ ಇದು ಅತ್ಯಂತ ಉತ್ತಮ ಮದ್ದು.ಅಸಿಡಿಟಿ ಮತ್ತು ಅಲ್ಸರ್ ಅನ್ನು ಕೂಡ ನೆಲ್ಲಿಕಾಯಿ ದೂರ ಮಾಡುತ್ತದೆ.ಇದನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.ಬೆಲ್ಲದ ಜೊತೆ ಸಹ ಇದನ್ನು ಸೇವಿಸಿದರೆ ತುಂಬಾ ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top