ಆರೋಗ್ಯ

ನೋಡೋಕೆ ಸಣ್ಣದಾಗಿರುವ ಮೆಣಸಿನ ಕಾಳಿನ ದೊಡ್ಡ ದೊಡ್ಡ ಆರೋಗ್ಯಕಾರಿ ಪ್ರಯೋಜನಗಳನ್ನ ತಿಳ್ಕೊಳಿ.

ನೋಡೋಕೆ ಸಣ್ಣದಾಗಿರುವ ಮೆಣಸಿನ ಕಾಳಿನ ದೊಡ್ಡ ದೊಡ್ಡ ಆರೋಗ್ಯಕಾರಿ ಪ್ರಯೋಜನಗಳನ್ನ ತಿಳ್ಕೊಳಿ.

 

 

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸುತ್ತಾರೆ.ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು.ಪ್ರತಿದಿನ ಈ ಕಾಳುಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ.

 

ಶೀತ-ನೆಗಡಿ:
2 ಗ್ರಾಂ ಕಾಳು ಮೆಣೆಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ಶೀತ-ನೆಗಡಿ ಕಡಿಮೆಯಾಗುತ್ತದೆ.ಕಾಳು ಮೆಣೆಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಸೀನು,ತಲೆನೋವು ನಿಯಂತ್ರಣಕ್ಕೆ ಬರುತ್ತದೆ.
ಕಣ್ಣಿನ ಸಮಸ್ಯೆ:
ಕಣ್ಣಿನ ದೋಷವಿರುವವರು ಪ್ರತಿದಿನ ಬೆಳಗ್ಗೆ ಕಾಳು ಮೆಣೆಸಿನ ಪುಡಿಯ ಜೊತೆ ಸಕ್ಕರೆ ಹಾಗು ತುಪ್ಪ ಬೆರೆಸಿ ತಿನ್ನುವುದು ಒಳ್ಳೆಯದು.ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.

 

ರಕ್ತ ಸ್ರಾವ:
ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಾಳು ಮೆಣೆಸಿನ ಪುಡಿಯನ್ನು ಮೊಸರು ಹಾಗು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ.

 

ಹೊಟ್ಟೆಯ ಸಮಸ್ಯೆ:
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಒಂದು ಗ್ರಾಂ ಕಾಳು ಮೆಣೆಸಿನ ಪುಡಿಗೆ ನಿಂಬೆಯ ರಸ ಹಾಗು ಶುಂಠಿಯ ರಸ ಬೆರೆಸಿ ಕುಡಿದರೆ ಒಳ್ಳೆಯದು.
ಅಸಿಡಿಟಿ:
ಹೊಟ್ಟೆ ಉಬ್ಬರ,ಹುಳಿ ತೇಗು,ಗಂಟಲು ಸೋಂಕಿದ್ದಲ್ಲಿ ಕಾಳು ಮೆಣೆಸಿನ ಪುಡಿಗೆ ನಿಂಬೆಯ ರಸ,ಅರ್ಧ ಚಮಚ ಉಪ್ಪನ್ನು ನೀರಿಗೆ ಸೇರಿಸಿ ಕುಡಿಯುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top