fbpx
ಸಮಾಚಾರ

ಪೆನ್ಸಿಲನ್ನು ಬೇಡವೆನಿಸಿದಾಗ ಬಿತ್ತಿ, ನೀರೆರದರೆ ಮೊಳಕೆಯೊಡೆದು ಕೊತ್ತಂಬರಿ, ಮೆಣಸು, ಪುದೀನ ಗಿಡ ಬೆಳೆಯುತ್ತೆ ಜೋಕಲ್ಲ ಇದು ಸತ್ಯ !

ಬಿತ್ತಿದರೆ ಬೆಳೆಯುವ ಬರಹದ ಕಡ್ಡಿ

ಈ ಸುದ್ದಿಯನ್ನು ಅಕ್ಷರ ಕೃಷಿ ಎನ್ನಲು ಅಡ್ಡಿಯಿಲ್ಲ. ಬರೆಯುವ ಪೆನ್ಸಿಲನ್ನು ಬೇಡವೆನಿಸಿದಾಗ ಬಿತ್ತಿ, ನೀರೆರದರೆ ಮೊಳಕೆಯೊಡೆದು ಕೊತ್ತಂಬರಿ, ಮೆಣಸು, ಪುದೀನ ಗಿಡವಾಗಲಿದೆ.

ಜೋಕಾ?

ಇಲ್ರೀ…ಸತ್ಯವಾಗಿ

ಪೆನ್ಸಿಲ್ ತುಂಡು ಆದಾಗ ಬಹಳಷ್ಟು ಮಕ್ಕಳು/ಪೋಷಕರು ಅದನ್ನು ಎಸೆಯುತ್ತಾರೆ. ಅನಗತ್ಯವಾಗಿ ಇವುಗಳು ಕಸದ ತೊಟ್ಟಿ ಸೇರುತ್ತಿವೆ. ಇಂತಹ ಪೆನ್ಸಿಲ್‍ಗಳ ಬದಲು ಮರುಬಳಕೆಯ ಬರಹದಕಡ್ಡಿಗಳನ್ನು ವಿಜ್ಞಾನಿಗಳು ಅವಿಷ್ಕರಿಸಿದ್ದಾರೆ. ಅಮೆರಿಕದ ಮ್ಯಾಸುಚೆಸ್ಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಯೋಗವಿದು. ಇವರ ಆವಿಷ್ಕಾರದ ಬರಹದಕಡ್ಡಿಯಲ್ಲಿ ಸೀಸ ಇರದು. ಆದರೆ ಗ್ರಾಫೈಟ್ ಇದ್ದು ಸೊಗಸಾಗಿ ಬರೆಯಬಹುದು.

 

 

 

ಈ ಬರಹದಕಡ್ಡಿಯಲ್ಲಿ ಗ್ರಾಫೈಟ್ ಮಾತ್ರವಲ್ಲದೆ ಮೃತ್ತಿಕೆಗಳು, ಸೂಕ್ಷ್ಮ ಕಣದ ಬೀಜಗಳಿರಲಿದೆ. ಬೇಡವೆನಿಸಿದಾಗ ನೆಟ್ಟು ನೀರುಣಿಸಿದರೆ ಟೊಮೊಟಾ, ಮೆಣಸು, ತುಳಸಿ, ಕೊತ್ತಂಬರಿ, ಪುದೀನ, ರೊಸ್ಮೆರಿ…ಇಪ್ಪತ್ತು ಬಗೆಯ ಗಿಡಗಳು ಟಿಸಿಲೊಡೆಯಲಿವೆ. ನೀರೆರದು ಬೆಳೆಸಿದಲ್ಲಿ ಮನೆಗಿಷ್ಟು ಕಾಯಿಪಲ್ಲೆಗಳು ಲಭ್ಯ.

ಇಷ್ಟೆಲ್ಲಾ ತರಕಾರಿ ಇರುವುದರಿಂದ ಅಗತ್ಯವೆನಿಸಿದಾಗ ಚೆನ್ನಾಗಿ ನೆನಸಿ ಬೇಯಿಸಿ ತರಕಾರಿಯಾಗಿ ಬಳಸಬಹುದೇ?

 

 

ಗೊತ್ತಿಲ್ಲ. ಅದು ಸಂಭವಿಸಿದರೆ ನಮ್ಮ ಸರ್ಕಾರಿ ಶಾಲೆಯ ಮಕ್ಕಳ ಪೆನ್ಸಿಲ್‍ಗಳೆಲ್ಲಾ ಬಿಸಿಯೂಟದ ಭಾಗವಾಗಿ ಉದರ ಸೇರುವ ಅಪಾಯವಿದೆ! ಅದೆಲ್ಲಾ ಏನಾದರೂ ಇರಲಿ ರೀ…ಪ್ರಯೋಗ ಮುಂದುವರೆದರೆ ಮುಂದೊಂದು ದಿನ ಒನಕೆ ಬಿತ್ತಿ ಮರವನ್ನೇ ಬೆಳೆಸುತ್ತ್ತಾರೋ ಏನೋ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top