ಆರೋಗ್ಯ

ಚೆಂಡು ಹೂವಿನಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳ್ಕೊಳಿ.

ಚೆಂಡು ಹೂವಿನಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳ್ಕೊಳಿ.

 

 

ಚೆಂಡು ಹೂವು ಅಲಂಕಾರಕ್ಕೆ ಬಳಕೆ ಮಾಡಲಾಗುವ ಹೂ ಅಷ್ಟೇ ಎಂದು ನೀವು ಅಂದುಕೊಂಡಿರಬಹುದು.ಆದರೆ ಇದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ. ಇದರಿಂದ ಮಾಡಿದ ಪೇಸ್ಟ್ ಅನ್ನು ಸನ್ ಬರ್ನ್, ಮೊಡವೆ,ಕಲೆ,ಡ್ರೈ ಸ್ಕಿನ್ ಮೊದಲಾದ ಸಮಸ್ಯೆಗಳಿಗೆ ಹಚ್ಚಿದರೆ ಮುಕ್ತಿ ನೀಡುತ್ತದೆ.ಈ ಹೂವಿನ ಎಣ್ಣೆ ಅಥವಾ ರಸ ಬೆರೆಸಿ ಗಾಯದ ಮೇಲೆ ಹಚ್ಚಿದರೆ ಗಾಯ ಬೇಗನೆ ನಿವಾರಣೆಯಾಗುತ್ತದೆ.ಇದರಿಂದ ಯಾವುದೇ ರೀತಿಯ ಸಮಸ್ಯೆ ಕೂಡ ಆಗುವುದಿಲ್ಲ.

 

 

ಇದರಿಂದ ಹಲ್ಲುಗಳ ಹೊಳಪು ಹೆಚ್ಚುತ್ತದೆ.ಹಲ್ಲಿನಲ್ಲಿ ಸೇರಿಕೊಂಡಿರುವ ಬ್ಯಾಕ್ಟಿರಿಯಾಗಳನ್ನು ಇದು ನಾಶ ಮಾಡುತ್ತದೆ.ಇದಕ್ಕಾಗಿ ನೀವು ಚೆಂಡು ಹೂವಿನ ಟಿಂಚೆರ್ ಬಳಕೆ ಮಾಡಿ ಬಾಯಿ ಮುಕ್ಕಳಿಸಬೇಕು.

 

 

ಚೆಂಡು ಹೂವನ್ನು ಹಾಕಿಟ್ಟ ನೀರನ್ನು ಕುಡಿದರೆ ಹೊಟ್ಟೆಯಲ್ಲಿನ ಹುಳಗಳ ಸಮಸ್ಯೆ ನಿವಾರಣೆಯಾಗುತ್ತದೆ.ಇನ್ನು ಪಿರಿಯಡ್ ಸಮಯದಲ್ಲಿ ಮಹಿಳೆಯರಲ್ಲಿ ಉಂಟಾಗುವ ನರಗಳ ಸೆಳೆತವನ್ನು ಈ ಹೂವು ನಿವಾರಣೆ ಮಾಡುತ್ತವೆ.ಈ ಹೂವನ್ನು ಒಣಗಿಸಿ ತಯಾರಿಸಿದಂತಹ ಚಹಾವನ್ನು ಸೇವನೆ ಮಾಡುವುದರಿಂದ ಮೀಸಲ್ಸ್ ಗಳು ರಿಲ್ಯಾಕ್ಸ್ ಆಗಿ ನೋವು ನಿವಾರಣೆಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top