ಆರೋಗ್ಯ

ವಾರಕ್ಕೆ ಒಂದು ಡ್ರ್ಯಾಗನ್ ಫ್ರೂಟ್ ತಿಂದರೆ ಯಾವೆಲ್ಲಾ ಪ್ರಯೋಜನಗಳನ್ನ ಪಡ್ಕೋಬೋದು ಗೊತ್ತಾ?

ವಾರಕ್ಕೆ ಒಂದು ಡ್ರ್ಯಾಗನ್ ಫ್ರೂಟ್ ತಿಂದರೆ ಯಾವೆಲ್ಲಾ ಪ್ರಯೋಜನಗಳನ್ನ ಪಡ್ಕೋಬೋದು ಗೊತ್ತಾ?

 

 

ನಿಮಗೆ ಡ್ರಾಗನ್ ಹಣ್ಣಿನ ಬಗ್ಗೆ ಗೊತ್ತಾ?ಏನು ಡ್ರಾಗನ್ ಹಣ್ಣಾ?ಈ ಹೆಸರು ಕೇಳಿಲ್ಲವೇ ಎಂದುಚಕಿತರಾಗಬೇಡಿ.ಆದರೂ ಇದು ನಿಜ.ಈ ಹಣ್ಣು ಇದೆ.ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರೂ ಇದರ ಬಗ್ಗೆ ಬಹಳಷ್ಟು ಮಂದಿ ಚರ್ಚಿಸುತ್ತಿದ್ದಾರೆ.ಆದರೆ ಇಷ್ಟಕ್ಕೂ ಡ್ರಾಗನ್ ಹಣ್ಣುಅಂದರೆ ಏನು?ಈ ಹಣ್ಣು ಹೇಗಿರುತ್ತದೆ? ಇದರಿಂದ ನಮಗೆ ಏನೆಲ್ಲಾ ಲಾಭಗಳಿವೆ ಎಂಬ ವಿವರಗಳನ್ನು ಹೇಳ್ತಿವಿ ತಿಳ್ಕೊಳ್ಳಿ.

 

 

ಡ್ರಾಗನ್ ಹಣ್ಣು ನೋಡಲು ಪಿಂಕ್ ಬಣ್ಣದಲ್ಲಿ ಇರುತ್ತದೆ.ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇದಕ್ಕೆ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂದು ಕರೆಯುತ್ತಾರೆ.ಡ್ರಾಗನ್ ಹಣ್ಣು ಹೆಚ್ಚಾಗಿ ಏಷ್ಯಾದ ಕೆಲವು ಪ್ರದೇಶಗಳಲ್ಲಿ, ಅಮೇರಿಕಾ, ಆಸ್ಟ್ರೇಲಿಯಾ ಗಳಲ್ಲಿ ಬೆಳೆಯುತ್ತಾರೆ.ಇನ್ನು ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ. ಈ ಹಿನ್ನಲೆಯಲ್ಲಿ ಡ್ರಾಗನ್ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅಂತ ಹೇಳ್ತಿವಿ ತಿಳ್ಕೊಳ್ಳಿ.ಡ್ರಾಗನ್ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ರ್ಟಾಲ್ ತೊಲಗುತ್ತದೆ,ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ,ಅಧಿಕ ತೂಕ ಕಡಿಮೆ ಯಾಗುತ್ತದೆ.

 

 

ಹೃದಯ ಸಮಸ್ಯೆಗಳು ಬರುವುದಿಲ್ಲ.ಇವುಗಳಲ್ಲಿ ಇರುವ ಒಮೇಗಾ ತ್ರಿ,ಪ್ಯಾಟಿ ಆಸಿಡ್ ಗಳು ಹೃದಯದ ಆರೋಗ್ಯಕ್ಕೆ ಒಳಿತು ಮಾಡುತ್ತವೆ.ಇನ್ನು ಡ್ರಾಗನ್ ಹಣ್ಣಿನಲ್ಲಿ ಫೈಬರ್ ಹೇರಳವಾಗಿರುತ್ತದೆ.ಇದು ಗ್ಯಾಸ್, ಅಸಿಡಿಟಿ, ಮಲಬದ್ದತೆಯನ್ನು ಕಡಿಮೆ ಮಾಡುತ್ತದೆ.ತಿಂದ ಆಹಾರ ಜೀರ್ಣವಾಗುತ್ತದೆ.ಡ್ರಾಗನ್ ಹಣ್ಣಿನಲ್ಲಿ ಆಂಟಿ ಅಕ್ಸಿರಿನ್ ಗಳು ಸಹ ಸಮೃದ್ಧವಾಗಿರುತ್ತವೆ.ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ,ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ.ಕ್ಯಾನ್ಸರ್ ಕಣಗಳನ್ನುಇದು ನಾಶ ಮಾಡುತ್ತದೆ.ಇದರಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗದಂತೆ ಎಚ್ಚರವಾಗಿ ಇರಬಹುದು.

 

 

ರಕ್ತ ಸಂಚಲನ ಉತ್ತಮ ಗೊಳ್ಳುತ್ತದೆ,ರಕ್ತದೊತ್ತಡ ನಿಯಂತ್ರಣದಲ್ಲಿರಿತ್ತದೆ.ಪೊಟ್ಯಾಸಿಯಂ ಇರುವ ಕಾರಣ ಹೃದಯ ಸಮಸ್ಯೆಗಳು ಬರುವುದಿಲ್ಲ.ಡ್ರಾಗನ್ ಹಣ್ಣಿನಿಂದ ಚರ್ಮ ಕಾಂತಿಯುತವಾಗುತ್ತದೆ,ಮೃದುವಾಗಿ ಬದಲಾಗುತ್ತದೆ.ಇದರಿಂದ ವೃದ್ದಾಪ್ಯದ ಛಾಯೆಗಳು ಅಷ್ಟು ಶೀಘ್ರವಾಗಿ ಬರುವುದಿಲ್ಲ.ಡ್ರಾಗನ್ ಹಣ್ಣಿನಲ್ಲಿ ವಿಟಮಿನ್-ಸಿ ಹೆಚ್ಚಾಗಿರುತ್ತದೆ.ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.ದಂತಗಳು ವಸಡು ಸಮಸ್ಯೆಗಳು ನಿವಾರಣೆಯಾಗುತ್ತದೆ.ಶ್ವಾಸಕೋಶ ಸಮಸ್ಯೆಗಳಿಂದ ಉಪಶಮನ ಕೂಡ ಪಡೆಯಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top