ದೇವರು

ನೀವು ನಿಮ್ಮ ಲವರ್ ಪ್ರೀತಿಗೆ ಮನೆಯವರು ಒಪ್ಪಿಕೊಳ್ದೆ ನೀವು ಚಿಂತೆ ಮಾಡ್ತಿದ್ರೆ ಈ ದೇವಸ್ಥಾನಕ್ಕೆ ಒಂದ್ಸರಿ ಹೋಗ್ಬಿಟ್ ಬನ್ನಿ ನಿಮ್ಮ ಮದುವೆ ಆಗುತ್ತೆ ,ವಿಚಿತ್ರ ಅನ್ಸಿದ್ರು ನಿಜ!

ನೀವು ನಿಮ್ಮ ಲವರ್ ಪ್ರೀತಿಗೆ ಮನೆಯವರು ಒಪ್ಪಿಕೊಳ್ದೆ ನೀವು ಚಿಂತೆ ಮಾಡ್ತಿದ್ರೆ ಈ ದೇವಸ್ಥಾನಕ್ಕೆ ಒಂದ್ಸರಿ ಹೋಗ್ಬಿಟ್ ಬನ್ನಿ ನಿಮ್ಮ ಮದುವೆ ಆಗುತ್ತೆ ,ವಿಚಿತ್ರ ಅನ್ಸಿದ್ರು ನಿಜ

ನೀವು ಪ್ರೇಮಿಗಳೆ? ನಿಮ್ಮ ಪ್ರೇಮ ಜಯಗಳಿಸಬೇಕೇ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ.

ನೀವು ಪ್ರೀತಿಸಿರುವ ಹುಡುಗ ಅಥವಾ ಹುಡುಗಿ ಸಿಗಬೇಕೆಂದರೆ ನೀವು ಬಯಸಿದವರನ್ನು ಮದುವೆಯಾಗಬೇಕೆಂದರೆ ನೀವು ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ. ಒಂದೊಂದು ದೇವಾಲಯವೂ ಕೂಡ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ಆಗ ಈ ದೇವಾಲಯವೂ ಕೂಡ ನಾವು ಪ್ರೀತಿಸಿದವರನ್ನೇ ಅಥವಾ ಬಯಸಿದವರನ್ನು ವಿವಾಹವಾಗುವ ಭಾಗ್ಯವನ್ನು ನಮಗೆ ಕರುಣಿಸುತ್ತದೆ ಎನ್ನುವುದು ಸಹ ಈ ದೇವಾಲಯದ ವಿಶೇಷತೆಯಾಗಿದೆ.

ಈ ದೇವಾಲಯದ ಹೆಸರು ಶಕ್ತಿ ಮುನೇಶ್ವರ ದೇವಾಲಯ. ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ದೇವಾಲಯದ ವಿಶೇಷವೇನೆಂದರೆ ಇಲ್ಲಿ ಶಿವನು ತಾವು ಬಯಸಿದ ಜೀವನ ಸಂಗಾತಿಯನ್ನು ನೀಡುತ್ತಾನೆ .ಹೀಗೆ ಶಿವನಿಂದ ತಮ್ಮ ಬಾಳ ಸಂಗಾತಿಯನ್ನು ಪಡೆದ ಅನೇಕ ಉದಾಹರಣೆಗಳು ಇಲ್ಲಿ ಕಾಣಸಿಗುತ್ತವೆ. ತಾವು ಅಂದುಕೊಂಡಿರುವುದು ಆಗುತ್ತದೆ ಎಂಬ ವಿಶ್ವಾಸದಿಂದ ಈ ಒಂದು ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ .

 

 

ಈ ದೇವಾಲಯವಿರುವುದು ತಮಿಳುನಾಡಿನ ತಾಂಜಾವೂರು ಜಿಲ್ಲೆಯ, ಕುಂಭಕೋಣಂ ಪಟ್ಟಣದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ತಿರುಶಕ್ತಿಮಟ್ಟ0 ಎಂಬ ಹಳ್ಳಿಯಲ್ಲಿ ಇದೆ.
ಈ ಒಂದು ದೇವಾಲಯದ ಬಗ್ಗೆ ಹಾಗೂ ದೇವರ ಮಹತ್ವದ ಬಗ್ಗೆ ಕುರಿತು ಒಂದು ವಿಶಿಷ್ಟವಾದ ಕತೆ ಕೂಡ ಇದೆ.

ಪಾರ್ವತಿ ದೇವಿ ತಪಸ್ಸು ಮಾಡಿದ ಸ್ಥಳವೇ ಈಗಿರುವ ದೇವಾಲಯವಾಗಿದೆ. ಆ ತಾಯಿಯ ತಪಸ್ಸಿನ ಫಲವೇ ಈ ಸ್ಥಳ ಎಂದು ಪ್ರಸಿದ್ಧಿ ಪಡೆದಿದೆ. ಒಂಟಿಕಾಲಿನಲ್ಲಿ ನಿಂತು ಪಾರ್ವತಿ ದೇವಿಯು ತಪಸ್ಸನ್ನು ಆಚರಿಸುತ್ತಾಳೆ. ಶಿವನನ್ನು ಪಡೆದೇ ತೀರುತ್ತೇನೆಂಬ ಮಹಾದಾಸೆಯು ಅವಳಲ್ಲಿ ಪ್ರಬಲವಾಗಿರುತ್ತದೆ. ಇದನ್ನು ಕಂಡ ಶಿವನು ಪ್ರಸನ್ನನಾಗುತ್ತಾನೆ. ಅಗ್ನಿ ರೂಪದಲ್ಲಿ ದರ್ಶನ ಪ್ರಸನ್ನನಾಗಿದ್ದರೂ ಕೂಡ ಪ್ರತ್ಯಕ್ಷ ವಾಗುವುದಿಲ್ಲ.

 

 

ಪಾರ್ವತಿದೇವಿ ಮಾತ್ರ ಅಲುಗಾಡದಂತೆ ಹಾಗೆಯೇ ಇರುತ್ತಾಳೆ.ಕೊನೆಗೆ ಶಿವನು ತೇಜೋಮಯನಾದ ಅಗ್ನಿ ರೂಪದಲ್ಲಿ ದರ್ಶನ ನೀಡುತ್ತಾನೆ. ಶಿವನು ಆ ರೂಪವನ್ನು ಕಂಡ ಪಾರ್ವತಿ ಕೊಂಚವೂ ಕೂಡ ಅಲುಗಾಡದೆ, ಹೆದರದೆ ಆ ಅಗ್ನಿಯನ್ನು ತಬ್ಬಿಕೊಂಡು ಬಾವುಕಳಾಗುತ್ತಾಳೆ.

ಪಾರ್ವತಿಯ ಪ್ರೇಮಕ್ಕೆ ಮಣಿದ ಮಹಾಶಿವನು ತನ್ನ ನೈಜ ರೂಪದಲ್ಲಿ ಪ್ರತ್ಯಕ್ಷಗೊಂಡು, ಪಾರ್ವತಿ ದೇವಿಯನ್ನು ವಿವಾಹ ಮಾಡಿಕೊಳ್ಳುತ್ತಾನೆ. ಈ ರೀತಿಯಾಗಿ ಪಾರ್ವತಿ ದೇವಿಯು ತಾನು ಇಷ್ಟಪಟ್ಟಿದ್ದ ಶಿವನನ್ನೇ ಪತಿಯನ್ನಾಗಿಸಿ ಪಡೆದುಕೊಳ್ಳುತ್ತಾಳೆ. ಹಾಗಾಗಿಯೇ ಈ ದೇವಾಲಯಕ್ಕೆ ಭೇಟಿ ನೀಡಿ ಶ್ರದ್ಧೆ, ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ತಮಗೆ ಇಷ್ಟವಾದ ಬಾಳ ಸಂಗಾತಿಯನ್ನು ನೀಡುತ್ತಾನೆ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.

 

 

ಅದೇನೇ ಇರಲಿ ನೀವು ಪ್ರೀತಿಸಿದವರು ನಿಮಗೆ ಸಿಗಬೇಕೆಂದರೆ ಈ ದೇವಾಲಯಕ್ಕೆ ಭೇಟಿ ನೀಡುವುದು ಒಳ್ಳೆಯದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top