ದೇವರು

ಮಹಾಮಸ್ತಕಾಭಿಷೇಕಕ್ಕೆ ಪ್ರವಾಸಿಗರಿಗೆ ಬೈಕ್‌ ಸವಾರಿ.. ಶ್ರವಣಬೆಳಗೊಳ ಸುತ್ತಲಿನ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲ.

ಮಹಾಮಸ್ತಕಾಭಿಷೇಕಕ್ಕೆ ಪ್ರವಾಸಿಗರಿಗೆ ಬೈಕ್‌ ಸವಾರಿ..
ಶ್ರವಣಬೆಳಗೊಳ ಸುತ್ತಲಿನ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲ.

 

ಫೆಬ್ರುವರಿ 2018 ರಲ್ಲಿ ಗೊಮ್ಮಟೇಶ್ವರರ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದೆ. ಇದಕ್ಕಾಗಿ ಜಿಲ್ಲಾಡಳಿತ ಬರದ ಸಿದ್ಧತೆ ಮಾಡಿಕೊಂಡಿದೆ.. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಲ್ಲಾಡಳಿತ ಬಾಡಿಗೆ ಬೈಕ್ ನೀಡುವ ತಯ್ಯಾರಿ ಮಾಡುತ್ತಿದೆ. ಬಾಡಿಗೆ ಬೈಕ್ ನೀಡುವ ಕಂಪನಿಗಳ ಜೊತೆ ಮಾತುಕತೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

 

 

ಶ್ರವಣಬೆಳಗೊಳ ಸುತ್ತಲಿನ ಸ್ಥಳಕ್ಕೆ ಸುತ್ತಾಡಲು ಒಂದು ದಿನಕ್ಕೆ ಬೈಕ್ ಗೆ 150 ರೂಪಾಯಿ ನಿಗದಿಪಡಿಸಲಾಗಿದೆ. ಪೆಟ್ರೋಲ್ ಸವಾರರೆ ಬರಿಸತಕ್ಕದ್ದು. ಲೈಸನ್ಸ್ ಹಾಗು ಆಧಾರ್ ಕಾರ್ಡ ಇದ್ದವರಿಗೆ ಮಾತ್ರ ಬಾಡಿಗೆ ಕೊಡಲಾಗುವುದು. ಹೆಲ್ಮೆಟ್ ಕಡ್ಡಾಯವಾಗಿದೆ. ಬೈಕ್ ಗೆ GPS ಅಳವಡಿಸಿರುತ್ತಾರೆ.

 

 

ಶ್ರವಣಬೆಳಗೊಳದ ಆಸುಪಾಸಿನಲ್ಲಿರುವ ಪ್ರವಾಸಿ ಸ್ಥಳಗಳಾದ ಜಿನ್ನನಾಥಪುರ, ಹಳೇಬೆಳಗೊಳ, ಬಸ್ತಿಹಳ್ಳಿ, ಬೆಕ್ಕ, ನುಗ್ಗೇಹಳ್ಳಿ, ಕಂಬದಹಳ್ಳಿ, ಶಾಂತಿಗ್ರಾಮ, ಮೇಲುಕೋಟೆ ಜತೆಗೆ ಪ್ರವಾಸಿ ಸ್ಥಳಗಳಾದ ಬೇಲೂರು, ಹಳೇಬೀಡು, ಸಕಲೇಶಪುರ, ಬಿಸಿಲೆ ಘಾಟ್‌ ಸ್ಥಳಗಳಿಗೆ ಪ್ರವಾಸಿಗರು ಸುತ್ತಾಡಲು ಇದು ಅನುಕೂಲವಾಗಿದೆ. ಸವಾರರಿಗೆ ಸ್ಥಳಗಳ ಮಾಹಿತಿ ಇರುವ ಮ್ಯಾಪ್ ನೀಡಲಾಗುತ್ತದೆ.

 

 

ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕವು ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಜೈನ ಹಬ್ಬ. ಉತ್ಸವದಲ್ಲಿ 17. 3736 ಮೀಟರ್ (57.000 ಅಡಿ) ಭಗವಾನ ಬಾಹುಬಲಿಯ ಎತ್ತರದ ಪ್ರತಿಮೆಗೆ ಗೌರವ ನಡೆಯುತ್ತದೆ. ಅಭಿಷೇಕವು ಕಳೆದ 2006 ರಲ್ಲಿ ನಡೆದಿತ್ತು, ಮತ್ತು ಮುಂದಿನ ಸಮಾರಂಭ 2018 ರಲ್ಲಿ ನಡೆಯಲಿರುವುದು.

ಕಾರ್ಯಕ್ರಮವು ವಿಶ್ವದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರನ್ನು ಬರುತ್ತಾರೆ. ಕಾರ್ಯಕ್ರಮದ ಉದ್ಘಾಟನೆ ಫೆಬ್ರವರಿ ತಿಂಗಳ 7 ರಂದು ನಡೆಯಲಿದೆ. ಜೈನ ಪಂಚ ಕಲ್ಯಾಣ ಪ್ರತೀಕ್ಷಾ ಮಹೋತ್ಸವ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು 2018 ರ ಫೆಬ್ರವರಿ 8 ಮತ್ತು 16 ನಡುವೆ ನಡೆಯಲಿದೆ. ಪ್ರತಿಮೆಯ ಅಭಿಷೇಕ ಫೆಬ್ರವರಿ 17 ರಂದು ಆರಂಭವಾಗುವುದು ಮತ್ತು ಫೆಬ್ರವರಿ 25 ರಂದು ಕೊನೆಗೊಳ್ಳುವುದು. ಸಮಾರೋಪ ಮರುದಿನ ನಡೆಯಲಿದೆ. ಎಲ್ಲಾ 20 ದಿನಗಳಲ್ಲಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತದೆ ಎಂದು ಸ್ವಾಮೀಜಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top