fbpx
ಸಮಾಚಾರ

ಗಂಡು ಬ್ರಾ ತೊಟ್ಟು ಕ್ರಾಂತಿ ಮಾಡುವೆನೆಂದರೆ ಅದನ್ನು ‘ಬ್ರಾಂತಿ ಎನ್ನಬಹುದೇ ?

ಗಂಡು ಬ್ರಾ ತೊಟ್ಟು ಕ್ರಾಂತಿ ಮಾಡುವೆನೆಂದರೆ ಅದನ್ನು ‘ಬ್ರಾಂತಿ ಎನ್ನಬಹುದೇ ?

“ಬ್ರಾಂತಿ”!

ಗಂಡು ಬ್ರಾ ತೊಟ್ಟು ಕ್ರಾಂತಿ ಮಾಡುವೆನೆಂದರೆ ಅದನ್ನು ‘ಬ್ರಾಂತಿ ಎನ್ನಬಹುದು! ಈ ‘ಬ್ರಾಂತಿಯೇ ಆಸ್ಟ್ರೇಲಿಯಾದಲ್ಲಿ ಕ್ರಾಂತಿಯಾಗಿದೆ. ಇದಕ್ಕೆ ಕಾರಣವಾಗಿರುವುದು ಗಂಡುಗಳ ಫ್ಯಾನ್ಸಿ ಬ್ರಾಗಳು.

 

 

ಹಾಗೆಂದು ಇದನ್ನೇನು ಗಂಡುಗಳಿಗೆ ವಿಶೇಷವಾಗಿ ನೇಯ್ದು, ಕಸೂತಿ ಮಾಡಿ ಎದೆಗೆ ತೊಡಿಸಿಲ್ಲ. ಬದಲಿಗೆ ಮಹಿಳೆಯರ ಬ್ರಾಗಳನ್ನೇ ಗಂಡುಗಳ ಎದೆ ಮೇಲೆ ಹಾಕಿಸುತ್ತಿದ್ದಾರೆ. ಗುಂಡ್ರುಗೋವಿಗಳು ಇದನ್ನು ಧರಿಸಿ ಥ್ರಿಲ್ ಅನುಭವಿಸುತ್ತಿದ್ದಾರೆ.

ಹೊಮೆಮಿಸ್ಟರ್ ಕಂಪೆನಿಯ ರೇಷ್ಮೆ, ನೈಲಾನ್, ಸ್ಯಾಟಿನ್ ಬಟ್ಟೆಗಳ ಬ್ರಾ , ಪ್ಯಾಂಟಿ ಧರಿಸಿದರೆ ಗಂಡುಗಳ ಉನ್ಮಾದ-ಉತ್ಸಾಹ ಹೆಚ್ಚಲಿದೆಯಂತೆ. ಅದೆಲ್ಲಕ್ಕಿಂತಲೂ ಕಾಮಹೆಚ್ಚಾಗಿ ‘ಟಪ್ಪಾಂಗುಚ್ಚಿ’ಯ ಮೂಡ್ ಬರಲಿದೆಯಂತೆ. ನೆಚ್ಚಿನ ಪ್ರಿಯತಮೆಯೇ ಮೈಮೇಲೆ ಇಳಿದಂತೆ ಆಗಲಿದೆಯಂತೆ… ಹೀಗೆ ಹಲವು ಅಂತೆ – ಕಂತೆಗಳು ಬಿಕರಿಗಿಟ್ಟ ಬ್ರಾ ಹಿಂದಿನ ಜಾಹೀರಾತುಗಳು ಮೂಡಿ ಬಂದಿವೆ.

 

 

ಇಂತಹ ಬ್ರಾ ಧರಿಸಲು ಹೇಳಿಕೊಡುವವನ್ನು ಏನನ್ನಬಹುದು?

 

 

‘ಬ್ರಾ’ಗಳ ಹಿಂದೆ ಕೈ ಚಳಕ ಇಲ್ಲದಿದ್ದರೂ ಮೈ ಪುಳಕವಾಗಲಿದೆ.

ಆಗದಿದ್ದರೇ?

ಧರಿಸಿದ ಗಂಡಿನಲ್ಲಿಯೇ ‘ಮಿಸ್ಟೇಕ್ ’ ಇದೆ ಎನ್ನಬಹುದು!

ಹೊಮೆಮಿಸ್ಟರ್ ಬ್ರಾಗಳಿಗೆ ಮಿಸ್ಟರ್‍ಗಳಿಂದಲ್ಲದೆ ಮಿಸೆಸ್‍ಗಳಿಂದಲೂ ಬೇಡಿಕೆ ಬರುತ್ತಿದೆ. ಒಟ್ಟಿನಲ್ಲಿ ಆಸ್ಟ್ರೇಲಿಯದಲ್ಲಿ ಬ್ರಾಗಳದ್ದೇ ಅ‘ಬ್ರಾ’

 

 

ನಮ್ಮಲ್ಲೂ ಇಂತಹ ಬ್ರಾಗಳನ್ನು ಧರಿಸುವ ‘ಬ್ರಾಂತಿ ಆರಂಭವಾದರೇ?

ಉನ್ಮಾದ, ಕಾಮಾನಂದಗಳಿಲ್ಲದೆ 125 ಕೋಟಿ ಜನ ಸಂಖ್ಯೆಯಲ್ಲಿದ್ದೇವೆ. ಇಂತಹ ಬ್ರಾಗಳು ಗಂಡುಗಳ ಮೇಲೆ ಬಿದ್ದರೆ ಮುಂದಿನ ವರ್ಷಕ್ಕೆ ನಮ್ಮ ಸಂಖ್ಯೆ 200 ಕೋಟಿಗೇರಬಹುದು…!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top