ಆರೋಗ್ಯ

ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರಿಸದ ಈರುಳ್ಳಿ , ಆದ್ರೆ ರೇಟ್ ಮಾತ್ರ ಕೇಳಬೇಡಿ…ಕಣ್ಣೀರು ಬಳಬಳ ಸುರಿಯುತ್ತೆ

ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರಿಸದ ಈರುಳ್ಳಿ , ಆದ್ರೆ ರೇಟ್ ಮಾತ್ರ ಕೇಳಬೇಡಿ…ಕಣ್ಣೀರು ಬಳಬಳ ಸುರಿಯುತ್ತೆ

ಕಣ್ಣೀರು ತರಿಸದ ನೀರುಳ್ಳಿ….

ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರಬಾರದೆಂದರೇ?

ಹೆಲ್ಮೆಟ್ ಧರಿಸಿರಬೇಕು! ಇಲ್ಲಾ ಅಂದ್ರೆ ಹೆಚ್ಚುವ ಮುನ್ನ ಚೆನ್ನಾಗಿ ಬೇಯಿಸಿ, ಕಿಟಕಿ ಬಾಗಿಲು ತೆಗೆದು ಮೇಲೆ ಫ್ಯಾನ್ ಹಾಕಿ ಹೆಚ್ಚಿದರೆ ಕಣ್ಣೀರು ಬಾರದು!

ಆ ಸರ್ಕಸ್‍ಗಳಿಲ್ಲದೆ ಈ ಈರುಳ್ಳಿ ಹೆಚ್ಚಿದರೂ ಕಣ್ಣೀರು ಬಾರದು… ಜಪಾನ್‍ನ ಹೌಸ್ ಫುಡ್ ಗ್ರೂಪ್ಸ್ ಸಂಸ್ಥೆಯ ಈ ತಳಿಗಳಲ್ಲಿ ಕಣ್ಣೀರುತರಿಸುವ ಕಿಣ್ವಗಳು ಇರದು. ಘಾಟು ಕಡಿಮೆ. ರುಚಿ ಸೂಪರ್. ದಶಕ ಮೀರಿದ ಪರಿಶ್ರಮಕ್ಕೆ ಈ ಉಳ್ಳಾಗಡ್ಡಿ ಜನ್ಮಿಸಿದೆಯಂತೆ. ಆದರೂ ಪೂರ್ಣ ಪ್ರಮಾಣದ ಯಶಸ್ವು ದೊರೆತಿಲ್ಲವಂಥೆ.

 

 

ಅರೆ ನಮ್ಮ ಬಳ್ಳಾರಿ ಈರುಳ್ಳಿ ಕೂಡ ಹೆಚ್ಚುತ್ತಿದ್ದರೆ ಕಣ್ಣೀರು ಬರದಲ್ಲವೇ?

ಇಲ್ಲ. ಇದು ಸಂಶೋಧಿತ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿದ್ದು, ಬಳ್ಳಾರಿ ಈರುಳ್ಳಿಗಿಂತಲೂ ಕಣ್ಣೀರು ತರಿಸದ ಉತ್ತಮ ಈರುಳ್ಳಿಯಾಗಿದೆ. ಮಾಮೂಲಿ ಈರುಳ್ಳಿಗಳಂತೆ ಇದು ಹೆಚ್ಚುಕಾಲ ಇರದು. ಗಿಡದಿಂದ ಕೊಯ್ದು 1-2 ದಿನಗಳಲ್ಲೇ ತಿಂದು ಹಾಕಬೇಕು.

 

 

ಇದನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆದು ಮಾರಾಟ ಮಾಡಬಹುದಲ್ಲವೇ? ಹೌದು… ಅಂತಹ ಪ್ರಯೋಗಗಳು ನಡೆಯುತ್ತಲೇ ಇವೆ. ಆದರೆ ಅದೆಲ್ಲವೂ ಪ್ರಯೋಗಾಲಯದ ವ್ಯಾಪ್ತಿಯಿಂದ ಹೊರಗೆ ಬಂದಿಲ್ಲ.

 

 

ಹೋಗಲಿ ಕಣ್ಣೀರು ತರಿಸದ ಈರುಳ್ಳಿಯ ಇಂಧಿನ ಧಾರಣೆ ಏನು?

ರೇಟ್ ಮಾತ್ರ ಕೇಳಬೇಡಿ…ಕಣ್ಣೀರು ತರಿಸಲಿದೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top