ಆರೋಗ್ಯ

ಪಾಪಸ್ ಕಳ್ಳಿಯ ಉಪಯೋಗದ ಬಗ್ಗೆ ನೀವು ಇಲ್ಲಿ ತಿಳ್ಕೊಳ್ಳಿ.

ಪಾಪಸ್ ಕಳ್ಳಿಯ ಉಪಯೋಗದ ಬಗ್ಗೆ ನೀವು ಇಲ್ಲಿ ತಿಳ್ಕೊಳ್ಳಿ .

 

 

ಅಲೋವೆರಾವು ಇಂದು ವಿಶ್ವದೆಲ್ಲೆಡೆ ತುಂಬಾ ಪ್ರಸಿದ್ದಿಯಾಗಿದೆ. ಇವಾಗ ಅಲೋವೆರಾದಿಂದ ದೇಹದ ಆರೈಕೆ ಮಾಡುವುದಲ್ಲದೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ತಿಳಿ ಬಂದಿದೆ . ಅಲೋವೆರಾದ ಜ್ಯೂಸ್ ಕೂಡ ಮಾರುಕಟ್ಟೆಗೆ ಬಂದಿದೆ . ಆದರೆ ಪಾಪಸ್ ಕಳ್ಳಿಯನ್ನು ತ್ವಚೆಯ ಆರೈಕೆಗೆ ಬಳಸುತ್ತಾರೆ ಇಅದ್ರ ಬಗ್ಗೆ ನೀವು ಕೇಳಿದ್ದೀರಾ ?
ಅಲೋವೆರಾದ ಕುಟುಂಬಕ್ಕೆ ಸೇರಿಸುವ ಪಾಪಸ್ ಕಳ್ಳಿ ಕೂಡ ತ್ವಚೆಯ ಆರೈಕೆಗೆ ತುಂಬಾ ಒಳ್ಳೆಯದು , ಇದನ್ನು ಕೇಳಿ ನಿಮಗೆ ಆಚರಿಯಾದರು ಇದು ನಿಜ .

 

 

ಮೊಡವೆಗಳಿಂದ ಆಗುವ ಕಲೆಗಳ ನಿವಾರಣೆ ಮಾಡುವಲ್ಲಿ ಪಾಪಸ್ ಕಳ್ಳಿಯ ಲೋಳೆಯ ರಸ ತುಂಬಾ ಪರಿಣಾಮಕಾರಿ ಎಂದು ತಿಳಿದು ಬಂದಿದೆ, ಮುಳ್ಳುಗಳಿಂದಲೇ ತುಂಬಿರುವ ಪಾಪಸ್ ಕಳ್ಳಿಯ ಲೋಳೆ ತೆಗೆಯುವುದು ತುಂಬಾ ಕಷ್ಟದ ಕೆಲಸ . ಆದರೆ ಎಚ್ಚರಿಕೆಯಿಂದ ಇದರ ಲೋಳೆ ತೆಗೆದು ಬಳಸಿಕೊಂಡರೆ ತುಂಬಾ ಪರಿಣಾಮಕಾರಿ ಕೆಲಸ ಮಾಡುತ್ತದೆ .

ಮನೆಮದ್ದು ಯಾವಾಗ್ಲೂ ತುಂಬಾ ನಿಧಾನವಾಗಿ ಫಲಿತಾಂಶ ನೀಡುವ ಕಾರಣದಿಂದ ಇದನ್ನು ಒಂದು ಸಲ ಉಪಯೋಗಿಸಿದರೆ ಯಾವುದೇ ಫಲಿತಾಂಶ ನಮಗೆ ಸಿಗುವುದಿಲ್ಲ . ಇದನ್ನು ನಿಯಮಿತವಾಗಿ ಬಳಸಿದರೆ ಫಲಿತಾಂಶ ಖಚಿತ . ಪಾಪಸ್ ಕಳ್ಳಿಯ ಲೋಳೆಯನ್ನುತಿಂಗಳಲ್ಲಿ 8 -10 ಸಲ ಬಳಸಿದಾಗ ನಿಮಗೆ ಉತ್ತಮ ಫಲಿತಾಂಶ ನೀಡುವುದು . ತ್ವಚೆಯ ಬಣ್ಣದಲ್ಲಿ ಬದಲಾವಣೆಯಾಗಿ ಕಲೆಗಳು ನಿವಾರಣೆಯಾಗುವುದು ಪಾಪಸ್ ಕಳ್ಳಿಯ ಲೋಳೆಯನ್ನು ನೇರವಾಗಿ ತ್ವಚೆಗೆ ಹೆಚ್ಚಿಕೊಳ್ಳಬೇಡಿ ಇದರಿಂದ ಮಾಸ್ಕ ತಯಾರಿಸಿ ಬಳಸಿಕೊಳ್ಳಿ , ಮಾಸ್ಕ್ನ್ ಹೇಗೆ ಮಾಡುವುದು ಅಂತ ನೋಡಿ.

 

 

1 ಪಾಪಸ್ ಕಳ್ಳಿ ಎಲೆಯನ್ನು ತುಂಬಾ ಎಚ್ಚರಿಕೆಯಿಂದ ಹಿಡಿದುಕೊಂಡು ಕತ್ತರಿಯಿಂದ ಕತ್ತರಿಸಿ ಎಳೆಯನ್ನು ತೊಳೆಯಿರಿ . ನಂತರ ಒಂದು ಚಮಚದಷ್ಟು ಲೋಳೆಯನ್ನು ತೆಗೆದುಕೊಳ್ಳಿ ಇದರ ಬಣ್ಣ ಹಸಿರಾಗುತ್ತದೆ ಇದಕ್ಕೆ ಇವಾಗ 1 ಚಮಚ ಹಸಿ ಜೇನುತುಪ್ಪ 1 ನಿಂಬೆಯ ರಸ ಹಾಕಿಕೊಂಡು ಚನ್ನಾಗಿ ಬೆರಸಿ . ಈಗ ಪಾಪಸ್ ಕಳ್ಳಿಯ ಮಾಸ್ಕ್ ಬಳಸುವುದು . ಮಾದಲು ದೇಹದ ಭಾಗಕ್ಕೆ ಹಚ್ಚಿಕೊಂಡು ಅಲರ್ಜಿ ಆಗುತ್ತದೆಯೋ ಎಂದು ತಿಳಿಯಿರಿ . ನಂತರ ಮೊಡವೆ ಹಾಗು ಇತರ ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ 20 ನಿಮಿಷಗಳ ಕಾಲ ಬಿಟ್ಟು ಬಳಿಕ ತೊಳಿಯಿರಿ . ನಿಯಮಿತವಾಗಿ ಇದನ್ನು ಬಳಸುತ್ತಾ ಇದ್ದರೆ ತ್ವಚೆಯಲ್ಲಿ ಇರುವ ಮೊಡವೆ ಹಾಗೂ ಬೊಕ್ಕೆಯ ಕಲೆಗಳು ಉತ್ತಮ ಫಲಿತಾಂಶ ಸಿಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top