fbpx
ಮನೋರಂಜನೆ

ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ಗೊತ್ತಿಲ್ಲದ ಸೀಕ್ರೆಟ್ ಹೇಳಿದ ಪುನೀತ್ ರಾಜ್ ಕುಮಾರ್ !

ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ಗೊತ್ತಿಲ್ಲದ ಸೀಕ್ರೆಟ್ ಹೇಳಿದ ಪುನೀತ್ ರಾಜ್ ಕುಮಾರ್ !

 

 

 

ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾದ ಪುನೀತ್ ರಾಜ್ ಕುಮಾರ್ ತಮ್ಮ ಸರಳತೆಯಿಂದ ಎಲ್ಲರಿಂದ ರಾಜರತ್ನ ಹಾಗು ದೊಡ್ಮನೆ ಹುಡುಗ ಎಂದೇ ಖ್ಯಾತರಾಗಿದ್ದಾರೆ . ಇನ್ನು ಗಣೇಶ್ , ಕಿಚ್ಚ ಸುದೀಪ್ , ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ಖ್ಯಾತ ತಾರೆಯರು ಟಿವಿ ಶೋ ನಡೆಸಿಕೊಡುವುದರಲ್ಲಿ ನಿಸ್ಸಿಮರು . ಕನ್ನಡದ ಕೋಟ್ಯಾಧಿಪತಿಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ರಾಜ ರತ್ನ ಪುನೀತ್ ರಾಜ್ ಕುಮಾರ್ ಕೆಲ ತಿಂಗಳ ಹಿಂದೆ ಶುರುವಾದ ಫ್ಯಾಮಿಲಿ ಪವರ್ ಎಂಬ ಕಾರ್ಯಕ್ರಮವನ್ನು ಬಹಳ ಸೊಗಸಾಗಿ ನಡೆಸಿಕೊಡುತ್ತಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

 

ಕುಟುಂಬಗಳ ಜೊತೆಗೆ ಒಬ್ಬರಂತೆ ಎಲ್ಲರ ಜೊತೆ ನಲಿಯುತ್ತ ಕಾರ್ಯಕ್ರಮ ನಡೆಸಿಕೊಡುವ ಪರಿ ನೋಡುಗರಿಗೆ ಖುಷಿಕೊಡುತ್ತದೆ ,ಬರುವ ಸ್ಪರ್ಧಿಗಳಿಗೆ ತಮ್ಮ ಮೆಚ್ಚಿನ ಸ್ಟಾರ್ ಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ , ಹೀಗೆ ಇತ್ತೀಚಿಗೆ ಮುತ್ತಿನ ಹಾರ ಚಿತ್ರದ 2 ನೇ ಭಾಗದಲ್ಲಿ ವಿಷ್ಣುವರ್ಧನ್ ಬೋಳುತಲೆಯಲ್ಲಿರುವ ದೃಶ್ಯವನ್ನು ತೋರಿಸಿ ಅದರ ಹಿಂದಿನ ಕೆಲವು ಘಟನೆಗಳನ್ನು ಪುನೀತ್ ಹಂಚಿಕೊಂಡರು .

 

 

ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಮುತ್ತಿನ ಹಾರ ಚಿತ್ರಕ್ಕೆ ವಿಷ್ಣುವರ್ಧನ್ ಅವರು ನಾಯಕ ನಟನಾಗಿ ಅಭಿನಯ ಮಾಡಿದ್ದರು , ನಾಯಕ ನಟ ಬೋಳುತಲೆಯಲ್ಲಿರ ಬೇಕಾದ ಅನಿವಾರ್ಯತೆ ಇದೆ ಎಂದು ತಿಳಿದಾಗ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ವಿಗ್ ಹಾಕಿಸಿ ವಿಷ್ಣು ಅವರಿಂದ ಪಾತ್ರ ಮಾಡಿಸೋಣ ಅಂದುಕೊಂಡರಂತೆ ಆದರೆ ನೈಸರ್ಗಿಕವಾಗಿ ಪಾತ್ರ ಮೂಡಿ ಬರುವುದಿಲ್ಲ ಎಂದು ತಮ್ಮ ಕೂದಲನ್ನು ಬೋಳಿಸಿ ಅಭಿನಯ ಮಾಡಿದರಂತೆ ಇದು ಅವರ ಸಿನಿಮಾ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ವಿಷುವರ್ಧನ್ ಅವ್ರ ಬಗ್ಗೆ ಪುನೀತ್ ಹಂಚಿಕೊಂಡರು . ಅಷ್ಟೇ ಅಲ್ಲದೆ ವಿಷ್ಣು ಅವರನ್ನು ಆ ರೀತಿ ನೋಡಲಾಗದೆ ಎಷ್ಟೋ ಅಭಿಮಾನಿಗಳು ವಿಷ್ಣು ಅವರ ರೀತಿಯೇ ತಲೆ ಬೋಳಿಸಿ ಸಿನಿಮಾ ನೋಡಿದರಂತೆ .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top