fbpx
ಹೆಚ್ಚಿನ

ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿದ ವಿಶ್ವ ಚಾಂಪಿಯನ್ ಪವರ್ ಲಿಫ್ಟರ್‍ ಸಾಕ್ಷಮ್ ಯಾದವ್

ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿದ ವಿಶ್ವ ಚಾಂಪಿಯನ್ ಪವರ್ ಲಿಫ್ಟರ್‍ ಸಾಕ್ಷಮ್ ಯಾದವ್

 

ಪವರ್ ಲಿಫ್ಟಿಂಗ್ ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್ ಭಾನುವಾರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಘವರಿ ಗಾಯಗೊಂಡಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ದೆಹಲಿಯ ಸಿಂಧೂ ಗಡಿಯಲ್ಲಿ 3:00 ಗಂಟೆಗೆ ತೀವ್ರವಾದ ಮಂಜು ಇದ್ದ ಕಾರಣ ಈ ಘಟನೆ ಸಂಭವಿಸಿದೆ.

 

 

ಯಾದವ್ (23) ಅವರನ್ನು ಮೊದಲು ನರೇಲಾದ ರಾಜಾ ಹರೀಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಮತ್ತು ನಂತರ AIIMS ಟ್ರಾಮಾ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಯಿತು.

 

 

ಸಾಕ್ಷಮ್ ಯಾದವ್ ಅವರ ಜೊತೆ ಪ್ರಯಾಣಿಸುತ್ತಿದ್ದ ಪವರ್ ಲಿಫ್ಟರ್ ಗಳಾದ ಟಿಕಮ್‍ಚಂದ್, ಸೌರಭ್, ಯೋಗೇಶ್ ಹಾಗೂ ಹರೀಶ್ ರಾಯ್ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಮದ್ಯದ ಬಾಟಲಿಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ರೋಹಿತ್ ಎಂಬ ವ್ಯಕ್ತಿ ಮಾತ್ರ ಬದುಕುಳಿದಿದ್ದು ಆಸ್ಥೆಯಲ್ಲಿ ಚಿಕಿತ್ಸೆ ಪಡೆಯ್ತುತ್ತಿದ್ದಾರೆ.

 

ಅವರು ಮನೆಗೆ ಬರುತ್ತಿಸೇವೆ ಎಂದು ಕಳೆದ ರಾತ್ರಿ ಫೋನ್ ಮಾಡಿ ತಿಳಿಸಿದ್ದರು, ಮುಂಜಾನೆ ಅಪಘಾತದ ಬಗ್ಗೆ ನಮಗೆ ತಿಳಿಯಿತು ಎಂದು ಅಪಘಾತದಲ್ಲಿ ಟಿಕಮ್‍ಚಂದ್ ಅವರ ಸಹೋದರಿ ಸುದ್ದಿ ಸಂಸ್ಥೆ ತಿಳಿಸಿದರು. ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top