ಭವಿಷ್ಯ

ವಾರ ಭವಿಷ್ಯ ಜನವರಿ 7ನೇ ತಾರೀಖಿನಿಂದ 14 ನೇ ತಾರೀಖಿನವರೆಗೆ.

ವಾರ ಭವಿಷ್ಯ ಜನವರಿ 7ನೇ ತಾರೀಖಿನಿಂದ 14 ನೇ ತಾರೀಖಿನವರೆಗೆ.

 

ಮೇಷ (Mesha)

 

ಈ ವಾರ ಮೇಷ ರಾಶಿಯವರು ಅನ್ಯರ ಮನಸ್ಸನ್ನು ಗೆಲ್ಲುವಿರಿ. ಆತ್ಮೀಯರಿಂದ ಪ್ರಶಂಸೆಗೆ ಒಳಗಾಗುವಿರಿ, ಹೊಗಳಿಕೆಯ ಮಾತಿಗೆ ಮರುಳಾಗಬೇಡಿ.ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು, ದೇವತಾ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಬಹಳಷ್ಟು ಅನುಕೂಲ ಕಾಣುವಿರಿ, ಮಾನಸಿಕ ನೆಮ್ಮದಿ ದೊರೆಯಲಿದೆ. ಕುಟುಂಬದಲ್ಲಿ ವಾರಾಂತ್ಯದಲ್ಲಿ ಆತಂಕಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ಪರಿಹಾರ:- ಪ್ರತಿದಿನ ಸೂರ್ಯ ನಮಸ್ಕಾರ ಮಾಡಿ ಪಕ್ಷಿಗಳಿಗೆ ಆಹಾರವಾಗಿ ಧಾನ್ಯವನ್ನು ನೀಡಿ.

 

ವೃಷಭ (Vrushabha)

 

ಈ ವಾರ ವ್ಯಾಪಾರ ವ್ಯವಹಾರಗಳಲ್ಲಿ ಮುನ್ನಡೆ, ನಿಂತುಹೋಗಿದ್ದ ಕಾರ್ಯಗಳು ಪ್ರಗತಿ ಕಾಣಲಿವೆ. ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಕೆಲಸದ ಒತ್ತಡ ಹೆಚ್ಚಾಗುವುದು, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಗೊಂದಲಗಳು ಮನಸ್ಸಿನಲ್ಲಿ ಸೃಷ್ಟಿಯಾಗುತ್ತವೆ. ತಾಳ್ಮೆಯಿಂದ ಇರುವುದು ಒಳ್ಳೆಯದು. ಅನುಕೂಲಗಳು ಆಗುತ್ತವೆ, ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಮುನ್ನಡೆ, ವಿಪರೀತ ತಿರುಗಾಟ ಮಾಡುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ .
ಪರಿಹಾರ:- ಪ್ರತಿದಿನ ಶಿವ ದೇವರ ದೇವಾಲಯಕ್ಕೆ ಭೇಟಿ ನೀಡಿ. ಬಿಲ್ವಾರ್ಚನೆಯನ್ನು ಮಾಡಿಸಿ, ಶಿವನಿಗೆ ದಶ ಪ್ರದಕ್ಷಿಣ ನಮಸ್ಕಾರವನ್ನು ಮಾಡಿ.

 

ಮಿಥುನ (Mithuna)

 

ಕುಟುಂಬದಲ್ಲಿ ಏನೇ ಒಂದು ರೀತಿಯ ಅಶಾಂತಿಯ ವಾತಾವರಣ ಕಂಡು ಬರಲಿದೆ. ಯತ್ನಿಸಿದ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ.ಕೆಲಸಗಾರರಿಂದ ಕಿರಿಕಿರಿಗೆ ಒಳಗಾಗುತ್ತೀರಿ, ಪುಣ್ಯಕ್ಷೇತ್ರ ದರ್ಶನ ಮಾಡುವ ಶುಭ ಯೋಗ ಈ ವಾರ ನಿಮಗೆ ಇದೆ, ರಾಜಕೀಯ ವ್ಯಕ್ತಿಗಳಿಂದ ಬಹಳಷ್ಟು ಅನುಕೂಲ, ಬುದ್ಧಿವಂತಿಕೆಯಿಂದ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ, ಸ್ತ್ರೀಯರಿಗೆ ಅನುಕೂಲವಾಗುವುದು, ವಸ್ತ್ರಾಭರಣ ಪ್ರಾಪ್ತಿಯಾಗುವ ವಿಶೇಷ ಯೋಗ ಈ ವಾರ ಲಭ್ಯವಾಗಲಿದೆ.
ಪರಿಹಾರ:- ಪ್ರತಿ ದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.ಬುಧವಾರ ಹೆಸರುಬೇಳೆ ಕೋಸಂಬರಿಯನ್ನು ಶ್ರೀಮನ್ನಾರಾಯಣನ ದೇವಾಲಯದಲ್ಲಿ ನೈವೇದ್ಯವಾಗಿ ಅರ್ಪಿಸಿ ಪ್ರಸಾದವಾಗಿ ವಿತರಿಸಿ.
ಕಟಕ ರಾಶಿ.

 

ಕರ್ಕ (Karka)

 

ಕಟಕ ರಾಶಿಯವರಿಗೆ ಈ ವಾರ ಆತ್ಮೀಯರಿಂದಲೇ ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಸ್ವಲ್ಪ ಜಾಗರೂಕತೆಯಿಂದ ಇರುವುದು ಉತ್ತಮ.ಯಾರನ್ನೂ ಕೂಡ ಹೆಚ್ಚಿಗೆ ನಂಬಬೇಡಿ, ವಿಪರೀತವಾಗಿ ಹಣ ಖರ್ಚಾಗುವುದು, ಪ್ರೇಮಿಗಳಿಗೆ ಜಯ ಸಿಗುವುದು, ವಾಹನ ಖರ್ಚಿನ ಮೇಲೆ ನಿಗಾ ಇರಿಸಿ, ಹಿತಶತ್ರುಗಳಿಂದ ತೊಂದರೆಯಾಗುವುದು. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ, ಸ್ಥಿರಾಸ್ತಿ ಮಾರಾಟದಿಂದ ಬಹಳಷ್ಟು ಲಾಭಗಳು ಈ ವಾರ ನಿಮಗೆ ಲಭ್ಯವಾಗಲಿದೆ.
ಪರಿಹಾರ :-ಪ್ರತಿನಿತ್ಯ ನವಗ್ರಹ ಪ್ರದಕ್ಷಿಣೆಯನ್ನು ಮಾಡಿ ನಮಸ್ಕಾರ ಮಾಡಿ.

 

ಸಿಂಹ (Simha)

 

ಈ ವಾರ ಉತ್ತಮ ಆದಾಯ ನಿಮ್ಮ ಪಾಲಿಗೆ ಲಭ್ಯವಾಗುತ್ತದೆ. ದಾಂಪತ್ಯದಲ್ಲಿ ಗಂಡ ಹೆಂಡತಿಯ ಮಧ್ಯೆ ವಿರಸ ಕಂಡು ಬರುವುದು. ವ್ಯರ್ಥವಾದ ತಿರುಗಾಟ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು, ಸಾಲ ಮರುಪಾವತಿಯಾಗಲಿದೆ, ಮೇಲಧಿಕಾರಿಗಳಿಂದ ತೊಂದರೆ ಉಂಟಾಗುವುದು, ಅನಗತ್ಯವಾಗಿ ಹಣವನ್ನು ಖರ್ಚು ಮಾಡುವಿರಿ. ದುಶ್ಚಟಗಳಿಗೆ ದಾಸರಾಗುವಿರಿ, ಜಾಗರೂಕತೆಯನ್ನು ವಹಿಸಿ ಚಂಚಲ ಮನಸ್ಸು, ಮನಸ್ಸನ್ನು ಏಕಾಗ್ರತೆಯಿಂದ ಇರಿಸಲು ಪ್ರಯತ್ನಿಸಿ.
ಪರಿಹಾರ:- ಪ್ರತಿದಿನ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ನಾಟಿ ತುಳಸಿಯನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರ ಮಾಡಿ.

 

ಕನ್ಯಾರಾಶಿ (Kanya)

 

ಕನ್ಯಾ ರಾಶಿಯವರಿಗೆ ಈ ವಾರ ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸುವಿರಿ, ದೇವರ ಕಾರ್ಯಗಳಿಗೆ ಹೆಚ್ಚಾಗಿ ಮನಸ್ಸು ಒಲಿಯುವುದು. ದುಶ್ಚಟದಿಂದ ತೊಂದರೆಗೆ ಒಳಗಾಗುವ ಸಂಭವ ಹೆಚ್ಚಿದೆ,ಅವರು ಮಾಡುವ ಷಡ್ಯಂತ್ರಕ್ಕೆ ನೀವು ಬಲಿಯಾಗದಿರಿ, ವಾಹನ ಚಾಲನೆ ಮಾಡುವವರು ಬಹಳಷ್ಟು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ, ದಾನ ಧರ್ಮಗಳಲ್ಲಿ ಆಸಕ್ತಿ ಹೆಚ್ಚಾಗುವುದು, ನೀಚ ಜನರ ಸಹವಾಸದಿಂದ ಇಲ್ಲ ಸಲ್ಲದ ಆರೋಪಗಳು ಅಪವಾದಗಳು ಬರಲಿವೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಪರಿಹಾರ:- ಪ್ರತಿದಿನ ಲಲಿತ ಸಹಸ್ರನಾಮ ಪಾರಾಯಣ ಮಾಡಿ. ಶುಕ್ರವಾರ ಸುಮಂಗಲಿಯರಿಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆಯಿರಿ ಇದರಿಂದ ವಿಶೇಷವಾದ ಫಲ ನಿಮಗೆ ಲಭ್ಯವಾಗಲಿದೆ.

ತುಲಾ (Tula)

 

ವಿದ್ಯಾಭ್ಯಾಸ ಮಾಡುತ್ತಿರುವವರು ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.ಅನ್ಯರಿಂದ ಹಣದ ಸಹಾಯವನ್ನು ಪಡೆಯಲಿದ್ದೀರಿ, ಅಧಿಕಾರಿಗಳಿಂದ ಬಹಳಷ್ಟು ಅನುಕೂಲವಾಗಲಿದೆ. ಭಯ ಭೀತಿ ನಿವಾರಣೆಯಾಗಲಿದೆ. ಸ್ತ್ರೀಯರಿಗೆ ಬಹಳಷ್ಟು ಅನುಕೂಲವಾಗುವ ಸಾಧ್ಯತೆಯಿದೆ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವ ಶುಭ ಯೋಗ ಕೂಡಿಬರಲಿದೆ, ಸ್ಥಳ ಬದಲಾವಣೆಯನ್ನು ಮಾಡುವ ಸಾಧ್ಯತೆಯಿದೆ.
ಪರಿಹಾರ:- ಪ್ರತಿನಿತ್ಯ ನರಸಿಂಹ ಅಷ್ಟಕವನ್ನು ಪಾರಾಯಣ ಮಾಡಿ ಅಥವಾ ನರಸಿಂಹ ಸ್ವಾಮಿಯ ದೇವಾಲಯಕ್ಕೆ ಬೇಟಿ ನೀಡಿ ನಮಸ್ಕಾರ ಮಾಡಿ.

 

ವೃಶ್ಚಿಕ (Vrushchika)

 

ವೃಶ್ಚಿಕ ರಾಶಿಯವರಿಗೆ ಈ ವಾರ ನಾನಾ ವಿಚಾರಗಳಲ್ಲಿ ಆಸಕ್ತಿ ಕಂಡುಬರುವುದು. ಶತ್ರುಗಳ ಕಾಟ ಹೆಚ್ಚಾಗುವುದು, ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ಬಲಿಯಾಗಬೇಡಿ, ಚಂಚಲ ಮನಸ್ಸು, ಮನಸನ್ನು ಏಕಾಗ್ರತೆಯ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸಿ, ವಿಪರೀತ ಕಷ್ಟ ಹೇಳಿಕೊಳ್ಳಲು ಆಗುವುದಿಲ್ಲ, ಹೇಳಿಕೊಂಡರೂ ಸಮಸ್ಯೆ ಬಗೆಹರಿಯುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಈ ವಾರ ನೀವು ಸಿಲುಕುವಿರಿ. ಇಲ್ಲ ಸಲ್ಲದ ಅಪವಾದಗಳು ನಿಮ್ಮ ಮೇಲೆ ಬರುವ ಸಾಧ್ಯತೆ ಇದೆ. ಆಲಸ್ಯ ಮನೋಭಾವ, ಅನ್ಯರಲ್ಲಿ ದ್ವೇಷವನ್ನು ಸಾಧಿಸುತ್ತೀರಿ.
ಪರಿಹಾರ:- ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ, ಅಂಧ ಮಕ್ಕಳಿಗೆ ನಿಮ್ಮ ಕೈಯಲ್ಲಿ ಆಗುವ ಸಹಾಯವನ್ನು ಮಾಡಿ.

 

ಧನು ರಾಶಿ (Dhanu)

 

ಈ ವಾರ ಅಲ್ಪ ಆದಾಯ, ವಿಪರೀತ ಖರ್ಚು ಹೆಚ್ಚಾಗುವ ಸಂಭವವಿದೆ. ಹತ್ತು ರೂಪಾಯಿ ಬಂದರೆ ನೂರು ರೂಪಾಯಿ ಖರ್ಚಾಗಬಹುದು. ಖರ್ಚಿನ ಮೇಲೆ ಹಿಡಿತವಿರಲಿ, ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡು ಬರುವುದು.ಯತ್ನ ಕಾರ್ಯಗಳಲ್ಲಿ ವಿಘ್ನ, ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ, ವಿದೇಶ ಪ್ರಯಾಣ ಮಾಡುವ ಶುಭಯೋಗವಿದೆ. ಶೀತ ಸಂಬಂಧಿತ ರೋಗ ಬಾಧೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ದುಷ್ಟರ ಸಹವಾಸದಿಂದ ತೊಂದರೆಗಳಿಗೆ ಒಳಗಾಗುವಿರಿ.
ಪರಿಹಾರ:- ಪ್ರತಿ ದಿನ ಗೋಪೂಜೆ ಮಾಡಿ, ಬೆಲ್ಲ ಮತ್ತು ಬಾಳೆಹಣ್ಣು ಮಿಶ್ರಣ ಮಾಡಿ ಹಸು ಮತ್ತು ಕರುವಿಗೆ ತಿನ್ನಲು ನೀಡಿ.

 

ಮಕರ (Makara)

 

ಈ ವಾರ ಋಣಬಾಧೆ ಅಥವಾ ರೋಗ ಬಾಧೆ ಕಂಡು ಬರುವುದು. ಯತ್ನ ಕಾರ್ಯಗಳಲ್ಲಿ ಜಯ, ಬಂಧು ಮಿತ್ರರನ್ನು ಭೇಟಿ ಮಾಡುವಿರಿ, ಇಷ್ಟಾರ್ಥ ಸಿದ್ಧಿ, ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ, ಪರಸ್ಥಳ ವಾಸ, ತೀರ್ಥಯಾತ್ರೆಯ ದರ್ಶನ ಮಾಡುವ ಶುಭ ಯೋಗ ಕೂಡಿ ಬರಲಿದೆ.
ಪರಿಹಾರ:- ಪ್ರತಿ ದಿನ ಸುದರ್ಶನ ಮಂತ್ರವನ್ನು ಪಾರಾಯಣ ಮಾಡಿ.

 

ಕುಂಭರಾಶಿ (Kumbha)

 

ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಾಣಲಿದ್ದೀರಿ, ಕುಟುಂಬದಲ್ಲಿ ಅನರ್ಥ ಉಂಟಾಗುತ್ತದೆ. ಮಾತಾ ಪಿತೃಗಳಲ್ಲಿ ದ್ವೇಷವನ್ನು ಸಾಧಿಸುವಿರಿ, ಶತ್ರುಬಾಧೆ, ಅಕಾಲ ಭೋಜನ, ಅನಿರೀಕ್ಷಿತ ಖರ್ಚು ಹೆಚ್ಚಾಗುವುದು. ಸಜ್ಜನರ ಸಹವಾಸದಿಂದ ಕೀರ್ತಿ ದೊರೆಯಲಿದೆ .ಅಧಿಕ ಕೋಪ ಹೆಚ್ಚಾಗುವುದು, ಆದರೆ ಕೋಪವನ್ನು ಹೆಚ್ಚಾಗಿ ಮಾಡಿಕೊಳ್ಳಬೇಡಿ, ತಾಳ್ಮೆ ಮತ್ತು ಸಹನೆಯಿಂದ ಇರಿ.
ಪರಿಹಾರ:- ಪ್ರತಿದಿನ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಗಣೇಶನಿಗೆ ಇಪ್ಪತ್ತೊಂದು ನಮಸ್ಕಾರಗಳನ್ನು ಮಾಡಿ .

 

ಮೀನರಾಶಿ (Meena)

 

ಸಾಧಾರಣ ಪ್ರಗತಿ ಕಾಣಲಿದ್ದೀರಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಏನೋ ಒಂದು ರೀತಿಯ ಆತಂಕಕ್ಕೆ ಒಳಗಾಗುವ ಸಾಧ್ಯತೆಯಿದೆ. ಉದ್ಯೋಗದ ಸ್ಥಳದಲ್ಲಿ ನಿಂದನೆ, ಅಪವಾದಗಳು ನಿಮ್ಮ ಮೇಲೆ ಬರುತ್ತವೆ. ಯಂತ್ರ ಮತ್ತು ಉಪಕರಣಗಳು ಮಾರಾಟ ಮಾಡುವವರಿಗೆ ಬಹಳಷ್ಟು ಲಾಭ,ಉತ್ತಮ ಬುದ್ಧಿಶಕ್ತಿ ಈ ವಾರ ನಿಮಗೆ ಪ್ರಾಪ್ತಿಯಾಗಲಿದೆ.
ಪರಿಹಾರ:- “ಓಂ ದತ್ತಾತ್ರೇಯಾಯ ನಮಃ” ಈ ಮಂತ್ರವನ್ನು ಇಪ್ಪತ್ತೊಂದು ಬಾರಿ ಪ್ರತಿನಿತ್ಯ ಜಪಿಸಿ. ಗುರುವಾರ ದಕ್ಷಿಣಾಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ, ದೀರ್ಘದಂಡ ನಮಸ್ಕಾರ ಮಾಡಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top