fbpx
ಸಮಾಚಾರ

ಬೀದಿ ಬೀದಿ ತಿರುಗಿ ಕಷ್ಟಪಟ್ಟು ರೊಕ್ಕ ಎತ್ತುವ ಇವರು ಏಕ ಚಕ್ರಾಧಿಪತಿಗಳು

ಬೀದಿ ಬೀದಿ ತಿರುಗಿ ಕಷ್ಟಪಟ್ಟು ರೊಕ್ಕ ಎತ್ತುವ ಇವರು ಏಕ ಚಕ್ರಾಧಿಪತಿಗಳು

ಚಕ್ರಗೋಷ್ಠಿ

ಇವರನ್ನು ಏಕ ಚಕ್ರಾಧಿಪತಿಗಳು – ಚಕ್ರ‘ವಾಕ್’ರೆನ್ನಬಹುದು. ಆದರೆ ಅಷ್ಟಕ್ಕೆ ಮಾತ್ರ ಇವರು ಸೀಮಿತರಲ್ಲ. ದೊಡ್ಡ ಚಕ್ರವೊಂದರಲ್ಲಿ 6 ಜನ ಕೂತು ವಾದ್ಯಗೋಷ್ಠಿ ನಡೆಸುತ್ತಾರೆ. ಇದನ್ನು ಚಕ್ರಗೋಷ್ಠಿ ಎನ್ನಲು ಅಡ್ಡಿಯಿಲ್ಲ.

 

 

‘ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು’ ಎಂಬುದನ್ನು ಇವರಿಗೆ ಅನ್ವಯಿಸಿ ಹೇಳಬಹುದು! ಏಕೆಂದರೆ ಎಲ್ಲಾ 6 ಕಲಾವಿದರು ವಾದ್ಯವನ್ನೂ ನುಡಿಸಬೇಕು ಜೊತೆಗೆ ಈ ಚಕ್ರದ ಪೆಡಲ್ ತುಳಿಯಬೇಕು. ಅಲ್ಲದೆ ಕೂತಲ್ಲೇ ಮೇಲೆ-ಕೆಳಗೆ ಅಲುಗಾಡುತ್ತಾ ಅಥವಾ ಅಪ್ಪಾಳೆ ತಿಪ್ಪಾಳೆ ಆಡುತ್ತಿರಬೇಕು. ಒಬ್ಬ ಡ್ರಮ್ಸ್, ಮತ್ತೊಬ್ಬ ಸ್ಯಾಕ್ಸೋಫೋನ್, ಮಗದೊಬ್ಬ ಗಿಟಾರ್…. ಹೀಗೆ ಆರು ವಾದ್ಯಗಳು… ಎಲ್ಲರೂ ಒಂದೇ ಚಕದ್ರದಲ್ಲೇ ಸಾಗುತ್ತಾರೆ.

ಒಬ್ಬರು ಏರು ಪೇರು ಮಾಡಿದರೂ ಒಟ್ಟಾರೆ ಚಕ್ರದ ಬ್ಯಾಲೆನ್ಸ್ ತಪ್ಪಲಿದೆ. ಅಂತೆಯೇ ನುಡಿಸುವ ವಾದ್ಯದ ರಾಗ-ತಾಳ ಬದಲಾದರೂ ಕೇಳುಗರಿಗೆ ಅಭಾಸವಾಗಲಿದೆ. ಹೀಗೆ ಬ್ಯಾಲೆನ್ಸ್ ಮ್ಯೂಸಿಕ್ ಮಾಡುತ್ತಿರುವುದು ನಿಜಕ್ಕೂ ಸೋಜಿಗ.

 

 

ಸುಮಾರು 4ಮೀಟರ್ ಎತ್ತರ-15 ಸೆಂ.ಮೀ ಅಗಲದ ಏಕಚಕ್ರದ ರಥಾವರ ಸಾಗಿದರೆ ಇವರ ಬದುಕು ಸಾಗಲಿದೆ. ಜಾತ್ರೆ, ಶಾಪಿಂಗ್‍ಮಾಲ್‍ಗಳ ಬಳಿಯಲ್ಲಿ ಇವರ ಕಮಾಲ್ ಬಲುಜೋರಾಗಿದೆ. ಬಾರ್ಸಿಲೋನಕ್ಕೆ ತೆರಳಿದರೆ ಕಿವಿಯಾರೆ ಚಕ್ರಗೋಷ್ಠಿಯನ್ನು ಆಲಿಸಬಹುದು. ಕಣ್ಣಾರೆ ತುಂಬಿಕೊಳ್ಳಬಹುದು.

ಹೀಗೆ ಬೀದಿ ಬೀದಿ ತಿರುಗಿ ಕಷ್ಟಪಟ್ಟು ರೊಕ್ಕ ಎತ್ತುವ ಬದಲು ಮೈ ಬಗ್ಗಿಸಿ ದುಡಿಯಬಹುದಲ್ಲವೇ?

 

 

ಇಲ್ಲ…! ಇದೇ ನಮ್ಮ ವೃತ್ತಿ ಎನ್ನುತ್ತಾರೆ ಈ ಏಕ್ರಾಧಿಪತಿಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top