ಉಪಯುಕ್ತ ಮಾಹಿತಿ

ಇಸ್ಪೀಟ್ ಎಲೆಗಳಲ್ಲಿ ಒಬ್ಬ ರಾಜನಿಗೆ ಮೀಸೆ ಇರೋದಿಲ್ಲ: ಯಾಕೆ ಗೊತ್ತಾ?

ಇಸ್ಪೀಟ್ ಎಲೆಗಳಲ್ಲಿ ಒಬ್ಬ ರಾಜನಿಗೆ ಮೀಸೆ ಇರೋದಿಲ್ಲ: ಯಾಕೆ ಗೊತ್ತಾ?

 

 

ಇಸ್ವಿಟ್ ಎಲೆಗಳಲ್ಲಿ ಒಬ್ಬ ರಾಜನಿಗೆ ಮೀಸೆ ಇರುವುದಿಲ್ಲ, ಮತ್ತೊಬ್ಬ ರಾಜನಿಗೆ ಒಂದು ಕಣ್ಣುಮಾತ್ರ ಇರುತ್ತದೆ.ಇದನ್ನು ನೀವು ಯಾವತ್ತಾದರೂ ಗಮನಿಸಿದ್ದೀರಾ? ಇಸ್ಪೀಟ್ ಕಾರ್ಡ್ ಗಳ ಬಗ್ಗೆ ತಿಳಿಯದವರು ಯಾರು ಇರುವುದಿಲ್ಲ ಬಿಡಿ.ಎಷ್ಟೋ ವಿಧದ ಆಟಗಳನ್ನು ಕಾರ್ಡ್ಸ್ ನಲ್ಲಿ ಆಡುತ್ತಾರೆ.ಮೂರು ಎಲೆ ಆಟ, ರಮ್ಮಿ ಹೀಗೆ ಹೇಳುತ್ತಾ ಹೋದರೆ ಇಸ್ವಿಟ್ ನಿಂದ ಆಡುವ ತುಂಬಾ ಆಟಗಳ ಪಟ್ಟಿಯೇ ಸಿದ್ದವಾಗುತ್ತದೆ.ತುಂಬಾ ಜನ ಕಾರ್ಡ್ಸ್ ಆಡುತ್ತಾರೆ.ಯಾವ ಆಟ ಆಡಿದರೂ ಅದರಲ್ಲಿ ರಾಜ ಅಥವಾ ಕಿಂಗ್ ಕಾರ್ಡ್ ಅನ್ನು ಮುಖ್ಯ ಕಾರ್ಡ್ ಆಗಿ ಪರಿಗಣಿಸುತ್ತಾರೆ.ಆದರೆ ನಿಮಗೆ ಗೊತ್ತಾ? ಕೆಲವು ದೇಶಗಳಲ್ಲಿ ರಾಣಿಯನ್ನು ಮುಖ್ಯ ಕಾರ್ಡ್ ಆಗಿ ಪರಿಗಣಿಸಿದರೆ, ಇನ್ನು ಕೆಲವು ದೇಶಗಳಲ್ಲಿ ಹತ್ತನೇ ಸಂಖ್ಯೆಯನ್ನು ದಾಟಿದ ಕಾರ್ಡಗಳನ್ನೆಲ್ಲವನ್ನು ದೊಡ್ಡ ಕಾರ್ಡ್ ಆಗಿ ಭಾವಿಸುತ್ತಾರೆ.ಆದರೆ ಎಲ್ಲ ಕಾರ್ಡ್ ಗಳಲ್ಲಿ ರಾಜ ಅಥವಾ ಕಿಂಗ್ ಕಾರ್ಡ್ ಗೆ ಪವರ್ ಇರುತ್ತದೆ.ಈ ಕಾರ್ಡ್ ಗೆ ಕೆಲವು ವಿಶೇಷತೆಗಳು ಸಹ ಇರುತ್ತವೆ.ಅದರ ಬಗ್ಗೆ ಹೇಳ್ತಿವೆ ತಿಳ್ಕೊಳ್ಳಿ.ಇಸ್ವಿಟ್ ಕಾರ್ಡ್ ನಲ್ಲಿ ಕ್ಲಬ್,ಸ್ಪೇಡ್ಸ್, ಹಾರ್ಟ್, ಡೈಮಂಡ್ ಎಂದು ನಾಲ್ಕು ವಿಧಗಳು ಇರುತ್ತವೆ.ಹಾಗೆಯೆ ಆ ನಾಲ್ಕು ವಿಧಗಳಲ್ಲಿ ಇರುವ ರಾಜನಿಗೆ ಸಂಬಂದಿಸಿದ ಕೆಲವು ವಿಷಯಗಳು ಕೂಡ ಇವೆ.

 

 

ಕಿಂಗ್ ಅಪ್ ಕ್ಲಬ್ಸ್:ಇಸ್ವಿಟ್ ಕಾರ್ಡ್ಗಳಲ್ಲಿ ಇರುವ ರಾಜನದು ತುಂಬಾ ಒಳ್ಳೆಯ ಕ್ಯಾರೆಕ್ಟರ್ ಆಟ.ಈತ ತುಂಬಾ ನಂಬಿಕಸ್ತ. ಒಳ್ಳೆಯದು ಯಾವುದು? ಯಾವುದು ಕೆಟ್ಟದು ಎಂದು ಆತನಿಗೆ ತಿಳಿಯುತ್ತದಂತೆ.ಇಸ್ವಿಟ್ ಎಲೆಗಳಲ್ಲಿ ಇದು ತುಂಬಾ ಪವರ್ ಫುಲ್ ಕಾರ್ಡ್ ಅಂತೆ. ಪ್ರೆಂಚ್ ನವರು ತಮ್ಮ ಇಸ್ವಿಟ್ ಕಾರ್ಡ್ ಗಳಲ್ಲಿ ರಾಜ ಅಲೆಕ್ಸಾಂಡರ್ ಅನ್ನು ಕಿಂಗ್ ಆಫ್ ಕ್ಲಬ್ಸ್ ಎಂದು ಭಾವಿಸುತ್ತಾರೆ.

 

 

ಕಿಂಗ್ ಆಫ್ ಸ್ಪೇಡ್ಸ್: ಖಡ್ಗವನ್ನು ಹಿಡಿದಿರುವ ರಾಜ ತೀರ್ಪುಗಳನ್ನು ನೀಡುವುದರಲ್ಲಿ ತುಂಬಾ ಪವರ್ ಫುಲ್ ಆಟ. ಅದಕ್ಕೆ ಯಾರಿಗೂ ತಲೆಬಾಗುವುದಿಲ್ಲವಂತೆ. ಈತನ ಮೇಲೆ ಯಾರು ಅಧಿಕಾರ ಚಲಾಯಿಸಲಾರರು.ಫ್ರೆಂಚ್ ನವರು ತಮ್ಮ ಕಾರ್ಡ್ಗಳಲ್ಲಿ ಈ ರಾಜನನ್ನು ಕಿಂಗ್ ಆಫ್ ಡೇವಿಡ್ ಎಂದು ಭಾವಿಸುತ್ತಾರೆ.

 

 

ಕಿಂಗ್ ಆಫ್ ಹಾರ್ಟ್: ಪ್ರೆಂಚ್ ನವರು ಈ ರಾಜನನ್ನು ಚಾಯ್ಸ್ ರಾಜನನ್ನಾಗಿ ಭಾವಿಸುತ್ತಾರೆ.ಈತನನ್ನು ಸೂಸೈಡ್ ಕಿಂಗ್ ಅಂತಾನೂ ಕರೆಯುತ್ತಾರೆ.ಕಾರ್ಡ್ಸ್ ನಲ್ಲಿ ಈ ರಾಜನಿಗೆ ಮೀಸೆಗಳು ಇರುವುದಿಲ್ಲ.

 

 

ಕಿಂಗ್ ಆಫ್ ಡೈಮಂಡ್: ಅಂದರೆ ಪ್ರೆಂಚ್ ನವರು ತಮ್ಮ ಇಸ್ವಿಟ್ ಕಾರ್ಡ್ ಗಳಲ್ಲಿ ಈ ರಾಜನನ್ನು ಸೇವರ್ ಆಗಿ ಬಳಸುತ್ತಾರೆ.ಈತ ಉಳಿದ ಮೂರು ರಾಜರಿಗಿಂತ ವಿಭಿನ್ನ.ಈತನಿಗೆ ಒಂದು ಕಣ್ಣು ಮಾತ್ರ ಕಾಣಿಸುತ್ತದೆ.ಈತನ ಎಡಗೈಯಲ್ಲಿ ಕೊಡಲಿಯನ್ನು ಹಿಡಿದು ಬಲಗೈಯನ್ನು ಮೇಲೆ ಎತ್ತಿರುತ್ತಾನೆ.

 

 

ಮೇಲೆ ಹೇಳಿದಂತೆ ವಿವಿಧ ರೀತಿಗಳಲ್ಲಿ ಇರುವ ರಾಜರು ಇರುವ ಕಾರ್ಡ್ಗಳನ್ನು ಪ್ರಪಂಚಾದ್ಯಂತ ತುಂಬಾ ಜನರು ಬಳಸುತ್ತಾರೆ.ಆದರೆ ಇಟಲಿ,ಜೆರ್ಮನಿ,ಸ್ಪೇನ್ ನಲ್ಲಿ ಅಲ್ಲಿನ ರಾಜರಿಗೆ ಅನುಗುಣವಾಗಿ ಇಸ್ವಿಟ್ ಕಾರ್ಡ್ ಗಳು ಇರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top