fbpx
ಹೆಚ್ಚಿನ

ಹೆಲ್ಮೆಟ್ ಧರಸಿ ಬಸ್ ಚಲಾಯಿಸಿದ.. ಕಾರಣ ಗೊತ್ತಾದ ಪ್ರಯಾಣಿಕರು ಧನ್ಯವಾದ ಸಲ್ಲಿಸಿದ್ದಾರೆ.

ಹೆಲ್ಮೆಟ್ ಧರಸಿ ಬಸ್ ಚಲಾಯಿಸಿದ..
ಕಾರಣ ಗೊತ್ತಾದ ಪ್ರಯಾಣಿಕರು ಧನ್ಯವಾದ ಸಲ್ಲಿಸಿದ್ದಾರೆ.

 

ತಮಿಳುನಾಡಿನ TNSRTC ಬಸ್ ಚಾಲಕನೊಬ್ಬ ಹೆಲ್ಮೆಟ್ ಧರಸಿ ಬಸ್ ಚಲಾಯಿಸಿದ ಅಪರೂಪದ ಘಟನೆಯೊಂದು ತಮಿಳುನಾಡಿನ ಕೋಯೀಮುತ್ತೂರ್ ನಲ್ಲಿ ನಡೆದಿದೆ.

 

 

ಬಸ್ ಚಾಲಕನ ಹೆಸರು ಶಿವಕುಮಾರ ಎಂದು ಗುರುತಿಸಲಾಗಿದ್ದು. ತಮಿಳುನಾಡಿನ ಕೋಯೀಮುತ್ತೂರ್ ನಿಂದ ಇರೋಡ್ ಗೆ ಬಸ್ ಚಲಾಯಿಸುತ್ತಿದ್ದ ಎನ್ನಲಾಗಿದೆ.

ನಮ್ಮ ಜನ ಬೈಕ್ ಮೇಲೆ ಹೆಲ್ಮೆಟ್ ಹಾಕೊರಪ್ಪ ಅಂದ್ರೆ ಕೇಳಲ್ಲ ಅಂತಾದ್ರಲ್ಲಿ ಈ ವಯ್ಯಾ ಬಸ್ ನಲ್ಲಿ ಹೆಲ್ಮೆಟ್ ಹಾಕೊಂಡವನೇ.. ಈ ಚಾಲಕ ಹೆಲ್ಮೆಟ್ ಯಾಕೆ ಧರಿಸಿದ್ದು ಎಂದು ಕಾರಣ ಹುಡುಕಿ ಹೊರಟಾಗ ಸಿಕ್ಕಿದು ಒಂದು ಕುತೂಹಲಕರವಾದ ವಿಷಯ.

 

 

ತಮಿಳುನಾಡು ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳು ಬೇಡಿಕೆ ಈಡೇರಿಕೆಗಾಗಿ ಬಂದ್ ಹಮ್ಮಿಕೊಂಡಿದ್ದರು ಇದರಿಂದ ಬಸಗಳು ಇಲ್ಲದೆ ಕೊಯಮತ್ತೂರ ನಲ್ಲಿ ಪ್ರಯಾಣಿಕರು ಪರದಾಡುತ್ತಿದ್ದರು. ಅಂತೂ ಇಂತೂ ಬಹಳ ಸಮಯವಾದ ನಂತರ ಇರೋಡ್ ಬಸ್ ಬಂದಿತು ಪ್ರಯಾಣಿಕರು ನೂಕುನುಗ್ಗಲು ಮಾಡಿ ಬಸ್ ನಲ್ಲಿ ಹತ್ತಿ ಕುಳಿತರು. ಪ್ರಯಾಣಿಕರಿಗೆ ಕಂಡದ್ದು ಒಂದು ವಿಚಿತ್ರ ದೃಶ್ಯ. ಬಸ್ ಚಾಲಕ ಹೆಲ್ಮೆಟ್ ಧರಿಸಿದ್ದರು. ಜನ ಸುಮ್ಮನಿರ್ತಾರಾ!! ಕೇಳಿಯೇ ಬಿಟ್ರು ಯಾಕಪ್ಪ ಹೆಲ್ಮೆಟ್ ಹಾಕಿದ್ದೀಯಾ ಅಂತ. ಆಗ ಉತ್ತರಿಸಿದ ಶಿವೂ ಬಸ್ ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆ ನಡೆಯುತ್ತಿದೆ ನಾನೊಬ್ಬನೇ ಸೇವೆ ಮಾಡಿದ್ರೆ ಅವರ ಕೆಂಗಣ್ಣಿಗೆ ಗುರಿಯಾಗಬೇಗುತ್ತದೆ ಆದ್ದರಿಂದ ನನ್ನ ರಕ್ಷಣೆಗೆ ಈ ಹೆಲ್ಮೆಟ್ ಧರಿಸಿದ್ದೇನೆ. ಚಾಲಕನ ಒಳ್ಳೆಯತನದ ಗುಣಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಧನ್ಯವಾದ ಸಲ್ಲಿಸಿದ್ದಾರೆ.

ನಿಜಕ್ಕೂ ತಮ್ಮ ಸಮಸ್ಯೆ ಲೆಕ್ಕಿಸದೆ ಜನಸೇವೆ ಮಾಡುವ ಶಿವಕುಮಾರ್ ಅಂತಹ ವ್ಯಕ್ತಿಗಳು ಸಮಾಜಕ್ಕೆ ಮಾದರಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top