ವಿಶೇಷ

ಬೆಕ್ಕಿನ ಮಲದಲ್ಲಿ ಮಾಡಿರುವ ಕಾಫಿಯ ಬೆಲೆ ಎಷ್ಟು ಗೊತ್ತಾ? ಕೇಳುದ್ರೆ ಬೆಚ್ಚಿ ಬೀಳ್ತಿರಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಕ್ಕಿನ ಮಲದಲ್ಲಿ ಮಾಡಿರುವ ಕಾಫಿಯ ಬೆಲೆ ಎಷ್ಟು ಗೊತ್ತಾ? ಕೇಳುದ್ರೆ ಬೆಚ್ಚಿ ಬೀಳ್ತಿರಾ?

 

 

 

ಜಾವಾ ಮತ್ತು ಸುಮಾತ್ರಾ ದೇಶಗಳಲ್ಲಿ ಮಾಡಲು ಸುರುವಾದ ಈ ಕಾಫಿ ಯಾವುದರಿಂದ ತಯಾರಿಸುತ್ತಾರೆ ಗೋತ್ತಾ?. ಕಾಫಿ ಬೀಜದಿಂದಲೇ , ಆದರೆ ಈ ಬೀಜಗಳಿರುವ ಹಣ್ಣುನ್ನು ಸಿವೆಟ್ ಎಂಬ ಬೆಕ್ಕು ತಿಂದು ಹೊರತಿರುಳನ್ನು ಜೀರ್ಣಿಸಿ ಒಳಗಿನ ಗಟ್ಟಿ ಬೀಜವನ್ನು ಉಚ್ಛಿಷ್ಟದಲ್ಲಿ ವಿಸರ್ಜಿಸುತ್ತದೆ . ಈ ಬೀಜವನ್ನು ಸ್ವಚ್ಛಗೊಳಿಸಿ ಹುರಿದು ಪುಡಿ ಮಾಡಿದ ಕಾಫಿಯೇ ಸಿವೆಟ್ ಅಥವಾ ಕ್ಯಾಟ್ ಪೂ ಕಾಫಿ.

ಈ ಕಾಫಿಯ ರುಚಿ ನೋಡಬೇಕೆಂದಿದ್ದರೆ ಜಾವಾ ಸುಮಾತ್ರಾ ದೇಶಕ್ಕೆ ಹೋಗಬೇಕಾಗಿಲ್ಲ ,.ಈಗ ಭಾರತದಲ್ಲಿಯೂ ಈ ಕಾಫಿ ಸಿಗುತ್ತದೆ . ಅದೂ ನಮ್ಮ ಕರ್ನಾಟಕದಲ್ಲಿಯೇ . ಕಿತ್ತಳೆಯ ಜಿಲ್ಲೆ ಕೊಡಗಿನ (ಕಾಫಿಯ ಜಿಲ್ಲೆ ಎಂದು ಹೆಸರಾಗಿರುವ ಚಿಕ್ಕಮಂಗಳೂರು )
ಜಾವಾ ಸಮಾತ್ರಾದಲ್ಲಿ (೧೮೩೦-೭೦)ರಲ್ಲಿ ಕಾಫಿಯನ್ನು ಡಚ್ಚರು ಕುಡಿಯುತ್ತಿದ್ದರು . ಆದರೆ ಈ ಕಾಫಿಗೆ ವಾಣಿಜ್ಯ ರೂಪದ ಬಲ್ಕೆ ಬಂದಿದ್ದು ಮಾತ್ರ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಈ ಕಾಫಿಯ ಜನಪ್ರಿಯತೆ ಹೆಚ್ಚುತ್ತಿದಂತೆಯೇ ಕಾಫಿಯ ಬೆಲೆಯೂ ಹೆಚ್ಚಾಗಿದೆ . ಇದು ವಿಶ್ವದ ಹಲವಡೆ ಸಿವೆಟ್ ಕಾಫಿ ಎಂದು ಜನಪ್ರಿಯವಾಗಿದ್ದು ಈಗ ಕರ್ನಾಟಕಕ್ಕೂ ಬಂದಿದೆ .

 

 

ಕಾಫಿಹಣ್ಣುಗಳು ಚನ್ನಾಗಿ ಹಣ್ಣಾದ ಮೇಲೆ ಸಿವೆಟ್ ಎಂಬ ಬೆಕ್ಕು (asian palm civet (paradoxurus hermaphroditus ) ಇದನ್ನು ತಿನ್ನುತ್ತದೆ . ಈ ಬೆಕ್ಕಿನ ಕರುಳುಗಳಲ್ಲಿ ಈ ಹಣ್ಣುಗಳು ಜೀರ್ಣಗೊಂಡು ಒಳಗಿನ ಗಟ್ಟಿ ಬೀಜಗಳನ್ನು ಮಾತ್ರ ಜೀರ್ಣಗೊಳ್ಳದೆ ಮಲದಲ್ಲಿ ಹೊರಬರುತ್ತದೆ ಈ ಮಲವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿ ಬೀಜವನ್ನು ಬೇರ್ಪಡಿಸಿ ಅಂದರೆ ಈ ಪ್ರಮಾಣದ ಒಂದು ಬೆಕ್ಕು ಪ್ರತಿದಿನ ವಿಸರ್ಜಿಸುವ ಮಲದ ಪ್ರಮಾಣದ ಹಾಗು ಬೆಕ್ಕುಗಳ ಸಂಖ್ಯೆಗಳ ಅವಲಂಬಿತವಾಗಿರುತ್ತದೆ ,ಈ ಬೀಜಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ .

ಈ ಕಾಫಿ ಬೀಜ ತುಂಬಾ ದುಂಬಾರಿಯಾಗಲು ಇದೊಂದೇ ಕಾರಣವಲ್ಲ .ಬದಲಿಗೆ ಈ ಕಾಫಿಯಲ್ಲಿ ಬೇರೆ ಕಾಫಿಯಲ್ಲಿ ಇರದ ಇತರೆ ಪೋಷಕಾಂಶಗಳಿವೆ ಎಂದು ಸಂಶೋಧಕರು ಹೇಳಿರುವುದೇ ಇದಕ್ಕೆ ಕಾರಣ. ಅಲ್ಲದೆ ಈ ಬೆಕ್ಕುಗಳು ವಿಸರ್ಜಿಸಿದ ಮಲದಿಂದ ಸಂಗ್ರಹಿಸಿದ ಎಲ್ಲಾ ಬೀಜ ಉತ್ತಮ ಗುಣಮಟ್ಟ ಹೊಂದಿರುವುದಿಲ್ಲ , ಆದ್ದರಿಂದ ಉತ್ತಮ ಗುಣಮಟ್ಟ ಹೊಂದಿರುವ ಬೀಜವನ್ನು ಬೇರ್ಪಡಿಸಿ ಕಷ್ಟದ ಕೆಲಸವಾಗಿದ್ದು ಪರಿಣಾಮವಾಗಿ ಈ ಬೀಜಗಳು ಗಗನಕ್ಕೆ ಏರಿದೆ .

 

 

ಈ ಬಗ್ಗೆ ನೆಡೆಸಿದ ಸಂಶೋಧನೆಗಳಲ್ಲಿ ಬೆಕ್ಕಿನ ಕರುಳಿನಲ್ಲಿರುವ ಆಮ್ಲಿಯತೆ ಹೊರಗಿನ ತಿರುಳನ್ನು ಕರಗಿಸುತ್ತದೆ ಆದರೆ ಒಳಗಿನ ಗಟ್ಟಿ ಬೀಜವನ್ನು ಜೀರ್ಣಿಸಿಕೊಳ್ಳಲಾರವು . ಬದಲಿಗೆ ಈ ಆಮ್ಲಿಯತೆ ಪರಿಸರದಲ್ಲಿ ಕಾಫಿ ಬೀಜ ಸೂಕ್ತ ಪ್ರಮಾಣದಲ್ಲಿ ಹುರಿದಂತಹ ಪ್ರಭಾವಕ್ಕೆ ಈ ಕಾಫಿ ವಿಶೇಷವಾಗಿದೆ .

ಸಾಮಾನ್ಯ ಜನರ ಹೆಸರು
ಕೇಳಿಯೇ ಕುಡಿಯಲಿಕೆ ಇಷ್ಟ ಪಡುವುದಿಲ್ಲ ಇನ್ನು ಬೆಲೆ ಕೇಳಿಯಂತೂ ಈ ಕಾಫಿಯ ಸಹವಾಸವೇ ಬೇಡ ಎಂದು ದೂರ ಹೋಗುವುದು ಅಂತೂ ಖಂಡಿತ . ಏಕೆಂದರೆ ವಿದೇಶದಲ್ಲಿ ಈ ಕಾಫಿ ಪುಡಿ kg ಒಂದಕ್ಕೆ ಸುಮಾರು 20 ರಿಂದ 25 ಸಾವಿರ ರೂ ಬೆಲೆ ಬಾಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top