fbpx
ಹೆಚ್ಚಿನ

ಅತ್ತರೆ ಕೋಣೆಯೊಂದು ತೆರೆದಂತೆ! ‘ರೋಧನಾ ರೂಂ’ ಒಂದ್ಸರಿ ಹಂಗೆ ಅತ್ತು ಬಿಡಿ ..

ಅತ್ತರೆ ಕೋಣೆಯೊಂದು ತೆರೆದಂತೆ! ‘ರೋಧನಾ ರೂಂ’ ಒಂದ್ಸರಿ ಹಂಗೆ ಅತ್ತು ಬಿಡಿ ..

 

ತೂಕಡಿಸೋರಿಗೆ ಹಾಸಿಗೆ ಹಾಸಿಕೊಟ್ಟರು ಎಂಬ ಗಾದೆಯನ್ನು ‘ರೋಧಿಸೋರಿಗೆ ರೂಂ ಮಾಡಿಕೊಟ್ರು’ ಎಂದು ಬದಲಿಸಬೇಕಾಗಿದೆ.

 

 

ಏನಾಯಿತು ಈಗ?

ಜಪಾನ್‍ನ ಶಿಂಜ್ಸುಕು ಸಮೀಪದಲ್ಲಿ ಹೋಟೆಲ್ ಒಂದಿದೆ. ಅಲ್ಲಿ ಅಳುವ ಮಹಿಳೆಯರಿಗಾಗಿ ‘ರೋಧನಾ ರೂಂ’ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಕೆಲಸದ ಒತ್ತಡಕ್ಕೆ ಸಿಲುಕಿದ ಮಾನಿನಿಯರು ಕಣ್ಣೀರು ಸುರಿಸಿ ಒತ್ತಡ ನೀಗಿಸಿಕೊಳ್ಳಬಹುದು. ಕಣ್ಣೀರು ಒರೆಸಿಕೊಳ್ಳಲು ಟಿಶ್ಶೂ ಕಾಗದ ಕೂಡ ಕೊಡುತ್ತಾರೆ. ಹಾಸಿಗೆ ಕೊಟ್ಟು ಅಳು ಎನ್ನುತ್ತಾರೆ!. ಮಲಗಿ, ಕೂತು, ನಿಂತು ಹೀಗೆ ಮನ ಬಂದಂತೆ ಇಲ್ಲಿ ಅಳಬಹುದು! ಕಣ್ಣು ತುಂಬ ಅಳೋದಿಕ್ಕೂ ಜಾಗವಿಲ್ಲ ಎನ್ನುವವರ ಕೊರತೆಯನ್ನು ಈ ಹೋಟೆಲ್ ನೀಗಿಸಿದೆ.

 

 

ಒತ್ತಡ ಗೆಲ್ಲಬೇಕೇ ಹೊರತು-ಒತ್ತರಿಸಿ ಅಳಬಾರದು ಎಂಬ ನೀತಿ ಪಾಠ ಹೇಳಬೇಕು-ರೂಂ ಕೊಟ್ಟು ಅಳ್‍ಬುರುಕಿಯರನ್ನಾಗಿ ಮಾಡಬಾರದಲ್ವಾ?

ಹೌದು. ಮಹಿಳೆಯರು ಅತ್ತರಷ್ಟೇ ಹೋಟೆಲ್ ಓನರ್ ಬಾಯಿ ಸಕ್ಕರೆ. ಇಲ್ಲದಿದ್ದಲ್ಲಿ ಅಳುವ ಸರದಿ ಮಾಲೀಕನದ್ದಾಗಬಹುದು.

ಜಪಾನ್‍ನ ಟೋಕಿಯೊದಲ್ಲಿ ಹಲವು ಬಗೆಯ ಹೋಟೆಲ್‍ಗಳಿವೆ. ಪೈಪೋಟಿ ಸಹಜವಾಗಿಯೇ ಇದೆ. ಮಾಲೀಕರು ಸ್ಪರ್ಧೆ ಎದುರಿಸಲು ನಾನಾ ರೀತಿಯ ಸರ್ಕಸ್ ಮಾಡುತ್ತಾರೆ. ಗೆದ್ದವರು ಬೀಗಿದರೆ ಸೋತವರು ಸತ್ತಂತೆ ಅಳಬೇಕಿದೆ.

ರೂಂ ಪಡೆದ ಮಹಿಳೆ ಅಳಲಿಲ್ಲ ಅಂದರೇ?

ದುಭಾರಿ ಬಿಲ್ ಕೈಗಿಟ್ಟಲ್ಲಿ -ಕಣ್ತುಂಬಾ ಅಳಿಸಬಹುದು.!

ನಮ್ಮಲ್ಲೂ ಇಂತಹ ರೂಂಗಳು ಬಂದರೆ ಹೇಗೆ? ಬರಲಿ ತೊಂದರೆ ಇಲ್ಲ… ಆದರೆ ಮಿಟುಕಲಾಡಿಯರು ಅಳುತ್ತಿದ್ದಾಗ ಮಾಲಿಕ ಮಾತ್ರ ಕೋಣೆಗೆ ತೆರಳಬಾರದು.

ಹೋದರೆ?

ಮಾಲೀಕ ರೇಪ್ ಮಾಡಲು ಬಂದ… ಎಂದು ಸುಳ್ಳುಪೊಳ್ಳು ಹೇಳಿ ಬ್ಲಾಕ್ ಮೇಲ್‍ಗೆ ಇಳಿದು ಬಿಡುವ ಅಪಾಯಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top