fbpx
ಹೆಚ್ಚಿನ

ಸಾಯೋದೇ ಇವನ ಬ್ಯುಸಿನೆಸ್!

ಸಾಯೋದೇ ಇವನ ಬ್ಯುಸಿನೆಸ್!

 

ಅರಳುವ ಪ್ರತಿಭೆ, ಕೆರಳುವ ಪ್ರತಿಭೆಗಳು ನಮಗೆ ಗೊತ್ತು. ಆದರೆ ಇಲ್ಲೊಬ್ಬ ಸಾಯುವ ಪ್ರತಿಭಾವನಂತನಿದ್ದಾನೆ. ಈತ ಸಾಯದ ರೀತಿಗಳೇ ಇಲ್ಲ…ಕ್ರಿಸ್ಮಸ್ ಮರ ಮಗಚಿ ಬಿದ್ದು ಸತ್ತಿದ್ದಾನೆ. ಕಿಟಕಿ ಬಾಗಿಲು ಬಿದ್ದು ಮರಣಗೊಂಡಿದ್ದಾನೆ.. ಕಾಡ್ರ್ಸ ಆಡ್ತಾ , ತಲೆಗೆ ಗುಂಡು ಹೊಡೆದುಕೊಂಡು ‘ಗೊಟಕ್ ಎಂದಿದ್ದಾನೆ. ಕಾರು ರಿಪೇರಿ ಮಾಡುತ್ತಾ ಸತ್ತಿದ್ದಾನೆ. ನೇಣಿಗೆ ತಲೆಕೊಟ್ಟಿದ್ದಾನೆ…ಒಟ್ಟಿನಲ್ಲಿ ಸಾವಿನ ಎಲ್ಲ ಮಜಲುಗಳನ್ನು ಅನುಭವಿಸಿ ಆನಂದವಾಗಿದ್ದಾನೆ.

 

 

 

ನಿಜನಾ?

ನಿಜವಾಗಿಯೂ ಸತ್ತವರಂತೆ ನಟಿಸಿದ್ದಾನೆ!

‘ಡೆಡ್ ಬಾಡಿ ಗೈ ಡಾಟ್ ಕಾಂ’ನಲ್ಲಿ ತನ್ನ ಸಾವಿನ ವಿವಿಧ ಚಿತ್ರಗಳನ್ನು ಛಾಪಿಸಿ, ಪ್ರಸಿದ್ಧನಾದ. ಸಾಯೋದೇ ಇವನ ಬ್ಯುಸಿನೆಸ್! ಕೇಳಿದ ಜಾಗಕ್ಕೆ ತೆರಳಿ ಸತ್ತಂತೆ ಬಿದ್ದು ಬರ್ತಾನೆ. ದಿನಕ್ಕೆ $ 1,500ವರೆಗೂ ಆದಾಯವಿದೆ. ‘ಸಾಯ್ತಾ ಬಿದ್ದಿದೀನಿ’ ಅಂತಾರಲ್ಲಾ ರೀ… ಥೇಟ್ ಅದೇ ಇವನ ವೃತ್ತಿ-ಪ್ರವೃತ್ತಿಯಾಗಿದೆ!

 

 

ಒಂದು ಕಾಲಕ್ಕೆ ಐ.ಟಿ. ಎಂಜಿನಿಯರ್ ಆಗಿದ್ದ. ಅಲ್ಲಿ ದುಡಿದು ಸಾಯೋದಿಕ್ಕಿಂತಲೂ ಹೀಗೆ ಸತ್ತು ಸಾವಿನ ಸಾರ್ವಭೌಮನಾಗಿದ್ದಾನೆ. ಹಲವು ಚಿತ್ರ, ಸೀರಿಯಲ್‍ಗಳಲ್ಲಿ ಸತ್ತ ಹೆಣವಾಗಿ ನಟಿಸಿ ‘ಸತ್ತು ಬದುಕುತ್ತಿದ್ದಾನೆ! ಹೆಸರು ಚುಕ್ಲಾಂ-ಅಮೆರಿಕದ ಓಹಿಯದಲ್ಲಿ ಇವನ ವಾಸ.

 

 

ಇವನು ನಮ್ಮ ಮಂಗಳೂರಿಗೆ ಬಂದರೆ ಹೇಗೆ?

ಕಮಲಪಕ್ಷಿಗಳಿಗೆ ಬೇಜಾನ್ ಖುಷಿಯಾಗುತ್ತದೆ… ಇವನ ಹೆಣ ಹಿಡಿದು… ಕ್ರಿಶ್ಚಯನ್ನರಿಗೂ ಈ ರಾಜ್ಯದಲ್ಲಿ ನೆಲೆಯಿಲ್ಲ. ಕ್ರಿಶ್ಚಿಯನ್ನರನ್ನು ಸಿದ್ದು ಸರ್ಕಾರ ಕೊಲ್ಲುತ್ತಿದೆ ಎಂದು ಬೊಬ್ಬೆ ಹೊಡೆಯಲಿದ್ದಾರೆ. ಬಿಜೆಪಿಗರ ಓಟ್ ಪಾಲಿಟಿಕ್ಸ್ – ನೋಟ್ ಪಾಲಿಟಿಕ್ಸ್ ಮಾಡಲು ಚುಕ್ಲಾಂ ಸಹಕಾರಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top