ತಿಂಡಿ ತೀರ್ಥ

ಚಪಾತಿ ಹಾಗೂ ದೋಸೆಯೊಂದಿಗೆ ಬೆಸ್ಟ್ ಕಾಂಬಿನೇಶನ್‌ ಗಸೆಗಸೆ ಆಲೂಗೆಡ್ಡೆ ಪಲ್ಯಮಾಡುವ ವಿಧಾನ

ಚಪಾತಿ ಹಾಗೂ ದೋಸೆಯೊಂದಿಗೆ ಬೆಸ್ಟ್ ಕಾಂಬಿನೇಶನ್‌ ಗಸೆಗಸೆ ಆಲೂಗೆಡ್ಡೆ ಪಲ್ಯಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:

* ಚಿಕ್ಕದಾಗಿ ಕತ್ತರಿಸಿದ ಆಲೂಗೆಡ್ಡೆ 2-6

* ಕತ್ತರಿಸಿದ ಈರುಳ್ಳಿ 2

* ಹಸಿಮೆಣಸು 4 ಹಾಕಿ ಪೇಸ್ಟ್ ಮಾಡಬೇಕು

* ಗಸೆಗಸೆ 2 ಚಮಚ

* ಅರಿಶಿಣ ಒಂದು ಚಿಟುಕು

* ಸಾಸಿವೆ ಎಣ್ಣೆ 1 ಚಮಚ

* ಪಲಾವ್ ಎಲೆ 2

* ಉಪ್ಪು ರುಚಿಗೆ ತಕ್ಕಷ್ಟು

* ಕರಿ ಜೀರಿಗೆ 1 ಚಮಚ

 Related image

 

ಗಸೆಗಸೆ ಆಲೂಗೆಡ್ಡೆ ಪಲ್ಯಮಾಡುವ ವಿಧಾನ:

* ಗಸೆಗಸೆಯನ್ನು 2 ಗಂಟೆಗಳ ನೀರಿನಲ್ಲಿ ನೆನೆ ಹಾಕಿರಬೇಕು.

* ಆಲೂಗೆಡ್ಡೆಯನ್ನು ಸ್ವಲ್ಪ ನೀರಿನಲ್ಲಿ ಬೇಯುವಂತೆ ಚಿಕ್ಕದಾಗಿ ಕತ್ತರಿಸಬೇಕು.

* ಗಸೆಗಸೆಯನ್ನು ಸ್ವಲ್ಪ ಹುರಿದು ಅದನ್ನು ಮತ್ತು ಮೆಣಸನ್ನು ಸೇರಿಸಿ ಅರಿಯಬೇಕು.

* ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಅದು ಕುದಿ ಬಂದ ನಂತರ ಅದಕ್ಕೆ ಪಲಾವ್ ಎಲೆ ಮತ್ತು ಕರಿ ಜೀರಿಗೆಯನ್ನು ಹಾಕಬೇಕು.

* ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವವರೆಗೆ ಹುರಿಯಬೇಕು.

* ಈಗ ಆಲೂಗೆಡ್ಡೆ ಹಾಕಿ ಹುರಿಯಬೇಕು, ಆಲೂಗೆಡ್ಡೆ ವಾಸನೆ ಬರಲು ಪ್ರಾರಂಭಿಸಿದಾಗ ಅದಕ್ಕೆ ಗಸೆಗಸೆ ಮತ್ತು ಮೆಣಸಿನ ಪೇಸ್ಟ್ ಹಾಕಬೇಕು.

* ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಅರಿಶಿಣ ಹಾಕಿ 2-3 ನಿಮಿಷ ಹುರಿದು ನಂತರ 1/2 ಕಪ್ ನೀರು ಹಾಕಿ ತಪ್ಪಲಿಯನ್ನು ಮುಚ್ಚಿ ಬೇಯಲು ಬಿಡಬೇಕು.

* ಸ್ವಲ್ಪ ಹೊತ್ತು ಬಿಟ್ಟು ಅದನ್ನು ಒಮ್ಮೆ ಸೌಟಿನಿಂದ ತಿರುಗಿಸಿ ಸಣ್ಣ ಉರಿಯಲ್ಲಿ 3-4 ನಿಮಿಷ ಬೇಯಿಸಿದರೆ ಗಸೆಗಸೆ ಬೆಂಗಾಲಿ ಆಲೂ ಪಲ್ಯ ರೆಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top