ಆರೋಗ್ಯ

ಕಡಿಮೆ ನಿದ್ರೆ ಮಾಡೋರೇ! ಒಮ್ಮೆ ಇದನ್ನ ಓದಿ.

ಕಡಿಮೆ ನಿದ್ರೆ ಮಾಡೋರೇ! ಒಮ್ಮೆ ಇದನ್ನ ಓದಿ.

 

ಮನುಷ್ಯರಿಗೆ ದಿನಕ್ಕೆ ಕನಿಷ್ಠ 7 ಗಂಟೆಗಳ ನಿದ್ರೆ ಅಗತ್ಯ.ಇದಕ್ಕಿಂತ ಕಡಿಮೆ ನಿದ್ದೆ ಮಾಡುವ ಅಥವಾ ಇಷ್ಟು ಅವಧಿಯಲ್ಲಿ ಸಮರ್ಪಕ ನಿದ್ದೆ ಬಾರದವರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.ವಾಷಿಂಗ್ ಟನ್ ವಿವಿಯ ಸಂಶೋಧಕರು 11 ಅವಳಿ ಜವಳಿ ಯುವಕರ ರಕ್ತದ ಮಾದರಿ ನಡೆಸಿ ಈ ಅಂಶವನ್ನು ಪತ್ತೆ ಮಾಡಿದ್ದಾರೆ.ಏಳು ಗಂಟೆ ಅಥವಾ ಹೆಚ್ಚು ಸಮಯ ನಿದ್ರಿಸುವವರ ರೋಗ ನಿರೋಧಕ ವ್ಯವಸ್ಥೆ ಕಡಿಮೆ ನಿದ್ದೆ ಮಾಡುವವರಿಗೆ ಹೋಲಿಸಿದರೆ ಬಲಿಷ್ಠವಾಗಿರುತ್ತದೆ.ಹಾಗಾಗಿ ದಿನಕ್ಕೆ ಏಳು ಗಂಟೆ ನಿದ್ರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೆಂದು ಸಂಶೋಧಕ ನಾಥನೀಲ್ ವಾಟ್ಸನ್ ಅವರು ಹೇಳಿದ್ದಾರೆ.

 

 

ಕಾಯಿಲೆ ಬಂಡ ಸಂದರ್ಭ ಕಡಿಮೆ ನಿದ್ದೆ ಮಾಡುವವರಿಗೆ ಕೊಡುವ ಚುಚ್ಚುಮದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ.ಯಾಕಂದರೆ ದೇಹದಲ್ಲಿರುವ ರೋಗನಿರೋಧಕ ಕಣಗಳು ಇದಕ್ಕೆ ಸಮರ್ಪಕವಾಗಿ ಸ್ಪಂದಿಸುವುದಿಲ್ಲ.
ಕಡಿಮೆ ನಿದ್ದೆ ಮಾಡುವವರಿಗೆ ರೋಗ ಬರುವ ಸಾಧ್ಯತೆ ಕೂಡ ಹೆಚ್ಚಿರುತ್ತದೆಂದು ವಾಟ್ಸನ್ ಅಭಿಪ್ರಾಯ ಪಟ್ಟಿದ್ದಾರೆ.ನಗರ ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ಐಟಿ ಮತ್ತಿತರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ದೆ ಮಾಡುತ್ತಾರೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top