ಭವಿಷ್ಯ

ಜನವರಿ  09 : ನಿತ್ಯಭವಿಷ್ಯ ಮತ್ತೆ ಪಂಚಾಂಗ.

ಮಂಗಳವಾರ, ೦೯ ಜನವರಿ ೨೦೧೮

ಸೂರ್ಯೋದಯ : ೦೬:೪೮
ಸೂರ್ಯಾಸ್ತ : ೧೮:೦೫
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಕೃಷ್ಣ ಪಕ್ಷ
ತಿಥಿ : ಅಷ್ಟಮೀ
ನಕ್ಷತ್ರ : ಚೈತ್ರ
ಯೋಗ : ಸುಕರ್ಮ
ಪ್ರಥಮ ಕರಣ : ಕೌಲವ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೨:೦೪ – ೧೨:೪೯
ಅಮೃತಕಾಲ : ೨೦:೨೦ – ೨೨:೦೧

ರಾಹು ಕಾಲ: ೧೫:೧೬ – ೧೬:೪೦
ಗುಳಿಕ ಕಾಲ: ೧೨:೨೬ – ೧೩:೫೧
ಯಮಗಂಡ: ೦೯:೩೭ – ೧೧:೦೨

 

ಮೇಷ (Mesha)

ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಹೆಸರು ಪಡೆಯುವಿರಿ. ಸ್ವಜನ ಪ್ರೇಮ, ಅನೇಕ ಬೆಲೆಯುಳ್ಳ ವಸ್ತು, ಒಡವೆಗಳ ಪ್ರಾಪ್ತಿಯಾಗುವುದು. ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ತೋರಿ ಬರುವುದು. ಆರೋಗ್ಯದಲ್ಲಿ ಪ್ರಗತಿಯಿದೆ.

 

ವೃಷಭ (Vrushabha)

ಉದ್ಯೋಗ ವ್ಯವಹಾರದಲ್ಲಿ ಪ್ರಗತಿಯಿದೆ. ಬುದ್ಧಿಚಾತುರ‍್ಯದಿಂದ ನಡೆಸಿದ ಕಾರ್ಯಗಳು ಫಲಪ್ರದವಾಗುವುದು. ನಿಮ್ಮ ಶತ್ರುಗಳು ಹಿಂದೆ ಸರಿಯುವರು. ಬೆಲೆ ಬಾಳುವ ವಸ್ತುಗಳ ಖರೀದಿಯಾಗುವುದು. ಕೌಟುಂಬಿಕವಾಗಿ ಸಂತಸದ ಕ್ಷ ಣ ಅನುಭವಿಸುವಿರಿ.

 

ಮಿಥುನ (Mithuna)

ದೂರಾಲೋಚನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಅಂತೆಯೇ ನಿಮ್ಮ ಕೆಲಸಗಳಿಗೆ ಅಡಚಣೆಯಾಗದಂತೆ ಹಣಕಾಸು ಕೂಡಾ ಒದಗಿ ಬರುವುದು. ಈಗಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಿರಿ.

 

ಕರ್ಕ (Karka)

ನಿಮ್ಮ ಮೇಲೇ ಟೀಕಾಕಾರರು ಅನಗತ್ಯ ಅಪವಾದಗಳನ್ನು ಹೊರಿಸುವ ಸಾಧ್ಯತೆಯಿದೆ. ನೀವು ಭಗವಂತನ ಸ್ತೋತ್ರದಿಂದ ಪಾರಾಗುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ. ದೀನದಲಿತರಿಗೆ ಆಹಾರವನ್ನು ನೀಡಿರಿ.

 

ಸಿಂಹ (Simha)

ಕಲಾಕೌಶಲ್ಯದಲ್ಲಿ ಪ್ರಗತಿ, ನೂತನ ವಸ್ತುಗಳ ಖರೀದಿಯಾಗುವುದು. ಪುತ್ರನಿಂದ ಸಂತಸದ ಸುದ್ದಿ ಕೇಳುವಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ದ್ರವ್ಯ ಸಂಚಯ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುವುದು.

 

ಕನ್ಯಾರಾಶಿ (Kanya)

ಕೆಲಸಗಳ ಒತ್ತಡಗಳ ನಡುವೆ ಕೆಲವು ಕಾಲ ವಿಶ್ರಾಂತಿಯ ಅಗತ್ಯವಿದೆ. ಆ ವಿಶ್ರಾಂತಿಯನ್ನು ಈ ದಿನವೇ ಪಡೆದಲ್ಲಿ ಒಳಿತಾಗುವುದು. ಸಂಜೆಯ ನಂತರ ನಿಮ್ಮಲ್ಲಿ ಹೊಸ ಚೈತನ್ಯ ಹರಿದು ಬರಲಿದೆ.

 

ತುಲಾ (Tula)

ಹಿರಿಯರ ಸಕಾಲಿಕ ಎಚ್ಚರಿಕೆಯ ಮಾತನ್ನು ಗ್ರಹಿಸಿದಲ್ಲಿ ಮುಂದೆ ಒದಗಬಹುದಾದ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹೆಚ್ಚಿನ ಪ್ರಗತಿ ತೋರುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ವೃಶ್ಚಿಕ (Vrushchika)

ಜಗತ್ತಿನ ಎಲ್ಲಾ ಕಷ್ಟಗಳು ನನಗೆ ಬಂದಿವೆ, ನನ್ನಷ್ಟು ಕಷ್ಟ ಬೇರೆ ಯಾರು ಅನುಭವಿಸಿಲ್ಲ ಎನ್ನುವುದು ನಿಮ್ಮ ಕೊರಗು. ಆದರೆ ವಸ್ತುಸ್ಥಿತಿ ಹಾಗಿಲ್ಲ. ಭಗವಂತನ ಪ್ರೀತಿಗೆ ಪಾತ್ರರಾದವರಿಗೆ ಹೆಚ್ಚು ಕಷ್ಟಗಳು ಇರುತ್ತದೆ. ಈ ಬಗ್ಗೆ ಹೆಮ್ಮೆ ಪಡಿ.

 

ಧನು ರಾಶಿ (Dhanu)

ಹೊಗಳಿಕೆಗೆ ಮನಸೋತು ಕೆಲವೊಮ್ಮೆ ಇಲ್ಲ-ಸಲ್ಲದ ಮಾತುಗಳು ನಿಮ್ಮ ಬಾಯಿಂದ ಹೊರ ಬರುವುದು. ಮಾತಿನ ಮೇಲೆ ಹಿಡಿತವಿರಲಿ. ಯಾರಾದರೂ ಹೊಗಳಿದರೆ ನಕ್ಕು ಸುಮ್ಮನಾಗಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಒಳ್ಳೆಯದು.

 

ಮಕರ (Makara)

ಮನೆಯಲ್ಲಿ ಶುಭ ಕಾರ್ಯಗಳ ಮಾತುಕತೆ ನೆರವೇರುವುದು. ಬಂಧುಗಳಲ್ಲಿ ಈ ವಿಚಾರವಾಗಿ ಒಮ್ಮತದ ಅಭಿಪ್ರಾಯ ಕಂಡು ಬರುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

 

ಕುಂಭರಾಶಿ (Kumbha)

 

ಕೂಡಿಟ್ಟ ಹಣ ಇಂದು ನೀರಿನಂತೆ ಖರ್ಚಾಗುವುದು. ಹಾಗಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸಂಗಾತಿಯ ಹಿತನುಡಿಗಳನ್ನು ಆಲಿಸುವುದು ಕ್ಷೇಮ. ಗುರು ಹಿರಿಯರನ್ನು ಗೌರವಿಸಿ.

 

ಮೀನರಾಶಿ (Meena)

ಯಾವುದೇ ಋುಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದು ಒಳಿತು. ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ನೀವು ಆಡುವ ಮಾತು ಪರರನ್ನು ನೋಯಿಸದಂತೆ ನೋಡಿಕೊಳ್ಳಿ. ಸ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top