ದೇವರು

2018 ನೇ ಜನವರಿ ಏಳನೇ ತಾರೀಖಿನಂದು ಆದ ಶನಿಯ ಮಹಾ ಪರಿವರ್ತನೆ ಯಿಂದ ಶನಿ ಶಾಂತಿ ಮಾಡ್ಕೋಬೇಕಾದ್ರೆ ಈ ನಿಯಮಗಳು ತಪ್ಪದೆ ಪಾಲಿಸಬೇಕು

2018 ನೇ ಜನವರಿ ಏಳನೇ ತಾರೀಖಿನಂದು ಆದ ಶನಿಯ ಮಹಾ ಪರಿವರ್ತನೆ ಯಿಂದ ಶನಿ ಶಾಂತಿ ಮಾಡ್ಕೋಬೇಕಾದ್ರೆ ಈ ನಿಯಮಗಳು ತಪ್ಪದೆ ಪಾಲಿಸಬೇಕು

ಆಕಾಶದಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹ ಎಂದರೆ, ಅಖಿಲ ಬ್ರಹ್ಮಾಂಡದ ಸರ್ವೋಚ್ಚ ನ್ಯಾಯಾಧೀಶ ,ದಂಡಾಧಿಕಾರಿ ಮತ್ತು ರಾತ್ರಿಯ ರಾಜ, ಮಕರ ಮತ್ತು ಕುಂಭ ರಾಶಿಯ ಅಧಿಪತಿ ಪಶ್ಚಿಮ ದಿಕ್ಕಿನ ಒಡೆಯ ಶ್ರೀ ಶನೈಶ್ಚರ ದೇವನಾಗಿದ್ದಾನೆ. ಅಂತಹ ಶನೈಶ್ಚರ ದೇವನು ಜನವರಿ ಏಳನೇ ತಾರೀಖಿನಂದು ರವಿವಾರ ಸಂಜೆ ಐದು ಮೂವತ್ತು ನಿಮಿಷಕ್ಕೆ ಪಶ್ಚಿಮ ದಿಕ್ಕಿನಲ್ಲಿ ಉದಯವಾಗುತ್ತಿದ್ದಾನೆ. ಶನಿಯ ಈ ರೀತಿ ಉದಯವಾಗುವುದು ಕೆಲವು ರಾಶಿಗಳಿಗೆ ಶುಭ ಫಲವಿದ್ದು, ಇನ್ನೂ ಕೆಲವು ರಾಶಿಗಳಿಗೆ ಕೆಟ್ಟ ಫಲವೂ ಸಹ ಇದೆ. ಆದ್ದರಿಂದ ಈ ಕೆಳಗಿನ ಶನಿ ಶಾಂತಿಯನ್ನು ಮಾಡಿಕೊಳ್ಳಿ.

 

 

ಇಲ್ಲಿ ಕೆಲವು ಶನೈಶ್ಚರನ ಅಥವಾ ಶನಿ ಗ್ರಹದ ಬಗ್ಗೆ ಶಾಂತಿಯನ್ನು ಹೇಳಲಾಗಿದೆ. ಅವುಗಳಲ್ಲಿ ನಿಮಗೆ ಯಾವುದು ಸರಳವೆನಿಸುವುದು ಅವುಗಳನ್ನು ಪಾಲಿಸಿ. ಈ ಉಪಾಯಗಳನ್ನು ಶನಿವಾರ ಮತ್ತು ಅಮಾವಾಸ್ಯೆಯ ದಿನ ಸಂಜೆಯ ಸಮಯದಲ್ಲಿ ಮಾಡುವ ವಿಶೇಷ ವಿಧಾನವಿದೆ. ಆದರೆ ಯಾವುದೇ ದಿನವಾದರೂ ಈ ಉಪಾಯಗಳನ್ನು ಸಂಜೆ ನಾಲ್ಕು ಗಂಟೆಯಿಂದ ತಡರಾತ್ರಿಯವರೆಗೂ ಮಾಡಬಹುದಾಗಿದೆ. ಯಾಕೆಂದರೆ ಶನಿದೇವನ ಸಮಯವೂ ಕೂಡ ಸಂಜೆಯಿಂದಲೇ ಪ್ರಾರಂಭವಾಗಿ ತಡ ರಾತ್ರಿಯವರೆಗೂ ಇರುತ್ತದೆ.

1.ಕಪ್ಪು ಬಣ್ಣದ ಚಿಟ್ಟೆಗಳನ್ನು ಖರೀದಿಸಿ, ಆಕಾಶಕ್ಕೆ ಹಾರಿ ಬಿಡಿ. ನಿಮ್ಮ ಎರಡೂ ಕೈಗಳನ್ನು ಬಳಸಿ ಚಿಟ್ಟೆಗಳನ್ನು ಆಕಾಶಕ್ಕೆ ಹಾರಿ ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ದುಃಖವೂ, ಕಷ್ಟಗಳು ಸಹ ಚಿಟ್ಟೆಗಳ ರೀತಿಯಲ್ಲೇ ಹಾರಿ ಹೋಗುವುದು.

 

 

2.ಕಬ್ಬಿಣದ ತ್ರಿಶೂಲ ಮಹಾಕಾಲನಾದ ಶಿವ, ಮಹಾಕಾಳಿ ಅಥವಾ ಮಹಾಕಾಲನಾದ ಭೈರವನ ಮಂದಿರಕ್ಕೆ ಅರ್ಪಿಸಿರಿ.

3. ಶನಿದೋಷದಿಂದ ವಿವಾಹದಲ್ಲಿ ಅಡೆ ತಡೆಗಳು ಉಂಟಾಗುತ್ತಿದ್ದರೆ. ಕಪ್ಪು ಬಣ್ಣದ ಬಟ್ಟೆಯಲ್ಲಿ ಕಪ್ಪು ಸಾಸಿವೆಯ ಕಟ್ಟಿ ಅರಳಿ ಮರದ ಕೆಳಗೆ ಕಟ್ಟಿ ಇಟ್ಟುಬಿಡಿ ಹೀಗೆ ಮಾಡಿ ಶೀಘ್ರವಾಗಿ ವಿವಾಹ ನೆರವೇರುವಂತೆ ಪ್ರಾರ್ಥಿಸಿ.

4.ಹತ್ತು ಬಾದಾಮಿಯನ್ನು ತೆಗೆದುಕೊಂಡು ಹನುಮಂತನ ಮಂದಿರಕ್ಕೆ ಹೋಗಿ ಐದು ಬಾದಾಮಿಯನ್ನು ಹನುಮಂತನ ಮಂದಿರದಲ್ಲಿ ಇಟ್ಟು, ಇನ್ನುಳಿದ ಐದು ಬಾದಾಮಿಯನ್ನು ಮನೆಗೆ ತಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ನೀವು ಹಣವನ್ನು ಇಡುವ ಸ್ಥಳದಲ್ಲಿ ಇಟ್ಟುಬಿಡಿ.

5.ಶನಿವಾರ ದಿನ ಕೋತಿಗಳಿಗೆ ಕಡಲೆ ಕಾಳು, ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಲು ನೀಡಿ.

6.ಶನಿವಾರ ದಿನ ಸಾಸಿವೆ ಎಣ್ಣೆಯನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಮತ್ತು ಆ ಪಾತ್ರೆಯಲ್ಲಿ ನಿಮ್ಮ ಮುಖವನ್ನು ನೋಡಿ ಕಂಡು ಆ ಪಾತ್ರೆ ಸಮೇತ ಎಣ್ಣೆಯನ್ನು ದಾನ ಮಾಡಿ.

7.ಹರಿಯುತ್ತಿರುವ ನೀರಿನಲ್ಲಿ ತೆಂಗಿನಕಾಯಿಯನ್ನು ತೇಲಿ ಬಿಡಿ. ಆಗ ನಿಮ್ಮ ಎಲ್ಲಾ ಶನೈಶ್ಚರನ ಪೀಡೆಗಳು, ದೋಷಗಳು ಸಮಾಪ್ತಿಯಾಗುವುದು.

8. ಶನಿವಾರದ ದಿನ ಕಪ್ಪು ಉದ್ದಿನ ಬೇಳೆಯನ್ನು ರುಬ್ಬಿ ಅದರೊಳಗೆ ಗೋಧಿ ಪುಡಿಯನ್ನು ಮಿಶ್ರಣ ಮಾಡಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅವುಗಳನ್ನು ಮೀನಿಗೆ ತಿನ್ನಲು ನೀಡಿ.

9. ಶನಿವಾರದ ದಿನ ಕಪ್ಪು ಕುದುರೆಯಿಂದ ಲಾಳದಿಂದ ಮಾಡಿದ ಉಂಗುರವನ್ನು ಶನಿವಾರದ ದಿನ ಸೂರ್ಯಾಸ್ತದ ಸಮಯದಲ್ಲಿ ಧರಿಸುವುದರಿಂದ ಶನಿಪೀಡೆ ಕೊನೆಯಾಗಲಿದೆ.

10. ಶನಿವಾರದ ದಿನ ಸ್ಮಶಾನದಲ್ಲಿ ಮರದ ತುಂಡುಗಳನ್ನು ದಾನ ಮಾಡಿ.

11. ಶನಿವಾರದ ದಿನ ಸಾಸಿವೆ ಎಣ್ಣೆಯನ್ನು ಕೈ ಮತ್ತು ಕಾಲಿನ ಬೆರಳುಗಳಿಗೆ ಅವಶ್ಯಕವಾಗಿ ಹಚ್ಚಿಕೊಳ್ಳಿ.

12. ಎಂಟು ಶನಿವಾರಗಳು ಕಪ್ಪು ಎಳ್ಳು, ಅಕ್ಕಿ ಹಿಟ್ಟು, ಸಕ್ಕರೆಯನ್ನು ಮಿಶ್ರಣ ಮಾಡಿ. ಇರುವೆಗಳು ಇರುವ ಗೂಡಿಗೆ ಆಹಾರವಾಗಿ ಅರ್ಪಿಸಿ.

13. ಶನಿವಾರದ ಸಂಜೆ ಅರಳಿಮರದ ಕೆಳಗೆ ಸಾಸಿವೆ ಎಣ್ಣೆಯನ್ನು ಅಥವಾ ಎಳ್ಳಿನ ಎಣ್ಣೆಯನ್ನು ಬಳಸಿ ದೀಪವನ್ನು ಬೆಳಗಿಸಿ.

 

 

14.ಶನಿವಾರದ ದಿನ ಅಥವಾ ಮಂಗಳವಾರದ ದಿನ ಹನುಮಂತನ ಮಂದಿರಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಅಥವಾ ಎಳ್ಳಿನ ಎಣ್ಣೆಯ ದೀಪವನ್ನು ಅಥವಾ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ ಭಗವಂತನಾದ ಹನುಮಂತನಿಗೆ ಕೆಂಪು ಹೂವು ಮತ್ತು ಕೆಂಪು ಹಣ್ಣನ್ನು ಅರ್ಪಿಸಿ ನಂತರ ಅಲ್ಲಿಯೇ ಕುಳಿತು ಹನುಮಾನ್ ಚಾಲೀಸವನ್ನು ಓದಿ. ಹನುಮಂತ ದೇವನನ್ನು ಎಷ್ಟೇ ಕಷ್ಟಕರವಾದ ಕೆಲಸವಾಗಿದ್ದರೂ ಕೂಡ ಅದರಲ್ಲಿರುವ ಕಷ್ಟಗಳು ಸುಲಭವಾಗಿ ಬಗೆಹರಿಯಲೆಂದು ಬೇಡಿಕೊಳ್ಳಿ. ಶನೈಶ್ಚರ ದೇವನ ಪೀಡೆ ಮತ್ತು ದೋಷಗಳಿಂದ ದೂರವಾಗಿ ನಿಮ್ಮ ಕಾರ್ಯಗಳು ಯಶಸ್ವಿಯಾಗಲಿ ಎಂದು ಬೇಡಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top