fbpx
ಹೆಚ್ಚಿನ

ಕಡಿದು ಬೆಟ್ಟದಲ್ಲಿ ರೈಲು ಓಡ್ತಾ ಐತೆ ನೋಡ್ಲಾ ಮಗ..

ಕಡಿದು ಬೆಟ್ಟದಲ್ಲಿ ರೈಲು ಓಡ್ತಾ ಐತೆ ನೋಡ್ಲಾ ಮಗ..

 

ಸೂಕ್ಷಯಂತ್ರಕ್ಕೆ ಮಾತ್ರವಲ್ಲದೆ ಬೃಹತ್ ಯಂತ್ರಜ್ಞಾನ ಅಳವಡಿಸಿಕೊಳ್ಳಲೂ ನಾವ್ ರೆಡಿ ಎಂದು ಸ್ವಿಸ್ ದೇಶದ ತಂತ್ರಜ್ಞರು ರೂಪಿಸದ್ದಾರೆ. ವಿಶ್ವದಲ್ಲೇ ಅತ್ಯಂತ ಕಡಿದಾದ ಪ್ರದೇಶಗಳಲ್ಲಿ ರೈಲು ಓಡಿಸಿ ಎಲ್ಲರಿಂದ ಮೆಚ್ಚುಗೆ ಪಡೆಯುವುದರೊಂದಿಗೆ ವಿಶ್ವ ದಾಖಲೆ ನಿರ್ವಿಸಿದೆ.

 

 

ಸ್ವಿಸ್‍ದೇಶದ ಬೆಳ್ಳಿ ಬೆಟ್ಟದಲ್ಲಿ ಸಮುದ್ರಮಟದಿಂದ ಸುಮಾರು 1,300 ಮೀಟರ್ ಎತ್ತರದಲ್ಲಿ, ರೈಲು ಸಾಗುತ್ತದೆ. ಸ್ಕಿವಜ್ನಿಂದ ಅಲ್ಟನ್ ಬೆಟ್ಟದ ಮೇಲಿರುವ ಸ್ಟೂಸ್ ಹಳ್ಳಿವರೆಗೆ ಸಾಗುತ್ತದೆ.

ಸ್ಪೀಡ್ ಚೆನ್ನಾಗಿದೆಯಾ?

 

 

ನಿಮಿಷಕ್ಕೆ 1 ಕಿ.ಮೀ ಸಾಗಲಿದೆ. ಸುಮಾರು 337.06 ಕೋಟಿರೂ.ಗಳು ಅಂದರೆ 52.6ದಶಲಕ್ಷ ಡಾಲರ್‍ಗಳನ್ನು ಮಾತ್ರವೇ ವ್ಯಯಮಾಡಿದ್ದಾರೆ.

ಎಲ್ಲಾ ಓ.ಕೆ. ಈ ರೈಲಿನ ಬೋಗಿಗಳನ್ನು ಬೀರ್ ಬ್ಯಾರಲಲ್ ರೀತಿ ನಿರ್ಮಿಸಿರುವುದೇಕೆ?

ಪ್ರಯಾಣಿಕರು ನೇರವಾಗಿ ನಿಲ್ಲಲು ಸಹಕಾರಿಯಾಗುವಂತೆ ಅಥವಾ ನೆಲಕ್ಕೆ ಲಂಬವಾಗಿರುವಂತೆ ನೋಡಿಕೊಳ್ಳಲು ಈ ರೀತಿಯಲ್ಲಿ ರೂಪಿಸಿದ್ದಾರೆ. ಹೀಗಾಗಿ ಮುಂದಿಕ್ಕೂ ಬಾಗರು-ಹಿಂದಿಕ್ಕೂ ಬೀಳರು.

 

 

ಆಕಾಶದಲ್ಲಿ ನಾವು ಪ್ರಯಾಣ ಮಾಡುತ್ತಿದ್ದೇವೋ… ಅಥವಾ ನಮ್ಮ ನಡುವೆ ಆಕಾಶ ಪ್ರಯಾಣ ಮಾಡುತ್ತಿದೆಯೋ ಎಂಬ ಜಿಜ್ಞಾಸೆ ಮೂಡಿಸುತ್ತದೆ. ಹಿಮಪಾತ, ಮಂಜಿನಗಡ್ಡೆಗಳು, -10-25 ಡಿಗ್ರಿ ಸೆಲ್ಶಿಯಸ್ ಟೆಂಪರೇಚರ್‍ನಲ್ಲಿ ಸಾಗಬೇಕು. ಕಡಿದಾದ ಬೆಟ್ಟ-ಅಲ್ಲಲ್ಲಿ ಪ್ರಪಾತ ಆಯ ತಪ್ಪಿ ಬಿದ್ದರೆ ನೇರ ಸ್ವರ್ಗಕ್ಕೆ ಎನಿಸುವ ರುದ್ರರಮಣೀಯ ದೃಶ್ಯವನ್ನು ಸವೆದು ಸಾಗಬೇಕು.

ಬಿಡುವಿದ್ದು ರೊಕ್ಕವಿದ್ದವರಿಗೆ ಸ್ವಿಸ್‍ನ ಬೆಳ್ಳಿಬೆಟ್ಟದ ಟ್ರೈನ್

ಹಣವಿಲ್ಲದವರಿಗೆ ಇದ್ದೇ ಇದೆ ನೆಹರು ಬಾಲ್‍ಭವನ್ ಟ್ರೈನ್!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top