fbpx
ಜ್ಯೋತಿಷ್ಯ

4000 ವರ್ಷಗಳ ನಂತರ ಜನವರಿ 16 ರಂದು ಮೌನಿ ಅಮಾವಾಸ್ಯೆ ಆ ದಿನ ಪಿತೃ ದೋಷ ಮತ್ತು ಗ್ರಹ ದೋಷಗಳ ಪರಿಹಾರಕ್ಕಾಗಿ ಈ ಕೆಲಸಗಳನ್ನು ತಪ್ಪದೆ ಮಾಡಿ

4000 ವರ್ಷಗಳ ನಂತರ  ಜನವರಿ 16 ರಂದು  ಮೌನಿ ಅಮಾವಾಸ್ಯೆ ಆ ದಿನ ಪಿತೃ ದೋಷ ಮತ್ತು ಗ್ರಹ ದೋಷಗಳ ಪರಿಹಾರಕ್ಕಾಗಿ ಈ ಕೆಲಸಗಳನ್ನು ತಪ್ಪದೆ ಮಾಡಿ 

ನಾಲ್ಕು ಸಾವಿರ ವರ್ಷಗಳ ನಂತರ ಇದೇ ಜನವರಿ ಹದಿನಾರನೇ ತಾರೀಖಿನಂದು ಮೌನಿ ಅಮಾವಾಸ್ಯೆ ಬಂದಿದೆ. ಎಲ್ಲಾ ಪಿತೃ ದೋಷ ಮತ್ತು ಗ್ರಹ ದೋಷದಿಂದ ನೀವು ಮುಕ್ತಿ ಪಡೆಯಬಹುದು .
ಹಿಂದೂ ಧರ್ಮದಲ್ಲಿ ಈ ಮಾಘ ಮಾಸದ, ಕೃಷ್ಣ ಪಕ್ಷದಲ್ಲಿ ಬರುವ ಮೌನಿ ಅಮಾವಾಸ್ಯೆಗೆ ಅತ್ಯಂತ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ದಿನ ಮೌನ ವ್ರತಾಚರಣೆಯನ್ನು ಮಾಡಬೇಕು . ಮುನಿ ಶಬ್ದದಿಂದಲೇ ಮೌನಿ ಶಬ್ದವು ಉತ್ಪತ್ತಿಯಾಗಿದೆ. ಈ ದಿನ ಮೌನದಿಂದ ಇದ್ದು ಯಮುನಾ ಅಥವಾ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಅದಕ್ಕೆ ವಿಶೇಷವಾದ ಮಹತ್ವವಿದೆ. ಈ ದಿನ ಮೌನವಾಗಿದ್ದು ನದಿ ಅಥವಾ ನದಿಯ ಸಂಗಮಗಳಲ್ಲಿ ಸ್ನಾನ ಮಾಡಿದರೆ ವಿಶೇಷವಾಗಿರುವ ಶಕ್ತಿಯೂ ಪ್ರಾಪ್ತಿಯಾಗುತ್ತದೆ. ಮಾನಸಿಕ ಸಮಸ್ಯೆಗಳಿದ್ದರೆ ಅವು ಬಗೆಹರಿಯುತ್ತವೆ. ಗ್ರಹಗಳ ದೋಷ ಮತ್ತು ಪಿತೃ ದೋಷ ನಿವಾರಣೆಗೆ ಇದು ಉತ್ತಮ ಕಾಲವಾಗಿದೆ.ಈ ದಿನ ಮೌನವಾಗಿರಬೇಕು. ಈ ಬಾರಿ ಹದಿನಾರನೇ ತಾರೀಖು ಜನವರಿ ಮಂಗಳವಾರದ ದಿನ ಮೌನಿ ಅಮಾವಾಸ್ಯೆಯ ಬಂದಿರುವುದು ಬಹಳ ವಿಶೇಷವಾಗಿದೆ .

 

 

ಮೌನಿ ಅಮಾವಾಸ್ಯೆಯ ಸಮಯ.

ಅಮಾವಾಸ್ಯೆಯ ತಿಥಿ= 16 ನೇ ತಾರೀಖು ಜನವರಿ 2018, ಮಂಗಳವಾರ 5 ಗಂಟೆ 11 ನಿಮಿಷಕ್ಕೆ ಪ್ರಾರಂಭವಾಗುತ್ತದೆ. ಅಮಾವಾಸ್ಯೆಯ ತಿಥಿ= 17 ನೇ ತಾರೀಖು ಜನವರಿ 2018 ಬುಧವಾರ ಬೆಳ್ಳಗೆ 7:47 ನಿಮಿಷಕ್ಕೆ ಸಮಾಪ್ತಿಯಾಗುವುದು.
ಈ ಮೌನಿ ಅಮಾವಾಸ್ಯೆಯು ಮಂಗಳವಾರವೇ ಬಂದಿರುವುದರಿಂದ ಬೆಳಗ್ಗೆ ಬೇಗನೆ ಎದ್ದು, ನೀರನ್ನು ತಲೆಗೆ ಹಾಕಿಕೊಂಡು ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ, ಸೂರ್ಯದೇವನಿಗೆ ನೀರಿನಲ್ಲಿ ಎಳ್ಳನ್ನು ಬೆರೆಸಿ ಅರ್ಘ್ಯವನ್ನು ಅರ್ಪಿಸಿ . ಶ್ರೀ ಕೃಷ್ಣ ಮತ್ತು ಶಿವ ಭಗವಂತನ ಯಾವುದೇ ಮಂತ್ರವನ್ನು ಉಚ್ಛಾರಣೆ ಮಾಡಿ, ದಾನವನ್ನು ಮಾಡಿ, ನೀರು ಮತ್ತು ಹಣ್ಣುಗಳನ್ನು ತಿಂದು ಈ ದಿನ ಪಲಹಾರವನ್ನು ಸೇವಿಸಿ. ನಿಮ್ಮ ಜೀವನದಲ್ಲಿರುವ ಎಲ್ಲ ರೀತಿಯ ಸಂಕಟಗಳು ಕೂಡ ದೂರವಾಗುತ್ತದೆ. ನಿಮ್ಮ ಜನ್ಮ ಜನ್ಮವೂ ಕೂಡ ಪವಿತ್ರವಾಗುತ್ತದೆ.

 

 

ಈ ಒಂದು ಮಂತ್ರವನ್ನು ಈ ದಿನ ಜಪಿಸಬೇಕು ಅದು ಹೀಗಿದೆ

“ ಅಯೋಧ್ಯಾ, ಮಥುರಾ ,ಮಾಯಾ, ಕಾಶಿ, ಕಂಚಿ, ಅವಂತಿಕಾ, ಪುರಿ, ದ್ವಾರಾವತಿ, ಗಯಾ, ಸಪ್ತ ಮೋಕ್ಷದಾಯಕ ಗಂಗೇಚ, ಯಮುನೇಚೈವ,ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ, ಜಲೇಸ್ಮಿನ್ ಸನ್ನಿಧಿ ಕುರು”
ಮಕರ ಸಂಕ್ರಾಂತಿಯ ದಿನ ನೀವು ಅವಶ್ಯವಾಗಿ ಶಿವನ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಶಿವಲಿಂಗಕ್ಕೆ ನೀರನ್ನು ಅರ್ಪಿಸಿ, ಒಂದು ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು “ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರವನ್ನು ಜಪಿಸಿ. ಜಪಿಸಿದ ನಂತರ ಆ ದ್ರಾಕ್ಷಿಯ ಮಾಲೆಯನ್ನು ನೀವು ಧರಿಸಬೇಕು. ಹೀಗೆ ಮಾಡುವುದರಿಂದ ಗ್ರಹ ದೋಷಗಳು ದೂರವಾಗುತ್ತವೆ. ನೀವು ಈ ರೀತಿ ಮಾಡಿದರೆ ಜೀವನದಲ್ಲಿರುವ ಕಷ್ಟಗಳಿಂದ ಮುಕ್ತಿ ಹೊಂದಬಹುದು.
ಈ ಬಾರಿಯ ಮೌನಿ ಅಮಾವಾಸ್ಯೆಯ ಉತ್ತಮ ಯೋಗದಿಂದ ಕೂಡಿದ್ದು, ಮುಕ್ತಿ ಮತ್ತು ಮೋಕ್ಷ ಪ್ರಾಪ್ತಿಗಾಗಿ ಗೋದಾನ ಮಾಡಬೇಕು. ಇಲ್ಲವೆಂದರೆ ಗೋವಿಗೆ ಚಪಾತಿಯನ್ನು ತಿನ್ನಿಸಿ. ಆರ್ಥಿಕ ಸಮಸ್ಯೆಯ ನಿವಾರಣೆಗಾಗಿ ಭೂಮಿ ದಾನವನ್ನು ಮಾಡಬೇಕು. ಆದರೆ ಇದು ಸಾಧ್ಯವಿಲ್ಲದ ಕಾರಣದಿಂದ ನೂರಾ ಎಂಟು ಬಾರಿ ಗಾಯತ್ರಿ ಮಂತ್ರವನ್ನು ಜಪಿಸಬೇಕು .

ಗ್ರಹ ದೋಷ ಮತ್ತು ನಕ್ಷತ್ರ ದೋಷದ ನಿವಾರಣೆಗಾಗಿ ಕಪ್ಪು ಎಳ್ಳು ಮತ್ತು ಬಿಳಿ ಎಳ್ಳಿನಿಂದ ಮಾಡಿದ ಉಂಡೆಯನ್ನು ಅಥವಾ ಲಡ್ಡುವನ್ನು ದಾನ ಮಾಡಿ.
ನಿಮ್ಮ ಕುಟುಂಬದಲ್ಲಿ ಅನೇಕ ರೀತಿಯ ಸಮಸ್ಯೆಗಳಿದ್ದರೆ ಶುದ್ಧ ಹಸುವಿನ ತುಪ್ಪವನ್ನು ಈ ದಿನ ದಾನ ಮಾಡಬೇಕು.

ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗುತ್ತಿದ್ದರೆ, ಯಾವ ಕೆಲಸವೂ ಸಹ ಯಶಸ್ವಿಯಾಗುತ್ತಿಲ್ಲ ಎಂದರೆ ಒಂದು ಪ್ಯಾಕೆಟ್ ಉಪ್ಪನ್ನು ದಾನ ಮಾಡಿ.
ನಿಮ್ಮ ಜೀವನದಲ್ಲಿ ಸಂತಾನಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿದ್ದರೆ ಬೆಳ್ಳಿಯನ್ನು ಈ ದಿನ ದಾನವಾಗಿ ನೀಡಿ.

 

 

ಈ ದಿನ ಮೌನವಾಗಿದ್ದು, ಕಡಿಮೆ ಮಾತನ್ನು ಮಾತನಾಡಬೇಕು. “ ಓಂ ನಮ ಶಿವಾಯ” ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು, ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು, ಗಾಯತ್ರಿ ಮಂತ್ರವನ್ನು ಜಪಿಸಿ, ಇವೆಲ್ಲ ಮಂತ್ರವನ್ನು ಹೇಳುವ ಅವಶ್ಯಕತೆ ಇಲ್ಲ, ಈ ಮೂರರಲ್ಲಿ ಯಾವುದಾದರೂ ಒಂದನ್ನು ಭಕ್ತಿ ಶ್ರದ್ಧೆಯಿಂದ ಈ ದಿನ ಜಪಿಸಿರಿ.
ಮನೆಯಲ್ಲಿ ಬೆಳಗ್ಗೆ ಸ್ನಾನ ಮಾಡುವವರಾದರೆ ನೀರಿನಲ್ಲಿ ಕೆಂಪು ಚಂದನ ಮತ್ತು ಕಪ್ಪು ಎಳ್ಳನ್ನು ಬೆರೆಸಿ ಆ ನೀರಿನಿಂದ ಸ್ನಾನ ಮಾಡಿ ನಂತರ ಪೂಜೆಯನ್ನು ಮಾಡಿ, ಪೂಜೆ ಮಾಡುವವರೆಗೂ ಆ ದಿನ ಯಾವುದೇ ರೀತಿಯ ಅನ್ನ ನೀರು ಸೇವಿಸಬಾರದು.
ಈ ದಿನ ನಾಯಿ, ಕಾಗೆ, ಗೋವಿಗೆ, ಪ್ರಾಣಿಗಳಿಗೆ ಬಡವರಿಗೆ ಮತ್ತು ಬ್ರಾಹ್ಮಣರಿಗೆ ಅನ್ನ ದಾನ ಮಾಡಿ.ಕುಷ್ಠ ರೋಗಿಗಳಿಗೆ ಭೋಜನ ನೀಡಿ.

ಮನೆಯಲ್ಲಿ ದಕ್ಷಿಣಕ್ಕೆ ಮುಖ ಮಾಡಿ ನಿಂತು ಒಂದು ಲೋಟ ನೀರನ್ನು ಅರ್ಪಿಸಿ ಪಿತೃಗಳಿಗೆ ಈ ಮಂತ್ರವನ್ನು ಹೇಳುತ್ತಾ ನೀರನ್ನು ಅರ್ಪಿಸಿ. “ಓಂ ಸರ್ವೇಭ್ಯೋ ಪಿತೃಭ್ಯೋ ನಮಃ” ನಿಮ್ಮ ಜೀವನದ ಎಲ್ಲ ಪ್ರಕಾರದ ಪಿತೃ ದೋಷಗಳು ನಿವಾರಣೆಯಾಗುತ್ತವೆ. ಪಿತೃಗಳ ಆತ್ಮಕ್ಕೆ ಇದರಿಂದ ಶಾಂತಿ ಸಿಗಲಿದೆ .
ಈ ದಿನ ನೀವು ಮೌನವಾಗಿದ್ದರೆ ನಿಮಗೆ ಸಹಸ್ರ ಗೋದಾನ ಫಲ ಸಿಗುವುದು. ಈ ದಿನ ಅಶ್ವತ್ಥ ಮರದ ಪ್ರದಕ್ಷಿಣೆ ಕೂಡ ಮಾಡಬೇಕು. ವಿವಾಹಿತ ಸ್ತ್ರೀಯರು ಹಾಲು, ನೀರು, ಅಕ್ಷತೆ, ಚಂದನ,ಪುಷ್ಪ ಮತ್ತು ಇತ್ಯಾದಿಗಳಿಂದ ಪೂಜೆ ಮಾಡಬೇಕು.ಅಶ್ವಥ ಮರದ ಸುತ್ತ ನೂರಾ ಎಂಟು ಬಾರಿ ದಾರವನ್ನು ಸುತ್ತಿ ಪ್ರದಕ್ಷಿಣೆ ಮಾಡಿದರೆ ಪತಿಯ ಆಯಸ್ಸು ಹೆಚ್ಚಾಗುವುದು.

 

 

ಎಲೆ, ಅಡಿಕೆ, ಅರಿಶಿನ, ಕುಂಕುಮ ಈ ರೀತಿ ಎಲ್ಲಾ ಮಂಗಳ ದ್ರವ್ಯಗಳನ್ನು ಅರ್ಪಿಸಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದರೆ ಪತಿಯು ನಿರೋಗಿಯಾಗುವರು ಅಂದರೆ ರೋಗಗಳಿಂದ ಮುಕ್ತಿ ಹೊಂದುವರು ಮತ್ತು ದೀರ್ಘಾಯುಷ್ಯವನ್ನು ಹೊಂದುವರು.
ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯ ದಿನವನ್ನು ಪಿತೃಗಳ ತಿಥಿ ಎಂದು ಪರಿಗಣಿಸಲಾಗಿದೆ. ಪಿತೃಗಳನ್ನು ಪ್ರಸನ್ನಗೊಳಿಸುವ ಗೋವಿನ ಸಗಣಿಯನ್ನು ಅಂದರೆ ಒಣಗಿರುವ ಸಗಣಿಯನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಮತ್ತು ತುಪ್ಪವನ್ನು ಸೇರಿಸಿ, ಪಿತೃಗಳ ಹೆಸರನ್ನು ಹೇಳುತ್ತಾ ಅದಕ್ಕೆ ಅಗ್ನಿಯ ಸ್ಪರ್ಶವನ್ನು ಮಾಡಿ. ನಿಮ್ಮ ಮನೆಯ ಪ್ರತಿ ಮೂಲೆಯಲ್ಲೂ ಇದರ ಧೂಪ ಅಂದರೆ ಹೊಗೆ ತೋರಿಸಬೇಕು. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುವುದು. ಹೀಗೆ ಧೂಪವನ್ನು ತೋರಿಸಿದ ನಂತರ ನೀರನ್ನು ಸಮರ್ಪಿಸಬೇಕು.

ಈ ದಿನ ಹಸಿವಿನಿಂದ ಇರುವ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಅವಶ್ಯವಾಗಿ ಊಟವನ್ನು ನೀಡಿ. ಗೋಧಿ ಹಿಟ್ಟಿನಿಂದ ಬೆಳಗ್ಗೆ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಆ ಭಗವಂತನ ಹೆಸರನ್ನು ಹೇಳುತ್ತಾ ನದಿ, ಕೆರೆ ಅಥವಾ ಬಾವಿಗಳಲ್ಲಿ ಇರುವ ಮೀನುಗಳಿಗೆ ಆ ಸಣ್ಣ ಸಣ್ಣ ಉಂಡೆಗಳನ್ನು ಆಹಾರವಾಗಿ ನೀಡಿ. ಇದರಿಂದ ನಿಮ್ಮ ಜೀವನದಲ್ಲಿರುವ ಅನೇಕ ಸಮಸ್ಯೆಗಳು ದೂರವಾಗುತ್ತವೆ.
ಮೌನಿ ಅಮಾವಾಸ್ಯೆಯ ದಿನ ಸಂಜೆ ಮನೆಯಲ್ಲಿ ನೀವು ಒಂದು ಉಪಾಯವನ್ನು ಮಾಡಬೇಕು. ಅದೇನೆಂದರೆ ಮನೆಯ ಈಶಾನ್ಯ ಕೋಣೆಯಲ್ಲಿ ಸಂಜೆ ಅವಶ್ಯವಾಗಿ ಒಂದು ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಕೆಂಪು ಬತ್ತಿಯನ್ನು ಬಳಸಿ ಮತ್ತು ತುಪ್ಪದಿಂದ ದೀಪವನ್ನು ಬೆಳಗಿಸಿ.

ಈ ಮೌನಿ ಅಮಾವಾಸ್ಯೆಯು ಮಂಗಳವಾರದ ದಿನ ಬಂದಿರುವುದರಿಂದ ತುಂಬಾ ವಿಶೇಷವಾಗಿದೆ. ಮಂಗಳವಾರದ ದಿನವನ್ನು ಹನುಮಂತನ ದಿನವೆಂದು ಹೇಳಲಾಗಿದೆ. ಆದ್ದರಿಂದ ಈ ದಿನ ಹನುಮಾನ್ ಚಾಲೀಸವನ್ನು ಓದಿ. ಹನುಮಂತ ದೇವರಿಗೆ ಮಲ್ಲಿಗೆ ಎಣ್ಣೆಯಿಂದ ದೀಪವನ್ನು ಬೆಳಗಿಸಿ.

ಮಾತೆ ಲಕ್ಷ್ಮೀ ದೇವಿಯನ್ನು ಪ್ರಸನ್ನಗೊಳಿಸಲು ರಾತ್ರಿ ಹತ್ತು ಗಂಟೆಗೆ ಸ್ನಾನ ಮಾಡಿ ಹಳದಿ ವಸ್ತ್ರವನ್ನು ಧರಿಸಿ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ಕೇಸರಿಯಿಂದ ಸ್ವಸ್ತಿಕ್ ಅಥವಾ ಓಂ ಎಂದು ಬರೆದು ಶ್ರೀ ಯಂತ್ರ ಲಕ್ಷ್ಮಿಯಂತ್ರ ಮತ್ತು ಕುಬೇರ ಯಂತ್ರವನ್ನು ಅಥವಾ ದಕ್ಷಿಣಾವರ್ತಿ ಶಂಖವನ್ನು ಮತ್ತು ತಟ್ಟೆಯಲ್ಲಿ ಅಕ್ಷತೆಗೆ ಸಿಂಧೂರವನ್ನು ಮಿಶ್ರಣ ಮಾಡಿ ಇರಿಸಿ ಪೂಜೆ ಮಾಡಿ ಈ ಮಂತ್ರವನ್ನು ಜಪಿಸಿ
“ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ, ಮಂತ್ರ ಮೂರ್ತೆ ಸದಾ ದೇವಿ ಮಹಾಲಕ್ಷ್ಮೀ ನಮೋಸ್ತುತೆ”
ಅಮಾವಾಸ್ಯೆಯ ದಿನ ಚಂದ್ರನು ಸಂಪೂರ್ಣವಾಗಿ ಕತ್ತಲಾಗಿರುತ್ತಾನೆ. ಚಂದ್ರನು ಮನಸ್ಸಿನ ಸ್ವಾಮಿ ಎಂದು ಕರೆಯಲಾಗುತ್ತದೆ. ಅಮಾವಾಸ್ಯೆಯ ದಿನ ಚಂದ್ರನು ಕಣ್ಣಿಗೆ ಕಾಣಿಸುವುದಿಲ್ಲ. ಆದ್ದರಿಂದ ಮನಸ್ಸು ಸಹ ಕತ್ತಲನ್ನು ಆವರಿಸಿರುತ್ತದೆ. ಆದ್ದರಿಂದ ಈ ದಿನ ಈಶ್ವರನ ಜಪ ಮಾಡಿ ಅಥವಾ ನಿಮ್ಮ ಇಷ್ಟದೇವರ ಜಪ ತಪ ಪೂಜೆ ಯನ್ನು ಮಾಡಿ ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ.

ಈ ಮಹತ್ವಪೂರ್ಣವಾದ ಮೌನಿ ಅಮಾವಾಸ್ಯೆಯ ದಿನದಂದು ಈ ಮೇಲೆ ಹೇಳಿದ ಈ ರೀತಿಯ ಉಪಾಯಗಳನ್ನು ಪಾಲಿಸಿ, ನಿಮ್ಮ ಜೀವನದಲ್ಲಿರುವ ಕಷ್ಟ ಮತ್ತು ಗ್ರಹ ದೋಷ, ಪಿತೃ ದೋಷಗಳನ್ನು ನಿವಾರಣೆ ಮಾಡಿಕೊಳ್ಳಿ. ಎಲ್ಲರಿಗೂ ಶುಭವಾಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top