ಸಮಾಚಾರ

ಹಲ್ಲಿ ಶಾಸ್ತ್ರದ ಪ್ರಕಾರ ಜೀವನದಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳ್ಕೊಬೇಕಾದ್ರೆ ನಿಮ್ಮ ಸುತ್ತ ಮುತ್ತ ಇರುವ ಹಲ್ಲಿಗಳ ಈ ಗುಣಗಳನ್ನ ಗಮನಿಸಬೇಕಂತೆ

ಹಲ್ಲಿ ಶಾಸ್ತ್ರದ ಪ್ರಕಾರ ಜೀವನದಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳ್ಕೊಬೇಕಾದ್ರೆ ನಿಮ್ಮ ಸುತ್ತ ಮುತ್ತ ಇರುವ ಹಲ್ಲಿಗಳ ಈ ಗುಣಗಳನ್ನ ಗಮನಿಸಬೇಕಂತೆ

ನಿಮಗೆ ನಿಮ್ಮ ಜೀವನದಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳಿಯಬೇಕೆಂದರೆ ನಿಮ್ಮ ಸುತ್ತ ಮುತ್ತ ಇರುವ ಹಲ್ಲಿಗಳನ್ನು ಗಮನಿಸಿ.

ಹಲ್ಲಿಗಳು ಸಾಮಾನ್ಯವಾಗಿ ಮನೆಯ ಗೋಡೆಗಳ ಮೇಲೆ ಒಂದಾದರೂ ಇದ್ದೇ ಇರುತ್ತವೆ ಅವು ನಮಗೆ ಕಾಣಿಸುತ್ತವೆ ಕೂಡ.ಆಗಾಗ್ಗೆ ನೆಲದ ಮೇಲೆ ಬೀಳುತ್ತವೆ.ನಿಮಗೆ ಹಲ್ಲಿ ಶಾಸ್ತ್ರ ಅಥವಾ ಅವುಗಳ ಶಕುನಗಳ ಬಗ್ಗೆ ಗೊತ್ತಾ ?ಹಲ್ಲಿಗಳು ಮಾಡುವ ಲಚಗುಟ್ಟುವ ಶಬ್ದದಿಂದ ಅಥವಾ ಅವು ನಮ್ಮ ದೇಹದ ಯಾವ ಭಾಗದ ಮೇಲೆ ಬೀಳುತ್ತವೆ ಎನ್ನುವ ಆಧಾರದ ಮೇಲೆಯೂ ಸಹ ಅವು ನಮಗೆ ಯಾವ ರೀತಿಯ ಶಕುನಗಳು ? ಒಳ್ಳೆಯದೋ ? ಕೆಟ್ಟದ್ದೋ ? ಎಂದು ನಾವು ತಿಳಿಯಬಹುದಾಗಿದೆ.ಬನ್ನಿ ಅವುಗಳ ಬಗ್ಗೆ ಇಂದು ನಾವು ತಿಳಿಯೋಣ…
ಯಾವ ದಿಕ್ಕಿನಿಂದ ಹಲ್ಲಿಯೂ ಬೀಳುವುದೆಂದು ನೋಡುವುದು ಅತ್ಯಂತ ಮುಖ್ಯವಾಗಿರುವುದು.ಯಾವ ದಿಕ್ಕಿನಿಂದ ಬಿದ್ದಿದೆ ?ಎಲ್ಲಿಂದ ಬಿದ್ದಿದೆ ? ದೇಹದ ಯಾವ ಭಾಗದ ಮೇಲೆ ಬಿದ್ದಿದೆ? ಎಂದು ಗಮನಿಸಬೇಕು.ಈ ಎಲ್ಲಾ ವಿಷಯಗಳು ಸಹ ನಮ್ಮ ಮುಂದಿನ ಭವಿಷ್ಯವನ್ನು ಸೂಚಿಸುವ ಶಕುನಗಳಾಗಿವೆ.ಆದ್ದರಿಂದ ಅವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು.

 

 

1.ಯಾರಾದರೂ ವ್ಯಕ್ತಿಯು ಹಲ್ಲಿಗಳು ಜೊತೆಗೆ ಒಟ್ಟಾಗಿ ಇರುವ ದೃಶ್ಯವನ್ನು ಅಂದರೆ ಸಂಭೋಗ ಮಾಡುತ್ತಿರುವ ದೃಶ್ಯವನ್ನು ನೋಡಿದರೆ ಅವರು ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತಾರೆ ಎಂದರ್ಥ.
ಎರಡು ಹಲ್ಲಿಗಳು ಕಿತ್ತಾಡುತ್ತಿರುವುದನ್ನು ನೋಡಿದರೆ ನೀವು ಯಾರ ಜೊತೆಗಾದರೂ ಜಗಳವಾಡುತ್ತೀರ ಎಂದರ್ಥ.

2.ನೀವು ಊಟ ಮಾಡುವಾಗ ಹಲ್ಲಿಯನ್ನು ನೋಡಿದರೆ ಅದು ಒಳ್ಳೆಯ ಸಂಕೇತ ಅಥವಾ ಶುಭ ಶಕುನವಾಗಿದೆ.
ಆದರೆ ಯಾರಾದರೂ ಹೊಸ ಮನೆಯೊಳಗೆ ಗೃಹ ಪ್ರವೇಶ ಮಾಡುವಾಗ ಸತ್ತು ಹೋಗಿರುವ ಹಲ್ಲಿಯನ್ನು ಕಂಡರೆ ಇದು ಕೆಟ್ಟ ಶಕುನವಾಗಿದ್ದು ಆಗ ನೀವು ಅದೇ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದರೆ ಆ ಮನೆಯಲ್ಲಿರುವವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

 

 

3.ಒಬ್ಬ ವ್ಯಕ್ತಿಯ ತಲೆಯ ಮೇಲೆ ಹಲ್ಲಿಯು ಬಿದ್ದರೆ ಅಥವಾ ಬಲಗೈ ಮೇಲೆ ಬಿದ್ದರೆ ಆ ವ್ಯಕ್ತಿಯು ಸಮಾಜದಲ್ಲಿ ಗೌರವವನ್ನು ಗಳಿಸುತ್ತಾರೆ.
ಹಾಗೆ,ಹಲ್ಲಿಯೂ ನಿಮ್ಮ ಎಡಗೈ ಮೇಲೆ ಬಿದ್ದರೆ ಆ ವ್ಯಕ್ತಿಯೂ ಕೆಟ್ಟ ಅದೃಷ್ಟವನ್ನು ಎದುರಿಸುತ್ತಾನೆ ಹಣವನ್ನು ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ.

4.ಹಲ್ಲಿಯೂ ಹೊಟ್ಟೆಯ ಮೇಲೆ ಬಿದ್ದರೆ ಅಂತಹ ವ್ಯಕ್ತಿಯು ಅನೇಕ ತೊಂದರೆಗಳನ್ನು ಎದುರಿಸಬೇಕಾಗುವುದು.
ಹಲ್ಲಿಯೂ ಎದೆಯ ಭಾಗಕ್ಕೆ ಬಿದ್ದರೆ,ಅಂತವರಿಗೆ ಸೇವಿಸಲು ಒಳ್ಳೆಯ ಆಹಾರ ಸಿಗುವುದು.
ಹಲ್ಲಿಯೂ ಯಾರದಾದರೂ ಮೊಣಕಾಲಿನ ಮೇಲೆ ಬಿದ್ದರೆ ಆ ವ್ಯಕ್ತಿಯ ಸಂತೋಷವನ್ನು ಮುಂದೆ ತಮ್ಮ ಭವಿಷ್ಯದಲ್ಲಿ ಗಳಿಸುಳುತ್ತಾರೆ ಎನ್ನುವ ಶುಭ ಸೂಚನೆಯನ್ನು ತಿಳಿಸುತ್ತದೆ.

5.ಹಲ್ಲಿಯೂ ವ್ಯಕ್ತಿಯೂ ಬಲಗಡೆಯ ಕೆನ್ನೆಯ ಮೇಲೆ ಬಿದ್ದರೆ ಅಂತಹ ವ್ಯಕ್ತಿಯ ಜೀವನದಲ್ಲಿ ಐಷಾರಾಮಿ ಜೀವನವನ್ನು ಪಡೆದು ಸಂತೋಷವಾಗಿ ಜೀವಿಸುತ್ತಾನೆ.
ಹಲ್ಲಿಯೂ ವ್ಯಕ್ತಿಯ ಎಡ ಕೆನ್ನೆಯ ಮೇಲೆ ಬಿದ್ದರೆ ಅದು ಅವರ ಆರೋಗ್ಯವನ್ನು ಹಾಳು ಮಾಡುವ ಸಂಕೇತವನ್ನು ಸೂಚಿಸುತ್ತದೆ.ಆದ್ದರಿಂದ ಆ ರೀತಿ ಇರುವವರು ಜಾಗರೂಕತೆಯಿಂದ ಇರಬೇಕು.

 

 

7.ಹಲ್ಲಿಯೂ ನಿಮ್ಮ ಎಡಗಡೆಯ ಕೈ ಮೇಲೆ ಬಿದ್ದು ಅದೇ ಕೈ ಮೇಲೆ ಹತ್ತಿದರೆ ಆ ವ್ಯಕ್ತಿಯು ಒಳ್ಳೆಯ ಸ್ಥಾನ ಮಾನ, ಮತ್ತು ಹಣವನ್ನು ತಮ್ಮ ವೃತ್ತಿಯಲ್ಲಿ ಗಳಿಸುತ್ತಾರೆ.
ಜ್ಯೋತಿಶ್ಶಾಸ್ತ್ರದ ಪ್ರಕಾರ ಹಲ್ಲಿಯು ಮಹಿಳೆಯ ಎಡಗೈ ಮೇಲೆ ಬಿದ್ದರೆ ಅವರಿಗೆ ಹಣ ದೊರೆಯುವುದು.
ಹಲ್ಲಿಯೂ ಮಹಿಳೆಯ ಶರೀರದ ಬಲಗಡೆ ಭಾಗಕ್ಕೆ ಬಿದ್ದರೆ ಅವರ ಪರಿವಾರವು ವರಮಾನದಲ್ಲಿ ಕುಸಿತ ಕಾಣುವುದು.

8.ಹಿಂದೂ ಧರ್ಮದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ನಂಬಿಕೆ ಮತ್ತು ಶಕುನಗಳನ್ನು ತುಂಬ ಹಳೆಯ ಕಾಲದಿಂದಲೇ ಬಂದಿದೆ. ಕೆಲವು ಜನರು ಇಂದು ಅಂತವರನ್ನು ಮೂಢನಂಬಿಕೆ ಎಂದು ಕರೆಯುತ್ತಾರೆ.ಆದರೆ ಇನ್ನೂ ಕೆಲವರು ಇವುಗಳನ್ನು ನಂಬುತ್ತಾರೆ.ಆದ್ದರಿಂದ ಇವೆಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top