fbpx
ಹೆಚ್ಚಿನ

1000 ಸ್ಯಾನಿಟರಿ ಪ್ಯಾಡ್ ಮೇಲೆ ಸಹಿ ಮಾಡಿ GST ತೆಗೆಯಲು ಮೋದಿಗೆ ಪಾರ್ಸೆಲ್ ಕಳುಹಿಸಲಿರುವ ವಿದ್ಯಾರ್ಥಿಗಳು.

1000 ಸ್ಯಾನಿಟರಿ ಪ್ಯಾಡ್ ಮೇಲೆ ಸಹಿ ಮಾಡಿ GST ತೆಗೆಯಲು ಮೋದಿಗೆ ಪಾರ್ಸೆಲ್ ಕಳುಹಿಸಲಿರುವ ವಿದ್ಯಾರ್ಥಿಗಳು.

 

ನೈರ್ಮಲ್ಯ ಕರವಸ್ತ್ರದ (ಸ್ಯಾನಿಟರಿ ನಾಪ್ಕಿನ್) ಮೇಲೆ 12 ಪ್ರತಿಶತ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಅನ್ನು ತೆಗೆದುಹಾಕಲು ಪ್ರಧಾನಿ ಮೋದಿಗೆ ಒತ್ತಾಯಿಸಲು ಮಧ್ಯಪ್ರದೇಶದ ಗ್ವಾಲಿಯರ್ ವಿದ್ಯಾರ್ಥಿಗಳು ಸ್ಯಾನಿಟರಿ ನಾಪ್ಕಿನ್ ಮೇಲೆ ಸಂದೇಶಗಳನ್ನು ಬರೆಯುವ ಮೂಲಕ ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ. 1,000 ಕ್ಕೂ ಹೆಚ್ಚು ನಾಪ್ಕಿನ್ಗಳು ಸಂಗ್ರವಾದ ಬಳಿಕ ಪ್ರಧಾನಿಗೆ ಅವುಗಳನ್ನು ಕಳುಹಿಸಲಿದ್ದಾರೆ.

 

 

ನೈರ್ಮಲ್ಯ ಕರವಸ್ತ್ರವನ್ನು ಉಚಿತವಾಗಿ ನೀಡಬೇಕು ಎಂದು ಕೂಡ ಜಾಗೃತಿ ಅಭಿಯಾನದ ನಡೆಯುತ್ತಿದ್ದು ಜನವರಿ 4 ರಂದು ಪ್ರಾರಂಭವಾದ ಪ್ರಚಾರವು ಈಗಾಗಲೇ ಸಾಮಾಜಿಕ ಮಾಧ್ಯಮದ ಮೂಲಕ ಜನರಿಂದ ಹೆಚ್ಚು ಬೆಂಬಲವನ್ನು ಪಡೆದಿದೆ. ದೇಶ್ಯಾದ್ಯಂತ ಬೆಂಬಲ ವ್ಯಕ್ತವಾಗಿದೆ.

 

 

ಇದು ಕೇವಲ ಗ್ವಾಲಿಯರ ಮಹಿಳೆಯರ ಜಾಗೃತಿ ಅಭಿಯಾನ ಅಲ್ಲ ಆದರೆ ಇಡೀ ರಾಷ್ಟಕ್ಕೇ ಅಗತ್ಯವಾಗಿದೆ ಎಂದರು. ಜಾಗೃತಿ ಅಭಿಯಾನ ನಿರತ ವಿದ್ಯಾರ್ಥಿಗಳು ಜಿಎಸ್ಟಿ ತೆಗೆದುಹಾಕುವುದರ ಮೂಲಕ ಖರ್ಚನ್ನು ತಗ್ಗಿಸುವ ಅಥವಾ ಉಚಿತವಾಗಿ ವಿತರಿಸಬಲ್ಲ ಏಕೈಕ ನಾಯಕ ಪ್ರಧಾನಿ ಮೋದಿ ಎಂದು ಅವರು ನಂಬಿದ್ದಾರೆ.

 

 

ನೈರ್ಮಲ್ಯ ಕರವಸ್ತ್ರವನ್ನು 12 ಶೇಕಡಾ ಜಿಎಸ್ಟಿ ಅಡಿಯಲ್ಲಿ ಇರಿಸಲಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಸ್ಯಾನಿಟರಿ ನಾಪ್ಕಿನ್ ಬದಲು ಇತರೆ ವಸ್ತುಗಳನ್ನು ಬಳಸುತ್ತಾರೆ, ಇದರಿಂದ ಅವರ ಆರೋಗ್ಯಕ್ಕೆ ಮಾರಕವಾಗಬಹುದು. ಸಬ್ಸಿಡಿ ನೀಡುವ ಬದಲು ಇದನ್ನು ಐಷಾರಾಮಿ ಐಟಂ ಅಡಿಯಲ್ಲಿ ಇರಿಸಲಾಗಿದೆ. ಸರಕಾರಕ್ಕೆ ಮಾರ್ಚ್ 3 ರೊಳಗೆ 1,000 ಪ್ಯಾಡ್ಗಳನ್ನು ಕಳುಹಿಸುವ ಗುರಿಯನ್ನು ಈ ಅಭಿಯಾನದ ಹೊಂದಿದೆ ಎಂದು ವಿದ್ಯಾರ್ಥಿಗಳಾದ ಹರಿ ಮೋಹನ್ ಹೇಳಿದರು.

ವಿದ್ಯಾರ್ಥಿಗಳ ಕರೆಗೆ ಓಗೊಟ್ಟು ಪ್ರಧಾನಿ ಮೋದಿಯವರು ತೆರಿಗೆ ವಿನಾಯತಿ ನೀಡಿದರೆ ಮಹಿಳೆಯರಿಗೆ ಸಹಾಯವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top