ವಿಶೇಷ

ಮಾಟವಿಲ್ಲ, ತಂತ್ರವಿಲ್ಲ, ಮಂತ್ರವಿಲ್ಲ ಬೆರಳ್ ಸನ್ನೆಯಲ್ಲೇ ಪ್ರಾಣಿ ಪವಡಿಸುವ ಪುರುಷ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಾಟವಿಲ್ಲ, ತಂತ್ರವಿಲ್ಲ, ಮಂತ್ರವಿಲ್ಲ ಬೆರಳ್ ಸನ್ನೆಯಲ್ಲೇ ಪ್ರಾಣಿ ಪವಡಿಸುವ ಪುರುಷ !

ಪ್ರಾಣಿ ಪವಡಿಸುವ ಪುರುಷ…

ಈತ ದೂರದಲ್ಲಿ ನಿಂತು ಚುಚ್ಚು ಮದ್ದನ್ನು ‘ಇಂಜಕ್ಷನ್ ಗನ್’ ಮೂಲಕ ಪ್ರಾಣಿಗಳಿಗೆ ಶೂಟ್ ಮಾಡುವುದಿಲ್ಲ. ಅಥವಾ ಪುಡಿ ತೂರುವುದಿಲ್ಲ. ಮಾಟವಿಲ್ಲ, ತಂತ್ರವಿಲ್ಲ, ಮಂತ್ರವಿಲ್ಲ… ತನ್ನ ಬಲಗೈ ಬೆರಳುಗಳನ್ನು ಆಡಿಸುತ್ತಾ… ಹೋದಂತೆ… ಪ್ರಾಣಿಗಳು ನಿಧಾನವಾಗಿ ಪವಡಿಸುತ್ತವೆ. ಸಿಂಹ, ಜಿಂಕೆ, ಹೆಗ್ಗಣ, ಆನೆ, ಕುರಿಮಂದೆ, ಅಳಿಲು… ಹೀಗೆ ಎಲ್ಲವೂ ಇವನ ಬೆರಳ್ ಸನ್ನೆಗೆ ತಾಚಿಮಾಡುತ್ತವೆ.

 

 

ಇವನೇ ಪಳಗಿಸಿದ ಪ್ರಾಣಿಗಳು ಇವನ ಸನ್ನೆಯನ್ನು ಅರಿತು ನಿದ್ದೆಗೆ ಜಾರುತ್ತಿರಬೇಕು… ಸರಿಯಾಗಿ ನೋಡಿ ಬರೆಯಿರಿ!

ಇಲ್ರೀ…ಇವನು ಜೀವನದಲ್ಲಿ ಕಂಡೇ ಇರದ ಅಮೆರಿಕದ ಮೃಗಾಲಯಕ್ಕೆ ಕರೆದೊಯ್ದು, ಪ್ರಾಣಿಗಳನ್ನು ಮಲಗಿಸುವಂತೆ ಸೂಚಿಸಲಾಯಿತು. ಬೆರಳು ಆಡಿಸುತ್ತಾ ಹೋದಂತೆ ಒಂದೊಂದೇ … ಪ್ರಾಣಿಗಳನ್ನು ಈತ ಮಲಗಿಸಿಬಿಟ್ಟ.

 

 

ಪರ್ಮನೆಂಟ್ ಆಗಿ ಮಲಗುತ್ತವಾ?

ಇಲ್ಲ. ಇವನು ದೂರ ಸರಿಯುತ್ತಾ ಹೋದಂತೆ… ಅವು ಎಚ್ಚರಗೊಂಡು ಎಂದಿನ ಚಟುವಟಿಕೆಯಲ್ಲಿ ತೊಡಗುತ್ತವೆ. ಹಾಗೆಂದು ಎಲ್ಲಾ ವೇಳೆಯಲ್ಲೂ ‘ಪವಡಿಸುವ’ ಪುರುಷನಾಗಿಲ್ಲ. ಫೇಲ್ ಕೂಡ ಆಗಿದ್ದಾನೆ. ಗಮನ ತಪ್ಪಿದಾಗ ಹೀಗಾಗುವುದೆಂದು ಹೇಳುವನು. ಆದರೆ ಬಹುತೇಕ ಪ್ರಯೋಗಗಳಲ್ಲಿ ಸಫಲವಾಗಿದ್ದಾನೆ.

ಕಾಂಜ್ವಾಸೆನ್ಸಿ ಹೆಸರಿನ ಈತನಿರುವುದು ಜಪಾನ್‍ನಲ್ಲಿ. ಈತನ ಬೆರಳ್‍ವಿದ್ಯೆಗೆ ಚಿ ಅಥವಾ ಕ್ವಿ ಎನ್ನುತ್ತಾರೆ. ಇದೊಂದು ಪುರಾತನ ವಿದ್ಯೆಯಂತೆ. ಅದರಲ್ಲಿ ಕಾಂಜ್ವಾದು ಪಳಗಿದ ‘ಹಸ್ತ’. ಅಲ್ಲ ಪಳಗಿದ ಬೆರಳು!

 

 

ಪ್ರಾಣಿಗಳ ಮೇಲೆ ವರ್ಕ್ ಆಗುವ ಇವನ ಬೆರಳ್‍ವಿದ್ಯೆ ಮನುಷ್ಯರ ಮೇಲೂ ಆಗುತ್ತಾ?

ಗೊತ್ತಿಲ್ಲ. ಮನುಷ್ಯರಿಗೆ ಬೆರಳ್ ತೋರಿಸಿದರೇ…ಹಸ್ತನೇ ನುಂಗಿಬಿಡುವ ಅಪಾಯಗಳಿವೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top