ದೇವರು

ಮಹಾಶರಣೆ ಮಹಾಮಾತೆ ಶ್ರೀ ದಾನಮ್ಮ ದೇವಿಯ ಮಹಿಮೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಹಾಶರಣೆ ಮಹಾಮಾತೆ ಶ್ರೀ ದಾನಮ್ಮ ದೇವಿಯ ಮಹಿಮೆ.

 

ಸಂತ ಶರಣರ ಮಹಾನ ನಾಡು ನಮ್ಮದು. ಇವರ ಸಾಲಿನಲ್ಲಿ ಬರುವ 12 ನೇ ಶತಮಾನದ ಶ್ರೀ ದಾನಮ್ಮದೇವಿ ತಮ್ಮ ದಾನ ಧರ್ಮ ದಿಂದ ಕೋಟ್ಯಂತರ ಜನರ ತಾಯಿಯಾಗಿ ಗುಡ್ಡಾಪುರದಲ್ಲಿ ನೆಲೆಸಿದ್ದಾರೆ. 12 ನೆ ಶತಮಾನದಲ್ಲಿ ‘ಲಿಂಗಮ್ಮ’ ಎಂಬ ಒಬ್ಬ ಶರಣೆ. ಅವಳು ವೀರಭದ್ರಸ್ವಾಮಿಯ ಪರಮ ಭಕ್ತಳು.

 

 

ಮಹಾರಾಷ್ಟ್ರದ ರಾಜ್ಯದ  ಉಮರಾಣಿ ಹಳ್ಳಿಯಲ್ಲಿ ಅಲ್ಲಿ ಅನಂತರಾಯ ಮತ್ತು ಸಿರಸಮ್ಮ ಜನಿಸಿದ ಲಿಂಗಮ್ಮ. ಕೃಷಿ ಮತ್ತು ಹೈನುಗಾರಿಕೆಯೇ ಆಧಾರವಾಗಿದ್ದ ಮಧ್ಯಮ ವರ್ಗದ ಕುಟುಂಬ. ಸುಮಾರು ವರ್ಷಗಳ ಕಾಲ ಈ ದಂಪತಿಗಳಿವೆ ಮಕ್ಕಳಾಗಿರಲಿಲ್ಲ. ದೇವರಲ್ಲಿ ಪರಮ ಭಕ್ತಿಯನ್ನು ಹೊಂದಿದ ಈ ದಂಪತಿಗಳು ದೇವರ ಆಶೀರ್ವಾದ ಇವರಿಗೆ ಹೆಣ್ಣು ಮಗುವನ್ನು ಕರುಣಿಸಿತು.

 

 

ಲಿಂಗಮ್ಮ ಕಲ್ಯಾಣ ಸಮೀಪದ ಬಿಲ್ವವನದಲ್ಲಿ 21 ದಿನಗಳ ಕಾಲ ಬಡವರ ಸೇವೆ ಮಾಡುತ್ತ ಕಾಲ ಕಳೆಯುತ್ತಾಳೆ. ಬಸವಣ್ಣ ನವರು ಇವರ ಸೇವೆಯನ್ನು ವಿಕ್ಷಿಸಿ ಬೆರಗಾಗಿ ಸಂತಸ ಪಡುತ್ತಾರೆ. ಬಸವಣ್ಣನವರ ಮಹಾಮನೆ ಪ್ರವೇಶಿಸಿ ಲಿಂಗಪೂಜೆಯೋಂದಿಗೆ ನಿತ್ಯ ಜಂಗಮರ ಸೇವೆಯನ್ನು ಮಾಡುತ್ತ ಕಾಯಕ ದಾಸೋಹ ದಲ್ಲೆ ಪರಮಾತ್ಮನನ್ನು ಕಾಣುತ್ತಾಳೆ. ಈ ಎಲ್ಲ ಕಾಯಕ ದಾಸೋಹ ನೋಡಿದ ಬಸವೇಶ್ವರ ನೀನು ಕೇವಲ ಲಿಂಗಮ್ಮ ಅಲ್ಲ ದಾನ ಸ್ವರೂಪಿ. ದಾನ ದಾಸೋಹಿ. ದಾನೇಶ್ವರಿ ಎಂದು ಕೂಗಿ ಹೇಳುತ್ತಾರೆ. ಅಂದಿನಿಂದ ಈ ಲೋಕಕ್ಕೆ ದಾನ ದಾಸೋಹಿ ದಾನಮ್ಮ ದೇವಿ ಈ ಲೋಕಕ್ಕೆ ಪರಿಚಯಲಾಗುತ್ತಾಳೆ.

 

 

ಕಾಂಬೆಯಿಂದ ಕೂಡಲಸಂಗಮಕ್ಕೆ ಹಿಂತಿರುಗಿ ಬರುವ ದಾನಮ್ಮ ಅಲ್ಲಿ ತನ್ನ ಮಾತಾ – ಪಿತೃಗಳು ಇಹಲೋಕ ಯಾತ್ರೆ ಮುಗಿಸಿದ ವಿಷಯ ಕೇಳುತ್ತಾಳೆ. ತತಕ್ಷಣ ಗುಡ್ಡಾಪುರಕ್ಕೆ ಬಂದು ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಹೀಗೇ ದಿನಗಳು ಸಾಗುತ್ತಿದ್ದಾಗ ಒಮ್ಮೆ ದಾನಮ್ಮ ತನ್ನ ಶಿವ ಪೂಜೆ ಮುಗಿದ ನಂತರ ಯಾವುದೋ ಒಂದು ಅಂತರ್ಶಕ್ತಿಯ ಕರೆಯನ್ನು ಆಲಿಸಿ, ತಾನು ಇಲ್ಲಿಗೆ ಬಂದ ಕಾರ್ಯ ಮುಗಿಯಿತು ಎಂದು ಹೇಳಿ ಸಮಾಧಿ ಸಿದ್ಧಪಡಿಸುವಂತೆ ಸೂಚಿಸುತ್ತಾಳೆ.

ಬಡವರ ಸೇವೆ ಮಾಡುತ್ತ ರಾಷ್ಟ್ರ ಸುತ್ತಿದ ದಾನಮ್ಮ ದೇವಿಯು ತನ್ನ ಕೊನೆಯ ದಿನಗಳನ್ನು ಗುಡ್ಡಾಪುರದಲ್ಲಿ ಕಳೆಯುತ್ತಾರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಭಕ್ತರಿಗೆ ಕನ್ನಡ ಮತ್ತು ಮರಾಠಿ ಸಂಸ್ಕೃತಿಯ ಸೌಹಾರ್ದದ ಸೇತುವೆಯಾಗುತ್ತಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top