fbpx
ಸಮಾಚಾರ

ಕಲ್ಗಲಾವಿದ- ಲಗೋರಿ ಆಟಕ್ಕೆ ಜೋಡಿಸಿದ ಕಲ್ಲುಗಳು ಕೂಡ ಕಲೆಯಾಗಲಿದೆ.

ಕಲ್ಗಲಾವಿದ- ಲಗೋರಿ ಆಟಕ್ಕೆ ಜೋಡಿಸಿದ ಕಲ್ಲುಗಳು ಕೂಡ ಕಲೆಯಾಗಲಿದೆ.

ಕಲ್ಗಲಾವಿದ

ಲಗೋರಿ ಆಟಕ್ಕೆ ಜೋಡಿಸಿದ ಕಲ್ಲುಗಳು ಕೂಡ ಕಲೆಯಾಗಲಿದೆ.

ಚಿತ್ರಕಲಾಪರಿಷತ್ತಿನವರು ಹೇಳಿದರಾ?

ಇಲ್ಲ. ಮೈಕೆಲ್ ಗ್ರಾಬ್ ಅಭಿಪ್ರಾಯವಿದು.

 

 

ಯಾರವನು?

ಅಮೆರಿಕದ ಮೈಕೆಲ್ ಗ್ರಾಬ್ ‘ಕಲ್ಗಲಾವಿದ’. ಈತ ತೊಣಚು, ಬೆಣಚು, ನುಣುಪು, ಬಳಪ, ಗ್ರಾನೈಟ್… ಹೀಗೆ ಸಿಕ್ಕ ಕಲ್ಲುಗಳನ್ನು ಸಮತೋಲನದಿಂದ ನಿಲ್ಲಿಸಬಲ್ಲ. ಹರಿವ ಹೊಳೆ ಸಮೀಪವೂ ಅಂಟು ಹಚ್ಚದೆ ‘ಲಗೋರಿ’ ಗೋಪುರ ಕಟ್ಟುವ ಕಲೆ ಇವನಿಗೆ ತಿಳಿದಿದೆ.

ಇವನ ಈ ಹುಡುಗಾಟವು ಗುರುತ್ವಾಕರ್ಷಣ ಶಕ್ತಿಗೆ ಸವಾಲಾಗಿದ್ದು, ಇವನ ‘ಸ್ಟೋನ್ ಬ್ಯಾಲೆನ್ಸಿಂಗ್’ ಬುದ್ಧಿಗೆ ಭುವಿ ಮಣಿದು ‘ಭೌತಶಾಸ್ತ್ರ’ ಶರಣಾದಂತಿದೆ. ‘ಗ್ರಾವಿಟಿ ಗ್ಲೂ’ ಹೆಸರಿನ ಈ ಕಲೆಯನ್ನು 5 ವರ್ಷಗಳಿಂದ ಅಭ್ಯಾಸ ಮಾಡಿ ಪಳಗಿದ್ದಾನೆ. ಅಪೇಕ್ಷೆ ಪಟ್ಟವರಿಗೆ ಗುರುವಂತೆ ಕಲಿಸುತ್ತಿದ್ಧಾನೆ. ವಿಶ್ವದ ಏಕಮಾತ್ರ ಪರಿಣಿತ ಗ್ರಾವಿಟಿ ಗ್ಲೂ ಆರ್ಟಿಸ್ಟ್ ಇವನು.

 

 

ವಸ್ತುಗಳು ಕೂರಲು ಮೂರು ಬಿಂದುಗಳು ಸಾಕಂತೆ. ಅದನ್ನು ಗುರುತಿಸಿ, ಜೋಡಿಸಿದರೆ ಭೂ ಸೆಳೆತಕ್ಕೂ ಬೀಳದು ಎಂಬುದು ಗ್ರಾಬ್ ಅರಿತಿರುವ ಸತ್ಯ. ಇದು ಎಲ್ಲರಿಗೂ ಗೊತ್ತು. ಆದರೆ ಅಳವಡಿಸುವಲ್ಲಿ ವಿಫಲರಾಗಿದ್ದಾರೆ. ಗ್ರಾಬ್‍ನ ಕಲ್ಗಲೆ ಕಲ್ಲಾಟವಿರಬಹುದು-ಕಳ್ಳಾಟವಲ್ಲ.

ಗ್ರಾಬ್ ನಮ್ಮಲ್ಲಿಗೂ ಬಂದರೇ.

 

 

ಒನ್ ಮಿನಿಟ್  ಗೇಮ್ ಅಲಿಯಾಸ್ ಸೂಪರ್ ಮಿನಿಟ್‍ಗಳಲ್ಲಿ ಭಾಗವಹಿಸಿದರೆ ಇವನಿಗೇ ಪ್ರಶಸ್ತಿ ಖಚಿತ. ಇವನು ಬರುವ ಸೂಚನೆ ಹಿಡಿದೋ ಏನೋ… ಚಿತ್ರನಟ ಗಣೇಶ್ ಸೂಪರ್ ಮಿನಿಟ್‍ನಿಂದ ಸೂಪರ್ ಆಗಿ ಕಣ್ಮರೆಯಾಗಿರಬೇಕು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top