fbpx
ಸಮಾಚಾರ

ಏನದು ಹೆಡ್ ಹೋಕ್ಸ್ ಆಟ? ಇವರನ್ನು ತಲೆಹೋಕರು ಎನ್ನಲು ಅಡ್ಡಿಯಿಲ್ಲ! ಅಥವಾ ಹಾಗೆಂದರೆ ಅವರಿಗೆ ಕೋಪವೂ ಬಾರದು.

ಏನದು ಹೆಡ್ ಹೋಕ್ಸ್ ಆಟ? ಇವರನ್ನು ತಲೆಹೋಕರು ಎನ್ನಲು ಅಡ್ಡಿಯಿಲ್ಲ! ಅಥವಾ ಹಾಗೆಂದರೆ ಅವರಿಗೆ ಕೋಪವೂ ಬಾರದು.

‘ತಲೆ ಹೋಕರು’

ಏನದು ಹೆಡ್ ಹೋಕ್ಸ್ ಆಟ?

ಇವರನ್ನು ತಲೆಹೋಕರು ಎನ್ನಲು ಅಡ್ಡಿಯಿಲ್ಲ! ಅಥವಾ ಹಾಗೆಂದರೆ ಅವರಿಗೆ ಕೋಪವೂ ಬಾರದು.

ಯಾಕೆ ಅವರಿಗೆ ಅವರಿಗೆ ಕನ್ನಡ ಬರುವುದಿಲ್ವಾ?

 

 

ಹೌದು! ಆದರೆ ಆ ಕಾರಣಕ್ಕೆ ಅವರನ್ನು ತಲೆ ಹೋಕರು ಎನ್ನುತ್ತಿಲ್ಲ. ಬದಲಿಗೆ ಅವರು ಆಡುತ್ತಿರುವ ಆಟ ‘ತಲೆಊoಚಿx’ ಆಗಿದೆ. ಅಂದರೆ ‘ ಹೆಡ್ ಹೋಕ್ಸ್’

ಏನದು ಹೆಡ್ ಹೋಕ್ಸ್ ಆಟ?

ಎರಡು ಮೀಟರ್ ಉದ್ದ, 16 ಸೆಂ.ಮಿ. ಅಗಲ. ಎರಡು ಸೆಂ.ಮೀ. ದಪ್ಪ ಮತ್ತು 3-4 ಕಿಲೋ ಗ್ರಾಂಗಳ ತೂಕದ ಹಲಗೆ ತಲೆಯಮೇಲೆ ಹೊರಬೇಕು. ಎದುರಾಳಿ ಆಟಗಾರನಿಗೂ ಡಿಟೋ…ಡಿಟೋ…. ಅಲ್ಲದೆ ಇಬ್ಬರೂ ತಮ್ಮ ತಲೆಯ ಮೇಲಿನ ಹಲಗೆಯನ್ನು ಬೀಳಿಸಿಕೊಳ್ಳದೆ ಪ್ರತಿಸ್ಪರ್ಧಿಯ ಹಲಗೆಯನ್ನು ಕೆಡವಬೇಕು. ಹೀಗಾಡುವಾಗ ಕೈಗಳನ್ನು ಬಳಸಬಾರದು-ನಿಯಮ ಸರಳ. ನೋಡುಗರಿಗೆ ಮೋಜು ಆಡುವವರಿಗೆ ಅಪಾಯವಿದೆ. ಅದರಲ್ಲೂ ನೆತ್ತಿಯ ಮೇಲಿನ ಬ್ಯಾಲೆನ್ಸ್ ಇಲ್ಲದಿದ್ದಾಗ, ಹಲಗೆ ಕಾಲಿನ ಮೇಲೆ ಬಿದ್ದರೆ ಬೆರಳಿನ ಮೂಳೆಗಳು ಲಟಕ್ ಎನ್ನಲಿದೆ. ಡಬ್ಬಲ್ಸ್ ಆಡುವಾಗ ಇನ್ನಷ್ಟು ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಇನ್ನಷ್ಟು ಮೂಳೆಗಳು ಮುರಿದಾವು. ಹಗೆತನಕ್ಕಿಂತಲೂ ‘ಹಲಗೆತೋಲನ’ವಿದ್ದವರು ಗೆದ್ದಾರು.

 

 

ಈ ಚೇಷ್ಟೆಯಾಟಕ್ಕೆ ‘ವುಡ್‍ಕಾಪ್ಫ್’ ಎನ್ನುವ ಹೊಸ ಹೆಸರೂ ಇದೆ.ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್ ಹಾಗೇ ಮಿಕ್ಸೆಡ್ ಡಬಲ್ಸ್‍ಗಳಲ್ಲಿ ಈ ಕ್ರೀಡೆಯನ್ನು ಆಡಬಹುದು.

‘ತಲೆ ಪ್ರತಿಷ್ಠೆ’ವುಳ್ಳವರು ಈ ಆಟವಾಡಲು ಝೆಕ್ ಗಣರಾಜ್ಯಕ್ಕೆ ತೆರಳಬೇಕು. ಅಲ್ಲಿ ‘ವುಡ್‍ಕಾಪ್ಫ್’ ರಾಷ್ಟ್ರಮಟ್ಟದ ಕ್ರೀಡೆಯಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top