ಆರೋಗ್ಯ

ಕಿವಿಯಲ್ಲಿನ ತುರಿಕೆಯನ್ನು ತಾಳಲಾರದೆ ಇದನ್ನು ಉಪಯೋಗಿಸುವವರೇ! ಹುಷಾರ್

ಕಿವಿಯಲ್ಲಿನ ತುರಿಕೆಯನ್ನು ತಾಳಲಾರದೆ ಇದನ್ನು ಉಪಯೋಗಿಸುವವರೇ! ಹುಷಾರ್

 

 

ಕಿವಿಯನ್ನು ಕ್ಲಿನ್ ಮಾಡಲು ಕಾಟನ್ ಬಡ್ಸ್ ಉಪಯೋಗಿಸಬೇಡಿ
ಕಿವಿಯಲ್ಲಿ ಸಂಗ್ರಹವಾದ ಇಯರ್ ವ್ಯಾಕ್ಸ್ ಇದು ನಿಜಕ್ಕೂ ಕಿವಿಗೆ ಒಳ್ಳೆಯದು.ಕಿವಿಯ ಹೊರ ಕಾಲುವೆಯ ಗ್ರಂಥಿಗಳು ಸ್ರವಿಸುವ ಮೇಣದಂತಹ ವಸ್ತು ಇದು . ಇದು ಕಿವಿಯೊಳಗಡೆ ಸೇರಿಕೊಳ್ಳುವಂತಹ ಧೂಳನ್ನು ತಡೆಗಟ್ಟಿ ಕಿವಿಯ ತಮಟೆಗೆ ರಕ್ಷಣೆ ನೀಡುತ್ತದೆ ಇದು ಸಾಮಾನ್ಯವಾಗಿ ಒಣಗಿ ಉದುರಿ ಹೋಗುತ್ತದೆ.
ಆದರೆ ಇದು ಹೆಚ್ಚಾದರೆ ತುರಿಕೆ ಉಂಟಾಗುತ್ತದೆ ಆಗ ತುರಿಕೆ ತಾಳಲಾರದೇ ಕಿವಿಯಲ್ಲಿ ಹೆಚ್ಚಾದ ವ್ಯಾಕ್ಸ್ ನ್ನು ಕ್ಲಿನ್ ಮಾಡಲು ಇತೀಚಿಗೆ ಕಾಟನ್ ಬಡ್ಸ್ ಬಳಸುತ್ತೇವೆ .\

 

 

 

ಆದರೆ ಇದರಿಂದ ಕಿವಿ ಸ್ವಚ್ಛವಾಗುವ ಬದಲಾಗಿ ಅಪಾಯ ಜಾಸ್ತಿ . ಏಕೆಂದರೆ ಇದು ಕಿವಿಯ ವ್ಯಾಕ್ಸ್ ನ್ನು ಇನ್ನಷ್ಟು ಒಳಗಡೆ ತಳ್ಳುತ್ತದೆ , ಇದರಿಂದ ಕಿವಿ ನೋವು , ಕಿವುಡುತನ , ಕಿವಿ ಮುಚ್ಚಿಹೋದಂತಹ ಅನುಭವ ,ಸರಿಯಾಗಿ ಕೇಳಿಸದಿರುವುದು ಗಂಭೀರ ಸಮಸ್ಯೆಗೆ ಕಾರಣವಾಗುವುದು .

ಕಿವಿಯನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸಲು ಸಲ್ಪ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ( ಉಗರು ಬೆಚ್ಚಗಿರಲಿ ) ಕಿವಿಯಲ್ಲಿ ಹಾಕಿ ಸಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರನ್ನು ಕಿವಿಯಲ್ಲಿ ಹಾಕಿ ಕಿವಿಯನ್ನು ಅಲುಗಾಡಿಸಿ ನಂತರ ನೆಲದ ಕಡೆ ಬಾಗಿಸಿ ಕಿರು ಬೆರಳಿನಿಂದ ತೆಳುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ , ಅಥವಾ ಎಲ್ಲಾ ಮೆಡಿಕಲ್ ನಲ್ಲಿ ಗ್ಲಿಸರಿನ್ ಸಿಗುತ್ತೆ
ಇದು ಕಿವಿಯಲ್ಲಿರುವ ಇಯರ್ ವ್ಯಾಕ್ಸ್ ನ್ನು ಮೃದುಗೊಳಿಸುತ್ತದೆ ಎರೆಡು ಮೂರು ಹನಿಗಳನ್ನು ಕಿವಿಯಲ್ಲಿ ಹಾಕಿ ಸ್ವಚ್ಛಗೊಳಿಸಿ

 

 

ವಿಪರೀತ ನೋವಿದ್ದರೆ ಇಯರ್ ಫೋನ್ ಅಥವಾ ಹೆಡ್ ಫೋನ್ ಬಳಸಬೇಡಿ ಏಕೆಂದರೆ ಇದರಿಂದ ಬರುವ ವಿಪರೀತ ಶಬ್ದ ಕಿವಿ ತಮಟೆಗೆ ಹಾನಿಯುನ್ನುಂಟು ಮಾಡುತ್ತದೆ .

ನ್ಯೂಯಾರ್ಕ್ ಮೆಡಿಕಲ್ ಸೆಂಟರ್ ನ ಸ್ಟೀಪನ್ ಹೇಳುವ ಪ್ರಕಾರ ಯಾವುದೇ ಕಾರಣಕ್ಕೂ ಬಡ್ಸ್ ಉಪಯೋಗಿಸಬೇಡಿ ಇದು ಅಪಾಯಕಾರಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top